Advertisement

ತರಕಾರಿ ಬೆಲೆ ಪಾತಾಳಕ್ಕಿಳಿಸಿದ 2ನೇ ಅಲೆ

01:18 PM Apr 05, 2021 | Team Udayavani |

ಮೈಸೂರು: ಕಳೆದ ಬಾರಿ ಕೋವಿಡ್ ಲಾಕ್‌ಡೌನ್‌ನಿಂದ ತತ್ತರಿಸಿದ್ದ ಬೆಳೆಗಾರರರು, ಕೋವಿಡ್ 2ನೇ ಅಲೆಗೆ ಮತ್ತೆ ಕಂಗೆಟ್ಟಿದ್ದು, ನಷ್ಟದ ಮೇಲೆ ನಷ್ಟ ಅನುಭವಿಸುವಂತಾಗಿದೆ. ವರ್ಷದಿಂದೀಚೆಗೆ ಕೋವಿಡ್ ಅಟ್ಟಹಾಸಕ್ಕೆ ತತ್ತರಿಸಿದ್ದ ಒಟ್ಟಾರೆ ವ್ಯವಸ್ಥೆ, ತದನಂತರದಲ್ಲಿ ಸುಧಾರಿಸಿಕೊಳ್ಳುವತ್ತ ಸಾಗಿದೆ ಎನ್ನುವ ಹೊತ್ತಿಗೆ ಕೋವಿಡ್ ಎರಡನೇ ಅಲೆ ಆರ್ಭಟಕ್ಕೆ ಕೃಷಿ ಉತ್ಪನ್ನಗಳ ಬೆಲೆ ಪಾತಾಳಕ್ಕಿಳಿದಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

Advertisement

ಮೈಸೂರು ಜಿಲ್ಲೆ ವಾರ್ಷಿಕ ಬೆಳೆ ಹೊರತುಪಡಿಸಿ ತರಕಾರಿ, ತೋಟಗಾರಿಕೆ ಬೆಳೆಹಾಗೂ ಹೈನುಗಾರಿಕೆ ಮೇಲೆ ಅತಿ ಹೆಚ್ಚಾಗಿ ಅವಲಂಬಿತವಾಗಿದ್ದು, ಬಹುಪಾಲು ರೈತರುತರಕಾರಿ, ತೋಟಗಾರಿಕೆ ಬೆಳೆಯನ್ನೇ ಅವಲಂಬಿಸಿದ್ದಾರೆ. ಕಳೆದ ಬಾರಿ ಕೊರೊನಾಲಾಕ್‌ಡೌನ್‌ನಿಂದಾಗಿ ತರಕಾರಿ ಹಾಗೂ ಬಾಳೆಹಣ್ಣುಗಳನ್ನು ಕೇಳುವವರಿಲ್ಲದೇ, ಕೃಷಿಭೂಮಿಯಲ್ಲೇ ಕೊಳೆಯುವಂತಾಗಿತ್ತು. ಆದರೆಕಳೆದ ವರ್ಷದ ನಷ್ಟವನ್ನು ಈ ಬಾರಿಯಾದರೂಸರಿದೂಗಿಸಿಕೊಳ್ಳುವ ಯೋಚನೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ.

ವರ್ಷಾರಂಭದಲ್ಲಿ ಮದುವೆ, ಸಭೆ, ಸಮಾರಂಭ, ಜಾತ್ರೆ ಹಾಗೂ ಉತ್ಸವಗಳು ಹೆಚ್ಚುನಡೆಯುತ್ತಿದ್ದರಿಂದ ಬಾಳೆ, ಹೂ, ತರಕಾರಿಗೆಹೆಚ್ಚಿನ ಬೇಡಿಕೆಯಿಂದಾಗಿ ಬೆಲೆಯೂಏರಿಕೆಯಾಗುತ್ತಿತ್ತು. ಆದರೆ, ಎಲ್ಲದಕ್ಕೂಕಡಿವಾಣ ಬಿದ್ದಿರುವುದರಿಂದ ಕೃಷಿ ಉತ್ಪನ್ನಗಳ ಬೆಲೆ ಪಾತಾಳಕ್ಕಿಳಿದಿದೆ.

ಮೈಸೂರಿನ ತರಕಾರಿ ಮಾರುಕಟ್ಟೆ ಅವಲಂಭಸಿದ್ದ ಕೇರಳದ ವರ್ತಕರು, ಪ್ರತನಿತ್ಯ ಮೈಸೂರಿಗೆ ಬಂದು ಲಾರಿಗಳಲ್ಲಿ ತರಕಾರಿಯನ್ನು ಕೊಂಡೊಯ್ಯುತ್ತಿದ್ದರು. ಆದರೆ, ಕೋವಿಡ್  2ನೇ ಅಲೆಯ ನಂತರ ಮೈಸೂರು-ಕೇರಳ ನಡುವೆ ಪ್ರತಿನಿತ್ಯ ನೂರಾರು ಸಂಖ್ಯೆಯಲ್ಲಿಸಂಚರಿಸುತ್ತಿದ್ದ ತರಕಾರಿ ವಾಹನಗಳಸಂಚಾರ ಕಡಿಮೆಯಾಗಿತರಕಾರಿ ಕೇಳುವವರಿಲ್ಲ ದಂತಾಗಿದೆ.

