Advertisement

Automobile: ಹಬ್ಬದ ಋತುವಿನಲ್ಲಿ ವಾಹನ ಖರೀದಿ ಭರಾಟೆ ಜೋರು

10:09 PM Oct 01, 2023 | Team Udayavani |

ನವದೆಹಲಿ: ಹಬ್ಬದ ಋತುವಿನ ಹಿನ್ನೆಲೆಯಲ್ಲಿ ದೇಶದಲ್ಲಿ ದಾಖಲೆಯ ಸಂಖ್ಯೆಯ ಪ್ರಯಾಣಿಕ ವಾಹನಗಳನ್ನು ಆಟೊಮೊಬೈಲ್‌ ಕಂಪನಿಗಳು ಡೀಲರ್‌ಗಳಿಗೆ ಸರಬರಾಜು ಮಾಡಿವೆ.

Advertisement

ಸೆಪ್ಟೆಂಬರ್‌ನಲ್ಲಿ ದಾಖಲೆಯ 3,63,733 ಪ್ರಯಾಣಿಕ ವಾಹನಗಳನ್ನು ಕಂಪನಿಗಳು ಸರಬರಾಜು ಮಾಡಿವೆ. ಅದೇ ರೀತಿ ಆಗಸ್ಟ್‌ನಲ್ಲಿ 3,60,700 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿವೆ.
ಅ.15ರಿಂದ ನವರಾತ್ರಿ ಆರಂಭವಾಗಲಿದೆ. ಹಬ್ಬದ ದಿನದಂದೇ ವಾಹನ ಖರೀದಿಸಲು ಅನೇಕ ಗ್ರಾಹಕರು ಮುಂದಾಗಿ, ಈಗಾಗಲೇ ಮುಂಗಡ ಬುಕ್ಕಿಂಗ್‌ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಡೀಲರ್‌ಗಳು ಮೊದಲೇ ವಾಹನಗಳನ್ನು ಸಂಗ್ರಹಿಸುತ್ತಿದ್ದಾರೆ. ಕಳೆದ ತಿಂಗಳು ಗಣೇಶ ಹಬ್ಬದ ಪ್ರಯುಕ್ತವೂ ಅನೇಕ ಗ್ರಾಹಕರು ವಾಹನಗಳನ್ನು ಖರೀದಿದ್ದಾರೆ ಎಂದು ಮಾರುತಿ ಸುಜುಕಿ ಎಸ್‌ಇಒ ಶಶಾಂಕ್‌ ಶ್ರೀವಾಸ್ತವ ಹೇಳಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಮಾರುತಿ ಸುಜುಕಿ ಇಂಡಿಯಾ ಕಂಪನಿಯು ಒಟ್ಟು 1,81,343 ಪ್ರಯಾಣಿಕ ವಾಹನಗಳನ್ನು ಸರಬರಾಜು ಮಾಡಿದೆ. ಅದೇ ರೀತಿ ಹ್ಯುಂಡೈ ಕಂಪನಿಯು 71,641 ವಾಹನಗಳು, ಟಾಟಾ ಮೋಟರ್ಸ್‌ 82,023 ವಾಹನಗಳು, ಟೊಯೊಟೊ ಕಿರ್ಲೊಸ್ಕರ್‌ ಕಂಪನಿಯು 23,590 ವಾಹನಗಳು, ಎಂಜಿ ಮೊಟಾರ್‌ ಇಂಡಿಯಾ ಕಂಪನಿಯು 5,003 ವಾಹನಗಳನ್ನು ಡೀಲರ್‌ಗಳಿಗೆ ಸರಬರಾಜು ಮಾಡಿವೆ

Advertisement

Udayavani is now on Telegram. Click here to join our channel and stay updated with the latest news.

Next