Advertisement

ಮದುಮಗನ ವಾಹನ ದಿಬ್ಬಣದ ಮೇಲೆ ಹರಿದು 22 ಮಂದಿಗೆ ಗಾಯ

04:26 PM Feb 13, 2018 | Team Udayavani |

ಕೋರ್‌ಬಾ : ಛತ್ತೀಸ್‌ಗಢದ ಜಂಜ್‌ಗೀರ್‌ – ಚಂಪಾ ಜಿಲ್ಲೆಯಲ್ಲಿ ಮದುವೆ ಸಮಾರಂಭದ ಮೆರವಣಿಗೆಯ ಮೇಲೆ ಮದುಮಗನ ವಾಹನವು ಹುಚ್ಚಾಪಟ್ಟೆ ಹರಿದಾಡಿದ ಪರಿಣಾಮವಾಗಿ ಕನಿಷ್ಠ 22 ಮಂದಿ ಗಾಯಗೊಂಡಿದ್ದು ಈ ಪೈಕಿ 9 ಮಂದಿಯ ಸ್ಥಿತಿ ಚಿಂತಾಜನಕವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

ಈ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಚುರ್‌ತೇಲಾ ಗ್ರಾಮದ ಮದುಮಗ ಮಿಲನ್‌ ಚಂದ್ರ ಎಂಬಾತನ ಸಂಬಂಧಿಕರು ಮದುವೆ ದಿಬ್ಬಣದಲ್ಲಿ ಹೋಗುತ್ತಿದ್ದಾಗ ಆತನ ವಾಹನ ಅವರ ಮೇಲೆ ಯದ್ವಾತದ್ವಾ ಹರಿದಿದೆ. 

ಧಾಬ್ರಾ  ಪೊಲೀಸ್‌ ಠಾಣೆ ವ್ಯಾಪ್ತಿ ಧಾಬ್ರಾ  – ಖಾರ್ಸಿಯಾ ರಸ್ತೆಯಲ್ಲಿ ಚೂಲ್‌ ಮತಿ ಎಂಬ ವಿಧ್ಯುಕ್ತ ಸಮಾರಂಭದ ಪ್ರಯುಕ್ತ ಮೆರವಣಿಗೆ ಸಾಗುತ್ತಿದ್ದಾಗ ಈ ದುರ್ಘ‌ಟನೆ ನಡೆದಿರುವುದಾಗಿ ಹೆಚ್ಚುವರಿ ಪೊಲೀಸ್‌ ಸುಪರಿಂಟೆಂಡೆಂಟ್‌ ಪಂಕಜ್‌ ಚಂದ್ರ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next