Advertisement

ಕರ್ಫ್ಯೂ ಜಾರಿ ನಡುವೆ ಕಾರಣ ಕೇಳುವ ನೆಪದಲ್ಲಿ ಬಾಕಿ ದಂಡ ವಸೂಲಿಗಿಳಿದ ಪೊಲೀಸರು

03:17 PM Jan 10, 2022 | Team Udayavani |

ಬೆಂಗಳೂರು: ವಾರಾಂತ್ಯದ ಕರ್ಫ್ಯೂ ಜಾರಿ ಇರುವ ನಡುವೆಯೂ ಭಾನುವಾರ ನಗರದಲ್ಲಿ ದ್ವಿಚಕ್ರ ವಾಹನ ಮತ್ತು ಕಾರುಗಳಲ್ಲಿ ಓಡಾಡುತ್ತಿದ್ದವರಿಗೆ ಸಂಚಾರಕ್ಕೆ ಕಾರಣಗಳನ್ನು ಕೇಳುವ
ನೆಪದಲ್ಲಿ ಪೊಲೀಸರು, ಈ ಹಿಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣಗಳ ದಂಡ ವಸೂಲಿಗೆ ಇಳಿದಿದ್ದು ಕಂಡು ಬಂದಿತು.

Advertisement

ವಾರಾಂತ್ಯದ ಕರ್ಫ್ಯೂ ಜಾರಿ ಇರುವುದರಿಂದ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದ ಯಾವುದೇ ಕಾರಣಕ್ಕೂ ಜನರು ಸಂಚರಿಸಲು ಅವಕಾಶವಿಲ್ಲ. ಆದರೂ ಕೆಲವು ಜನರು ಅನಿವಾರ್ಯ ಕಾರಣಗಳಿಂದ ಸಂಚರಿಸುತ್ತಿದ್ದರು. ಇದನ್ನು ತಪಾಸಣೆ ನಡೆಸುತ್ತಿದ್ದ ಸಂಚಾರಿ ಪೊಲೀಸರು, ವಾಹನಗಳನ್ನು ನಿಲ್ಲಿಸುವಂತೆ ಅಡ್ಡಗಟ್ಟುತ್ತಿದ್ದರು. ಯಾವ ಕಾರಣಕ್ಕಾಗಿ ಮತ್ತು ಎಲ್ಲಿಂದ ಎಲ್ಲಿಗೆ ಸಂಚರಿಸುತ್ತಿದ್ದೀರಿ ಎಂದು ಪ್ರಶ್ನಿಸುತ್ತಿದ್ದರು.

ಇದಾದ ನಂತರ ಪೊಲೀಸರು, ಸವಾರರನ್ನು ಬಿಟ್ಟು ಕಳುಹಿಸಬೇಕು. ಆದರೆ, ಸಂಬಂಧಪಟ್ಟ ವಾಹನವು ಈ ಹಿಂದೆ ಯಾವುದಾದರೂ ಸಂಚಾರ ನಿಯಮಗಳನ್ನು ಉಲ್ಲಂಘಿಸಿರುವ ಪ್ರಕರಣಗಳಿವೆಯೇ ಎಂದು ಪರಿಶೀಲಿಸುತ್ತಿದ್ದರು. ಒಂದು ವೇಳೆ ಯಾವುದಾದರೂ ಪ್ರಕರಣಗಳಲ್ಲಿ ದಂಡ ಪಾವತಿಸದೆ, ಬಾಕಿ ಉಳಿಸಿಕೊಂಡಿದ್ದರೆ, ಕೂಡಲೇ ದಂಡ ಪಾವತಿಸಿ ವಾಹನಗಳನ್ನು ಬಿಡಿಸಿಕೊಂಡು ಹೋಗುವಂತೆ ಸೂಚಿಸುತ್ತಿದ್ದರು. ದಂಡ ಪಾವತಿಸದಿದ್ದರೆ, ವಾಹನಗಳನ್ನು ಬಿಡಲು ಸತಾಸುತ್ತಿದ್ದರು ಎಂದು ಸವಾರರೊಬ್ಬರು ಆರೋಪ ಮಾಡಿದ್ದಾರೆ.
ರಾಜಾಜಿನಗರದಿಂದ ನೃಪತುಂಗ ರಸ್ತೆಯಲ್ಲಿರುವ ಸೇಂಟ್‌ ಮಾರ್ಥಾಸ್‌ ಆಸ್ಪತ್ರೆಗೆ ಕಾರಿನಲ್ಲಿ ಹೋಗುತ್ತಿದ್ದೆ.

