ವಯಲಾರ್: ನಗದು ಮೂಲಕ ಲಂಚ ತೆಗೆದುಕೊಳ್ಳುವುದು ಸಾಮಾನ್ಯ ಸಂಗತಿ. ಅದು ಗೊತ್ತಾದರೆ ತಾನೆ ಸಿಕ್ಕಿ ಬೀಳುವುದು?
ಕಿತ್ತಳೆ, ಕುಂಬಳಕಾಯಿ ಸೇರಿದಂತೆ ಅದನ್ನು ತರಕಾರಿ ಮತ್ತು ಹಣ್ಣುಗಳ ಮೂಲಕ ತೆಗೆದುಕೊಂಡರೆ ಹೇಗೆ? ಜತೆಗೆ ದುಡ್ಡು ಕೂಡ. ಇದೊಂದು ಅಚ್ಚರಿಯಾದರೂ ಸತ್ಯದ ವಿಚಾರ.
ಮಂಗಳವಾರ ಬೆಳಗ್ಗೆ 2 ಗಂಟೆಗೆ ಪಾಲಕ್ಕಾಡ್ ಜಿಲ್ಲೆಯ ವಿಜಿಲೆನ್ಸ್‌ನ ಡಿವೈಎಸ್‌ಪಿ ಎಸ್.ಶಂಸುದ್ದೀನ್ ನೇತೃತ್ವದ ಅಧಿಕಾರಿಗಳು ಮತ್ತು ಸಿಬಂದಿ ದಾಳಿ ನಡೆಸಿದ ಸಂದರ್ಭದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಜತೆಗೆ 69,500 ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಲಸಿಕೆ ಹಾಕದವರು ಯಾವುದೇ ಸಾರ್ವಜನಿಕ ಸ್ಥಳಗಳಿಗೆ ತೆರಳುವಂತಿಲ್ಲ: ಇಮಾನ್ಯುವಲ್ ಮ್ಯಾಕ್ರನ್
ಲಾರಿಗಳ ಮೂಲಕ ಬರುವ ತರಕಾರಿ ಮತ್ತು ಹಣ್ಣುಗಳನ್ನು ಲಂಚದ ರೂಪದಲ್ಲಿ ಆರ್‌ಟಿಒ ಚೆಕ್‌ಪೋಸ್ಟ್‌ನಲ್ಲಿ ಇರುವ ಅಧಿಕಾರಿಗಳು ಮತ್ತು ಸಿಬಂದಿ ಹಂಚಿಕೊಳ್ಳುತ್ತಾರೆ ಎಂಬ ಆರೋಪಗಳಿವೆ. ಅಧಿಕಾರಿಗಳ ಮತ್ತು ಸಿಬ್ಬಂದಿಗಳ ಚಲಾಕಿತನದ ಬಗ್ಗೆ ಸುಳಿವು ಪಡೆದುಕೊಂಡ ಡಿವೈಎಸ್‌ಪಿ ಮತ್ತು ತಂಡ ಶಬರಿಮಲೆಗೆ ತೆರಳುವವರಂತೆ ನಟಿಸಿ ಸ್ಥಳಕ್ಕೆ ಆಗಮಿಸಿ, ಕರಾಳ ಜಾಲ ಬಯಲಿಗೆ ಎಳೆದಿದೆ.