ಕುಳಗೇರಿ ಕ್ರಾಸ್: ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿ ಅವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಚೊಳಚಗುಡ್ಡದಿಂದ ಭೈರನಹಟ್ಟಿಯವರೆಗೆ ಕಾರ್ಗಿಲ್ ಜ್ಯೋತಿ ರಥಯಾತ್ರೆಗೆ ಹಾವೇರಿಯ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮೀಜಿ ಚಾಲನೆ ನೀಡಿದರು.
Advertisement
ನಂತರ ಮಾತನಾಡಿದ ಶ್ರೀಗಳು, ಕಾರ್ಗಿಲ್ ಹುತಾತ್ಮ ಯೋಧರ ಜ್ಯೋತಿ ರಥ ಎಳೆಯುತ್ತಿರುವುದು ದೇಶದಲ್ಲಿಯೇ ಪ್ರಥಮ.ದೇಶಕ್ಕಾಗಿ ಮಡಿದ ಯೋಧರ ಜ್ಯೋತಿ ರಥಯಾತ್ರೆಯನ್ನು ಹಮ್ಮಿಕೊಳ್ಳುವುದರ ಜತೆಗೆ ನಮಗೆಲ್ಲ ನಮ್ಮ ಸೈನಿಕರನ್ನು ನೆನಪು
ಮಾಡಿಕೊಡುವ ಕೆಲಸ ಭೈರನಹಟ್ಟಿ ಶ್ರೀಮಠದಿಂದ ನಡೆಯುತ್ತಿದೆ. ಕಾರ್ಗಿಲ್ ವಿಜಯ ದಿನವನ್ನು ವಿವಿಧ ಕಾರ್ಯ ಕ್ರಮದೊಂದಿಗೆ ಶ್ರೀಮಠದಲ್ಲಿ ವಿನೂತನವಾಗಿ ಆಚರಿಸುತ್ತಿರುವುದು ದೇಶಭಕ್ತರಲ್ಲಿ ಸಂತಸ ತಂದಿದೆ ಎಂದು ಹೇಳಿದರು.
ರಾಜ್ಯ ಹೆದ್ದಾರಿ ಮೂಲಕ ಸಕಲ ವಾದ್ಯಗಳೊಂದಿಗೆ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಮೆರವಣಿಗೆ ಮಾಡಲಾಯಿತು. ನಂತರ ರಾಯಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿದ ಭೈರನಹಟ್ಟಿ ಪೂಜ್ಯ ಶಾಂತಲಿಂಗ ಸ್ವಾಮಿಜಿ ಮಾತನಾಡಿ, ಕಾರ್ಗಿಲ್ ವಿಜಯ
ಪತಾಕೆಯನ್ನು ಹಾರಿಸಿ 25 ವರ್ಷ ಗತಿಸಿದವು. ಅನ್ನ ನೀಡುವ ರೈತ, ದೇಶ ಕಾಯುವ ಸೈನಿಕರನ್ನ ನೆನೆಯುವುದು ನಮ್ಮ ಕರ್ತವ್ಯ ಎಂದು ಹೇಳಿದರು.
Related Articles
ಜ್ಯೋತಿರಥಯಾತ್ರೆಯು ಬನಶಂಕರಿ, ಬಾದಾಮಿ, ಮುತ್ತಲಗೇರಿ, ತಿಮ್ಮಾಪೂರ ಎಸ್ ಎನ್, ಕುಳಗೇರಿ ಕ್ರಾಸ್ ಮಾರ್ಗವಾಗಿ
ಗೋವನಕೊಪ್ಪ, ಕೊಣ್ಣೂರ ಮೂಲಕ ಭೈರನಹಟ್ಟಿ ಶ್ರೀಮಠಕ್ಕೆ ತಲುಪಿತು. ಎಲ್ಲ ಗ್ರಾಮಸ್ಥರು, ಮಾಜಿ ಸೈನಿಕರು, ಗ್ರಾಪಂ
ಸಸಸ್ಯರು, ವಿವಿಧ ಕನ್ನಡಪರ ಸಂಘಟನೆಯವರು ಭಾಗವಹಿಸಿದ್ದರು.
Advertisement