ಈ ವೇಳೆ ಮೆಜೆ ಸ್ಟಿಕ್‌ ಸೇರಿದಂತೆ ಹಲವೆಡೆ ಪೊಲೀಸರು ವಾಹನವನ್ನು ಅಡ್ಡಗಟ್ಟಿ ನಿಲ್ಲಿಸಿ ಕಾರಣಗಳನ್ನು ಕೇಳಿದರು. ಅದಾದ ನಂತರ ಹಿಂದಿನ ಪ್ರಕರಣಗಳನ್ನು ಪರಿಶೀಲಿಸಿದರು. ಹಳೆಯ ಪ್ರಕರಣವೊಂದು ಬಾಕಿ ಇದ್ದು, ಈ ದಂಡ ಪಾವತಿಸುವಂತೆ ಸೂಚಿಸಿದರು. ತುರ್ತಾಗಿ ಆಸ್ಪತ್ರೆಗೆ ಹೋಗಬೇಕಿದ್ದರಿಂದ ಪಾವತಿಸಬೇಕಾಯಿತು. ಆದರೆ, ಪೊಲೀಸರು ಕರ್ಫ್ಯೂ ವೇಳೆ ದಂಡ ವಸೂಲಿಗೆ ಇಳಿದಿರುವುದು ಸರಿಯಲ್ಲ ಎಂದು ಸವಾರ ವಿಜಯ್‌ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ : ಪಾದಯಾತ್ರೆ: ಡಿಕೆಶಿ, ಸಿದ್ದರಾಮಯ್ಯ, ಖರ್ಗೆ, ದುನಿಯಾ ವಿಜಯ್ ಸೇರಿ 31 ಜನರ ವಿರುದ್ಧ ಎಫ್ಐಆರ್

Advertisement

ಅನಗತ್ಯ ಸಂಚಾರ:
944 ವಾಹನಗಳ ಜಪ್ತಿ ಬೆಂಗಳೂರು: ಕೊರೊನಾ ರೂಪಾಂತರಿ ಒಮಿಕ್ರಾನ್‌ ಸೋಂಕು ನಿಯಂತ್ರಿಸಲು ಸರ್ಕಾರ ಜಾರಿಗೊಳಿಸಿರುವ ವಾರಾಂತ್ಯದ ಕರ್ಫ್ಯೂನ ಎರಡನೇ ದಿನವಾದ ಭಾನುವಾರ ನಗರದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಅನಗತ್ಯವಾಗಿ ರಸ್ತೆಗಳಿಯುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಿರುವ ಪೊಲೀಸರು, ಭಾನುವಾರ ನಗರದಲ್ಲಿ ಒಟ್ಟು 944 ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಪೂರ್ವ ವಿಭಾಗದಲ್ಲಿ 91, ದಕ್ಷಿಣ 51, ಈಶಾನ್ಯ 42, ಪಶ್ಚಿಮ 414, ತ್ತರ 147, ದಕ್ಷಿಣ 171, ಕೇಂದ್ರ ವಿಭಾಗದಲ್ಲಿ 28 ಸೇರಿ ಒಟ್ಟು 944 ವಾಹನ ಜಪ್ತಿ ಮಾಡಿದ್ದಾರೆ. ಈ ಪೈಕಿ 864 ದ್ವಿಚಕ್ರ ವಾಹನ, 26 ತ್ರಿಚಕ್ರವಾಹನ ಹಾಗೂ 54 ನಾಲ್ಕು ಚಕ್ರದ ವಾಹನಗಳು ಇವೆ.

ಪೊಲೀಸರಲ್ಲಿ ಶತಕ ದಾಟಿದ ಕೊರೊನಾ: ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಪೊಲೀಸ್‌ ಠಾಣೆಯ ಒಟ್ಟು 102 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದೆ. ಭಾನುವಾರ ಒಂದೇ ದಿನ ಒಬ್ಬರು ಇನ್‌ಸ್ಪೆಕ್ಟರ್‌ ಸೇರಿ 42 ಮಂದಿಗೆ ಸೋಂಕು ತಗುಲಿದೆ. ಒಟ್ಟು 6 ಮಂದಿ ಗುಣಮುಖರಾಗಿ ಡಿಸಾcರ್ಜ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next