Advertisement

ಅನವಶ್ಯಕವಾಗಿ ವಾಹನ ಬಳಸಿದರೆ ಜಪ್ತಿ: ಆಯುಕ್ತ

05:25 AM Jul 05, 2020 | Lakshmi GovindaRaj |

ಬೆಂಗಳೂರು: ಕೋವಿಡ್‌ 19 ಸೋಂಕು ಹಬ್ಬುವುದಕ್ಕೆ ಕಡಿವಾಣ ಹಾಕಲು ಸರ್ಕಾರ ಶನಿವಾರ ರಾತ್ರಿ 8ರಿಂದ ಸೋಮವಾರ ಬೆಳಗ್ಗೆ 5ರವರೆಗೆ ಸರ್ಕಾರ ಲಾಕ್‌ಡೌನ್‌ ಘೋಷಣೆ ಮಾಡಿದ್ದು, ಈ ಅವಧಿಯಲ್ಲಿ ಅನವಶ್ಯಕವಾಗಿ ವಾಹನ  ಬಳಸಿದರೆ ವಾಹನ ಜಪ್ತಿ ಆಗಲಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌ಅನಿಲ್‌ಕುಮಾರ್‌ ತಿಳಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ನಗರದ ಜನತೆ ನಿಯಮ ಮೀರಿ ಅನಗತ್ಯವಾಗಿ ಓಡಾಡಿದರೆ ಕೇಸು ದಾಖಲಾಗುತ್ತದೆ. ಲಾಕ್‌ಡೌನ್‌  ಇರುವುದ ರಿಂದ ಅಗತ್ಯ ಸೇವೆಗಳ ವಾಹನ ಹೊರತುಪಡಿಸಿ ಬೇರೆ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ. ಒಂದು ವೇಳೆ ಲಾಕ್‌ಡೌನ್‌ ನಿಯಮ ಮೀರಿ ವಾಹನಗಳನ್ನು ಹೊರಗೆ ತಂದಲ್ಲಿ ಅಂತಹ ವಾಹನಗಳನ್ನು ಪೊಲೀಸರು ಜಪ್ತಿ  ಮಾಡಲಿದ್ದಾರೆ.

ನಂತರ ನ್ಯಾಯಾಲಯದ ಮೂಲಕ ವಾಹನ ಗಳನ್ನು ಬಿಡಿಸಿಕೊಳ್ಳಬೇಕಾಗುತ್ತದೆ. ಈ ವೇಳೆ ನ್ಯಾಯಾಲಯ ಸೂಚಿಸಿದಷ್ಟು ದಂಡವನ್ನೂ ಪಾವತಿಸಬೇಕು ಎಂದರು. ಭಾನುವಾರ ಅಗತ್ಯ ಸೇವೆಗಳ ಮಾರಾಟಕ್ಕೆ ಮಾತ್ರ  ಅವಕಾಶ. ದಿನಸಿ ಅಂಗಡಿ, ಹಣ್ಣು-ತರಕಾರಿ ಅಂಗಡಿ, ಮಾಂಸದಂಗಡಿ, ಔಷಧಿ ಮಳಿಗೆ ತೆರೆದಿರುತ್ತವೆ. ಸಾರ್ವಜನಿಕರು ನಿಯಮ ಪಾಲಿಸ ಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next