Advertisement
ಸಾರಿಗೆ ಇಲಾಖೆಯ ಜಂಟಿ ಆಯುಕ್ತ ಕೆ.ಟಿ. ಹಾಲಸ್ವಾಮಿ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿತು. ಈ ವೇಳೆ ಗ್ರಾಹಕರಿಂದ ಯಾವುದೇ ದಾಖಲೆಗಳನ್ನು ಪಡೆಯದೆ ವಾಹನ ನೀಡುತ್ತಿರುವ ಬಗ್ಗೆ, ವಾಹನದ ನಿರ್ವಹಣೆ ಇಲ್ಲದಿರುವುದು, ವಾಯುಮಾಲಿನ್ಯ ಪರೀಕ್ಷೆ, ಇನ್ಶೂರೆನ್ಸ್ ಪಾವತಿಸದಿರುವ ಬಗ್ಗೆ ಕಂಡುಬಂದಿದೆ. ಈ ಬಗ್ಗೆ ಮಾಲಕರಿಗೆ ಇಲಾಖೆಯ ವತಿಯಿಂದ ಎಚ್ಚರಿಕೆ ನೀಡಲಾಯಿತು.
ಮಾಲಕರಿಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದೆ. ಈ ವೇಳೆ ಸೇವೆಯಲ್ಲಿರುವ ಎಲ್ಲ ವಾಹನಗಳಿಗೂ ಸೂಕ್ತ ದಾಖಲೆಗಳನ್ನು ಮಾಡಬೇಕು. ಇಲ್ಲದಿದ್ದರೆ ಮುಟ್ಟುಗೋಲು ಹಾಕು ವಂತೆ ತಿಳಿಸಲಾಯಿತು. ವಾಹನಗಳನ್ನು ಬಾಡಿಗೆಗೆ ನೀಡುವ ಸಂದರ್ಭದಲ್ಲಿ ಗ್ರಾಹಕರಲ್ಲಿ ಚಾಲನ ಪರವಾನಿಗೆ ಇದೆಯಾ ಎಂಬ ಬಗ್ಗೆಯೂ ಸೂಕ್ತ ಪರಿಶೀಲನೆ ನಡೆಸುವಂತೆ ಮಾಲಕರಿಗೆ ಸೂಚನೆ ನೀಡಲಾಯಿತು.
ಹಿರಿಯ ನಿರೀಕ್ಷಕ ಸಂತೋಷ್ ಶೆಟ್ಟಿ, ಮೋಟಾರು ವಾಹನ ನಿರೀಕ್ಷಕ ಮಾರುತಿ ನಾಯ್ಕ, ಎಸ್‌ಡಿಎ ಶಾಂತರಾಜ್ ಸಹಿತ ಆರ್‌ಟಿಒ ಸಿಬಂದಿ ಕಾರ್ಯಾಚರಣೆಯಲ್ಲಿದ್ದರು. ದಾಖಲೆ ಇಲ್ಲದಿದ್ದರೆ ಬಂದ್
ಪರವಾನಿಗೆ ಇಲ್ಲದೆ ಇಂತಹ ಅಂಗಡಿಗಳು ಕಾರ್ಯಾಚರಣೆ ಮಾಡು ವಂತಿಲ್ಲ. ಬಾಡಿಗೆ ಆಧಾರದಲ್ಲಿ ನೀಡುವಾಗ ವಾಹನಗಳ ಸ್ಥಿತಿಯೂ ಉತ್ತಮವಾಗಿರುವಂತೆ ಸೂಚನೆ ನೀಡಲಾಗಿದೆ. ದಾಖಲೆಗಳಿಲ್ಲದ ಅಂಗಡಿಗಳನ್ನು ಬಂದ್ ಮಾಡಲಾಗಿದೆ. ಇಂತಹ ಕಾರ್ಯಾಚರಣೆಯನ್ನು ಮುಂದಿನ ದಿನಗಳಲ್ಲಿಯೂ ಜಿಲ್ಲೆಯ ವಿವಿಧೆಡೆ ನಡೆಸಲಾಗುವುದು ಎಂದು ಶಿವಮೊಗ್ಗ ವಿಭಾಗದ ಜಂಟಿ ಸಾರಿಗೆ ಆಯುಕ್ತ ಕೆ.ಟಿ. ಹಾಲಸ್ವಾಮಿ ಅವರು ಎಚ್ಚರಿಸಿದ್ದಾರೆ.