ಯಳಂದೂರು: ರೈತ ಕಷ್ಟಪಟ್ಟು ಬೆಳೆದ ಬೆಳೆಯುಕೋವಿಡ್ ಹಿನ್ನೆಲೆಯಲ್ಲಿ ಮಾರಾಟವಾಗದೆ,ಜಾನುವಾರುಗಳಿಗೆ ಮೇವಾಗಿದ್ದು, ಲಕ್ಷಾಂತರ ರೂ.aವ್ಯಯಿಸಿ ಬೆಳೆ ಬೆಳೆದಿದ್ದ ರೈತರು ತಲೆ ಮೇಲೆ ಕೈ ಹೊತ್ತುಕೂರುವ ಪರಿಸ್ಥಿತಿ ಎದುರಾಗಿದೆ.
ರೈತರು ಜಮೀನಿನಲ್ಲಿ ಚೆಂಡು ಹೂ, ಮಂಗಳೂರುಸೌತೆ, (ಎಂಸಿ ಸೌತೆ), ಬೂದುಗುಂಬಳ, ಟೊಮೆಟೋ,ಕಲ್ಲಂಗಡಿ, ಸೌತೆಕಾಯಿ ಬೆಳೆಯನ್ನು ಸಮೃದ್ಧಿಯಾಗಿಬೆಳೆದಿದ್ದಾರೆ. ಕೊರೊನಾ ಎರಡನೇ ಅಲೆಯುಹೆಚ್ಚಾಗಿರುವ ಕಾರಣ ರಾಜ್ಯದಲ್ಲಿ 14 ದಿನಗಳ ಕಾಲಲಾಕ್‌ಡೌನ್ ಮಾಡಿರುವ ಪರಿಣಾಮ ಮದುವೆ, ಸಭೆ,ಸಮಾರಂಭ, ಪೂಜೆ, ಉತ್ಸವ, ಮೆರವಣಿಗೆ ಸೇರಿದಂತೆಇತರೆ ಕಾರ್ಯಕ್ರಮಗಳು ಸ್ಥಗಿತವಾಗಿರುವುದರಿಂದಬೇಡಿಕೆ ಇಲ್ಲದಂತಾಗಿದೆ. ಹೀಗಾಗಿ ಹೂಗಳು ಹಾಗೂತರಕಾರಿಗಳು ಜಮೀನಿನಲ್ಲೇ ಹಾಳಾಗುತ್ತಿವೆ.
ಮಣ್ಣು ಪಾಲಾದ ಬೆಳೆ: ತಾಲೂಕಿನ ದುಗ್ಗಹಟ್ಟಿ,ಕೆಸ್ತೂರು, ಹೊನ್ನೂರು, ಗಂಗವಾಡಿ, ಗುಂಬಳ್ಳಿ ದಾಸನಹುಂಡಿ ಗ್ರಾಮಗಳಲ್ಲಿ ಹೆಚ್ಚಾಗಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತದೆ. ಇಲ್ಲಿ ಕಲ್ಲಂಗಡಿ, ಟೊಮೆಟೋ,ಮಂಗಳೂರು ಸೌತೆ, ಚೆಂಡು ಹೂವು, ಬೂದಗುಂಬಳಕಾಯಿ ಸೇರಿದಂತೆ ಅನೇಕ ಬೆಳೆಗಳನ್ನು ಬೆಳೆಯಲಾಗಿದೆ.
ಈ ಸಂದರ್ಭದಲ್ಲಿ ಮದುವೆಗಳು, ಶುಭಕಾರ್ಯಗಳು ಹೆಚ್ಚಾಗಿರುತ್ತಿತ್ತು. ಇದನ್ನು ನಂಬಿ ಸಾಲ ಮಾಡಿಬೆಳೆ ಮಾಡಿದ್ದ ರೈತರು ಈಗ ಮಾರುಕಟ್ಟೆ ಇಲ್ಲದೆ ಪರದಾಡುವ ಸ್ಥಿತಿಗೆ ತಲುಪಿದ್ದಾರೆ. ಬೂದ ಗುಂಬಳ ಕಿಲೊಗೆ 3ರೂ.ಗೆ ಇಳಿದಿದ್ದು ಇದನ್ನು ಕೊಯ್ಲು ಮಾಡುವಕೂಲಿಗೂ ಹಣ ಸಾಲುತ್ತಿಲ್ಲ ಎಂಬುದು ರೈತರ ಅಳಲು.
ಏಪ್ರಿಲ್ ತಿಂಗಳಲ್ಲಿ ಮದುವೆ ಸಮಾರಂಭಗಳುಹೆಚ್ಚಾಗಿ ಹೂವಿಗೆ ಹಾಗೂ ಮಂಗಳೂರು ಸೌತೆ ಕಾಯಿಗೆಬೇಡಿಕೆ ಇರುತ್ತಿತ್ತು. ಸರ್ಕಾರವು ಲಾಕ್‌ಡೌನ್ ಮಾಡಿದಪರಿಣಾಮ ಯಾರೂ ಖರೀದಿಸುತ್ತಿಲ್ಲ. ಜೊತೆಗೆ ಇದಕ್ಕೆಮಾರುಕಟ್ಟೆಯಲ್ಲಿ ಸೂಕ್ತ ಬೆಲೆಯು ಇಲ್ಲ, ಅಧಿಕಖರ್ಚು ಮಾಡಿ ಬೆಳೆಯಲಾಗಿದೆ.
ಆದ್ದರಿಂದಸರ್ಕಾರವು ಇದಕ್ಕೆ ಸೂಕ್ತ ಪರಿಹಾರವನ್ನು ನೀಡಿ ರೈತರಿಗೆನೆರವಾಗಬೇಕಾಗಿದೆ ಎಂದು ಕೆಸ್ತೂರು ಗ್ರಾಮದ ರೈತಕುಮಾರ್ ಸೇರಿದಂತೆ ಮತ್ತಿತರರು ಆಗ್ರಹಿಸಿದ್ದಾರೆ.
ಯಳಂದೂರು ತಾಲೂಕಿನ ಹೂಹಾಗೂ ತರಕಾರಿಗಳು ಬೆಳೆಗಳಿಗೆ ನಷ್ಟಉಂಟಾಗುತ್ತಿರುವ ಬಗ್ಗೆ ರೈತರು ಕಚೇರಿಗೆಭೇಟಿ ನೀಡಿ ಅರ್ಜಿ ಸಲ್ಲಿಸಿದ್ದಾರೆ. ಇದನ್ನುಪರಿಶೀಲಿಸಿ ಸರ್ಕಾರಕ್ಕೆ ವರದಿ ನೀಡಿಮುಂದಿನ ಕ್ರಮ ವಹಿಸಲಾಗುವುದು.
- ರಾಮಕೃಷ್ಣ , ಸಹಾಯಕ ನಿರ್ದೇಶಕ,ತೋಟಗಾರಿಕೆ ಇಲಾಖೆ
ಫೈರೋಜ್ ಖಾನ್