Advertisement

Belthangady ಅ. 16ರಂದು ಅಟ್ಟಳಿಗೆ ಮುಹೂರ್ತ: ವೇಣೂರು ಮಹಾಮಸ್ತಕಾಭಿಷೇಕ: ಮನವಿಪತ್ರ ಬಿಡುಗಡೆ

10:44 PM Sep 25, 2023 | Team Udayavani |

ಬೆಳ್ತಂಗಡಿ: ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ ಎಂದು ತನ್ನ ಬದುಕಿನಲ್ಲಿ ಸಾಧಿಸಿ ತೋರಿಸಿದ ಭಗವಾನ್‌ ಬಾಹುಬಲಿಯ ತ್ಯಾಗ ಸಂದೇಶ ಸಾರ್ವಕಾಲಿಕ ಮೌಲ್ಯ ಹೊಂದಿದೆ ಎಂದು ಕಾರ್ಕಳ ಜೈನಮಠದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

Advertisement

2024ರ ಫೆಬ್ರವರಿ 22ರಿಂದ ಮಾರ್ಚ್‌ 1ರ ವರೆಗೆ ನಡೆಯಲಿರುವ ವೇಣೂರಿನ ಭಗವಾನ್‌ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಪೂರ್ವಭಾವಿಯಾಗಿ ವೇಣೂರಿನಲ್ಲಿ ರವಿವಾರ ಮನವಿಪತ್ರ ಬಿಡುಗಡೆ ಗೊಳಿಸಿ ಅವರು ಆಶೀರ್ವಚನ ನೀಡಿದರು.

ಶಿಲ್ಪಕಲಾ ವೈಭವಕ್ಕೆ ಕರ್ನಾಟಕವು ದೇಶದಲ್ಲೇ ಪ್ರಥಮ ಸ್ಥಾನ ಹೊಂದಿದೆ. ನಮ್ಮ ಭವ್ಯ ಇತಿಹಾಸ, ಪರಂಪರೆ, ನಂಬಿಕೆ-ನಡವಳಿಕೆಗಳು, ಧಾರ್ಮಿಕ ಸಂಪ್ರದಾಯಗಳನ್ನು ಶ್ರದ್ಧಾ-ಭಕ್ತಿ ಯಿಂದ ಪಾಲಿಸಬೇಕು ಎಂದು ಅವರು ಸಲಹೆ ನೀಡಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಮಾತನಾಡಿ, ಲೋಕಕಲ್ಯಾಣಕ್ಕಾಗಿ ನಡೆಯುವ ಮಹಾಮಸ್ತಕಾಭಿಷೇಕ ವನ್ನು ರಾತ್ರಿ ಸಮಯದಲ್ಲಿ ನಡೆಸಲಾಗು ವುದು. ಯಶಸ್ಸಿಗೆ ಸರ್ವರೂ ಸಹಕರಿಸ ಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಮಾತನಾಡಿ, ಅಕ್ಟೋಬರ್‌ 16ರಂದು ಕಾರ್ಕಳದ ಎಂ.ಎನ್‌. ರಾಜೇಂದ್ರ ಕುಮಾರ್‌ ಅಟ್ಟಳಿಗೆ ಮುಹೂರ್ತ ನೆರವೇರಿಸುವರು ಎಂದು ಪ್ರಕಟಿಸಿದರು.

Advertisement

ಉಚಿತ ವೈದ್ಯಕೀಯ ಶಿಬಿರ ಮೊದಲಾದ ಸೇವಾಕಾರ್ಯಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ಪಿ. ಜಯರಾಜ ಕಂಬಳಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮುಖ್ಯ ಎಂಜಿನಿಯರ್‌ ಶಿವಪ್ರಸಾದ ಅಜಿಲ, ಪಡೊಡಿ ಗುತ್ತು ಜೀವಂಧರ ಕುಮಾರ್‌, ಎಸ್‌.ಡಿ. ಸಂಪತ್‌ ಸಾಮ್ರಾಜ್ಯ ಶಿರ್ತಾಡಿ ಉಪಸ್ಥಿತರಿದ್ದರು.

ಮಸ್ತಕಾಭಿಷೇಕ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿ.ಪ್ರವೀಣ ಕುಮಾರ್‌ ಇಂದ್ರ ಸ್ವಾಗತಿಸಿದರು. ನವೀನ ಚಂದ್ರ ಬಳ್ಳಾಲ್‌ ವಂದಿಸಿದರು. ಮಹಾವೀರ ಜೈನ್‌ ಮೂಡುಕೋಡಿ ಗುತ್ತು ಕಾರ್ಯ ಕ್ರಮ ನಿರ್ವಹಿಸಿದರು.

ಜಿನ ಭಕ್ತಿಗೀತೆ ಸ್ಪರ್ಧೆ
ಭಾರತೀಯ ಜೈನ್‌ ಮಿಲನ್‌ ಪ್ರಾಯೋಜಕತ್ವದಲ್ಲಿ ನ. 5ರಂದು ವೇಣೂರಿನ ಭರತೇಶ ಸಮುದಾಯ ಭವನದಲ್ಲಿ ಮಂಗಳೂರು ವಿಭಾಗ ಮಟ್ಟದ ಹಿರಿಯರ ಮತ್ತು ಕಿರಿಯರ ವಿಭಗದ ಜಿನ ಭಕ್ತಿಗೀತೆಗಳ ಭಜನೆ ಸ್ಪರ್ಧೆ ನಡೆಯಲಿದೆ.

ಮಹಾಮಸ್ತಕಾಭಿಷೇಕ ಉಸ್ತುವಾರಿ ಸಚಿವರಿಂದ ಸಭೆ
ಮಂಗಳೂರು: ವೇಣೂರು ಬಾಹುಬಲಿಯ ಮಹಾಮಸ್ತಕಾಭಿಷೇಕದ ಪೂರ್ವಸಿದ್ಧತೆ ಸಭೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡುರಾವ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ವಿವಿಧ ಇಲಾಖೆಗಳಿಂದ ಆಗಬೇಕಾದ ಕಾರ್ಯಗಳ ಕುರಿತು ವಿವರಗಳನ್ನು ಪಡೆದುಕೊಂಡ ಸಚಿವರು ಮುಂದೆ ವಿಸ್ತೃತವಾಗಿ ಬೆಂಗಳೂರಿನಲ್ಲಿ ಸಭೆ ನಡೆಸಲಾಗುವುದು. ಲೋಕೋಪಯೋಗಿ, ಪ್ರವಾಸೋ ದ್ಯಮದ ಸಚಿವರೊಂದಿಗೆ ಚರ್ಚಿಸಿ, ಹೆಚ್ಚಿನ ಅನುದಾನ ಪಡೆದುಕೊಳ್ಳುವುದಕ್ಕೆ ಯತ್ನಿಸಲಾಗುವುದು. ರಸ್ತೆ ಅಭಿವೃದ್ಧಿ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಆ ಭಾಗದ ರಸ್ತೆಗಳು ಸಪುರವಾದ ಹಿನ್ನೆಲೆಯಲ್ಲಿ ಈ ಕ್ರಮ ಅಗತ್ಯವಿದೆ ಎಂದರು.

ಸಭೆಯಲ್ಲಿ ಶಾಸಕ ಹರೀಶ್‌ ಪೂಂಜ, ವಿಧಾನ ಪರಿಷತ್‌ ಸದಸ್ಯರಾದ ಹರೀಶ್‌ ಕುಮಾರ್‌ ಪ್ರತಾಪ್‌ ಸಿಂಹ
ನಾಯಕ್‌ ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next