ಬೆಲೆಯ ಏರಿಳಿತ: 2021ರ ಜನವರಿಯಲ್ಲಿಪ್ರತಿ ಕೆ.ಜಿ. ಬೀನ್ಸ್‌ಗೆ 50ರೂ. ವಹಿವಾಟುನಡೆದಿದ್ದು, ಇದೀಗ 20 ರೂ.ಗೆ ಕುಸಿದಿದೆ. ಕೇರಳದಲ್ಲಿಹೆಚ್ಚಾಗಿ ಬಳಕೆ ಮಾಡುವ ಪೈರ್‌ಜನವರಿಯಲ್ಲಿ 40 ರೂ. ಇದ್ದ ಬೆಲೆಇದೀಗ 20 ರೂ.ಗೆ ಕುಸಿತ ಕಂಡಿದೆ. ಅದೇರೀತಿ ಬೆಂಡೆ 35 ರಿಂದ 10 ರೂ.ಗೆ, ಗುಂಡುಬದನೆ 10 ರೂ.ನಿಂದ 5 ರೂ.ಗೆ ಇಳಿಕೆ ಕಂಡಿದೆ.20 ರೂ. ಇದ್ದ ಟೊಮೆಟೋ ದರ ಇದೀಗ 8ರೂ.ಗೆ ಇಳಿಕೆ ಕಂಡಿದೆ. ಜೊತೆಗೆ ಸೇವಂತಿಗೆ,ಕನಕಾಂಬರ, ಗುಲಾಬಿ ಸೇರಿದಂತೆ ಇತರೆಹೂವುಗಳಿಗೆ ಬೇಡಿಕೆ ಕಡಿಮೆಯಾಗಿದ್ದು,ಬೆಳೆಗಾರರು ಮತ್ತು ವರ್ತಕರೂ ನಷ್ಟಕ್ಕೀಡಾಗಿದ್ದಾರೆ.

Advertisement

ಅರ್ಧಕ್ಕರ್ಧ ಕುಸಿದ ಬಾಳೆಹಣ್ಣು ಬೆಲೆ :

ಜಿಲ್ಲೆಯಲ್ಲಿ ಒಂದು ಕಿಲೋ ಏಲಕ್ಕಿ ಬಾಳೆಗೆ 40 ರೂಪಾಯಿಗೆ ಮಾರಾಟಮಾಡುತ್ತಿದ್ದ ಬಾಳೆ ಬೆಳೆಗಾರ ಪ್ರಸ್ತುತ ಉತ್ತಮ ದರ್ಜೆಯ ಏಲಕ್ಕಿ ಬಾಳೆಯನ್ನು 25ರೂ.ಗೆ ಮಾರಾಟ ಮಾಡುವಂತಾಗಿದೆ. ಜೊತೆಗೆ 17ರಿಂದ 18 ರೂಪಾಯಿಗೆ ಮಾರಾಟವಾಗುತ್ತಿದ್ದ ಪಚ್ಚಬಾಳೆಗೆ ಕೇವಲ 8 ರಿಂದ 10 ರೂ.ಗೆ ಮಾರಾಟವಾಗುತ್ತಿದೆ.

ಜಿಲ್ಲೆಯಲ್ಲಿ ತರಕಾರಿ, ಬಾಳೆ ಬೆಳೆಯುವ ರೈತರು ಹೆಚ್ಚಿದ್ದು, ನಾವು ಕೇರಳ ಮಾರುಕಟ್ಟೆಯನ್ನೇ ಅವಲಂಬಿಸಿದ್ದೇವೆ. ಕೊರೊನಾ 2ನೇ ಅಲೆ ಯಿಂದಾಗಿ ಅಂತಾರಾಜ್ಯ ಓಡಾಟಕ್ಕೆ, ಸಭೆ ಸಮಾರಂಭ, ಜಾತ್ರೆ ಉತ್ಸವಗಳಿಗೆ ಸರ್ಕಾರ ಕಡಿವಾಣ ಹಾಕಿರುವುದರಿಂದ ಎಲ್ಲ ಬೆಲೆ ಪಾತಾಳಕ್ಕೆ ಕುಸಿದಿದೆ. ಅತ್ತಹಳ್ಳಿ ದೇವರಾಜು, ರೈತ ಮುಖಂಡ

ವರ್ಷಾರಂಭ ಸೇರಿದಂತೆ ಎಲ್ಲದಿನಗಳಲ್ಲಿಯೂ ಸೇವಂತಿಗೆ, ಗುಲಾಬಿ,ಕನಕಾಂಬರ ಹೂವಿಗೆ ಸಾಮಾನ್ಯವಾಗಿ ಬೆಲೆಹೆಚ್ಚಿರುತ್ತಿತ್ತು. ಆದರೆ ಕಳೆದ ಹದಿನೈದುದಿನಗಳಿಂದ ಬೆಲೆಯಲ್ಲಿ ಏರಿಳಿತ ಕಂಡುಬರುತ್ತಿದೆ. ಹೂವನ್ನು ಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಸುರೇಶ್, ಹೂವಿನ ವ್ಯಾಪಾರಿ

ಕೇರಳ ಮತ್ತು ತಮಿಳುನಾಡಿನಿಂದ ಬರುತ್ತಿದ್ದವರ್ತಕರು ಕೋವಿಡ್2ನೇ ಅಲೆ ಭೀತಿಯಿಂದ ಕಡಿಮೆಯಾಗಿದ್ದಾರೆ. ಮದುವೆ, ಜಾತ್ರೆ-ಉತ್ಸವಗಳಿಗೆ ಸರ್ಕಾರ ಕಡಿವಾಣ ಹಾಕಿರುವುದರಿಂದ ಹೂ, ಹಣ್ಣು ಹಾಗೂ ತರಕಾರಿ ಬೇಡಿಕೆ ಕಡಿಮೆಯಾಗಿದೆ. ಮರಂಕಯ್ಯ, ರೈತ ಸಂಘ ಮುಖಂಡರು

 

-ಸತೀಶ್ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next