Advertisement
ಬದಲಾಗಿ ಮಾಲ್‌ಗಳನ್ನು ಸರಕಾರಿ ಆದೇಶದಂತೆ ಬಂದ್ ಮಾಡಿದ ಹಿನ್ನೆಲೆಯಲ್ಲಿ ಕಳೆದ 2 ದಿನಗಳಿಂದ ಮಾರುಕಟ್ಟೆಯಲ್ಲಿ ವ್ಯವಹಾರ ಜಾಸ್ತಿಯಾಗಿದೆ. ತರಕಾರಿಗಳ ಪೂರೈಕೆಯಲ್ಲಾಗಲಿ ಮತ್ತು ಬೆಲೆಗಳಲ್ಲಾಗಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ.ಮಂಗಳೂರಿನ ಮಾರುಕಟ್ಟೆಗೆ ಸ್ಥಳೀಯ ಬೆಳೆಗಾರರಿಂದ ಹಾಗೂ ಬಯಲು ಸೀಮೆಯಿಂದ ತರಕಾರಿ ಪೂರೈಕೆ ಆಗುತ್ತಿದೆ. ಹಣ್ಣು ಹಂಪಲುಗಳು ಬೆಂಗಳೂರು, ಹುಬ್ಬಳ್ಳಿ, ಮಹಾರಾಷ್ಟ್ರ ಭಾಗದಿಂದ ಬರುತ್ತಿವೆ.
ಸರಕಾರ ಶಾಲೆಗಳಿಗೆ ರಜೆ ಘೋಷಿಸಿ ರುವುದರಿಂದ ಹೆತ್ತವರು ತಮ್ಮ ಕೆಲಸವನ್ನು ಬಿಟ್ಟು ಮಕ್ಕಳನ್ನು ನೋಡಿಕೊಳ್ಳುವ ದೃಷ್ಟಿಯಿಂದ ಮನೆಯಲ್ಲಿ ಇರ ಬೇಕಾದ ಪರಿಸ್ಥಿತಿ ಇದೆ. ಇದರಿಂದಾಗಿ ಹಾಸನ, ಚಿಕ್ಕಮಗಳೂರು, ದೊಡ್ಡಬಳ್ಳಾಪುರ, ರಾಮನಗರಗಳಲ್ಲಿ ಕಾರ್ಮಿಕರ ಕೊರತೆ ಉಂಟಾಗಿದೆ. ಇದರಿಂದ ತರಕಾರಿ ಕೊಯ್ಲು ಆಗದೆ ಮಂಗಳೂರಿಗೆ ಬರುವ ತರಕಾರಿಯಲ್ಲಿ ಅಲ್ಪ ಇಳಿಮುಖವಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಚೈನೀಸ್ ತರಕಾರಿ ಗ್ರಾಹಕರ ಇಳಿಮುಖ
ಬಾರ್‌ಗಳು ಬಂದ್ ಆಗಿರುವುದರಿಂದ ಚೈನೀಸ್ ತರಕಾರಿಗಳ ಗ್ರಾಹಕರ ಸಂಖ್ಯೆ ಇಳಿಮುಖವಾಗಿದೆ. ಹಾಗಾಗಿ ವ್ಯವಹಾರ ಕುಸಿದಿದೆ. ಚೈನೀಸ್ ತರಕಾರಿಗಳ ಪೂರೈಗೆ ಸಾಕಷ್ಟಿದೆ, ಬೆಲೆಗಳ ಯಥಾ ಸ್ಥಿತಿಯಲ್ಲಿವೆ.
– ನಿತಿನ್ ಶೆಟ್ಟಿ, ವ್ಯಾಪಾರಿ
Related Articles
ಹಣ್ಣು ಹಂಪಲು ವ್ಯಾಪಾರ ಚೆನ್ನಾಗಿದೆ. ಎಲ್ಲ ಕಡೆಗಳಿಂದ ಹಣ್ಣು ಹಂಪಲುಗಳು ಆವಕವಾಗುತ್ತಿವೆ. ಮಾಲ್‌ಗಳು ಬಂದ್ ಆಗಿರುವುದರಿಂದ ಜನರು ಸೆಂಟ್ರಲ್ ಮಾರ್ಕೆಟ್‌ಗೆ ಬರುತ್ತಿದ್ದಾರೆ. ಆದರೆ ಇಲ್ಲಿ ಬೀದಿ ಬದಿ ವ್ಯಾಪಾರಿಗಳ ಹಾವಳಿಯಿಂದಾಗಿ ವಾಹನ ಪಾರ್ಕಿಂಗ್‌ಗೆ ಸಮಸ್ಯೆ ಇದೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳ ಬೇಕಿದೆ.
– ಎಂ.ಜೆ. ಬಶೀರ್,ಹಣ್ಣಿನ ವ್ಯಾಪಾರಿ
Advertisement
ಬೆಲೆ ಹೆಚ್ಚಾಗಿಲ್ಲ; ಬೇಡಿಕೆ ಕುಸಿದಿಲ್ಲಕೊರೊನಾ ವೈರಸ್ ಹರಡುವ ಭೀತಿಯ ಹಿನ್ನೆಲೆಯಲ್ಲಿ ಸರಕಾರ ಅನೇಕ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿರುವುದು ಶ್ಲಾಘನೀಯ. ಇದರಿಂದ ತರಕಾರಿ ವ್ಯಾಪಾರದ ಮೇಲೆ ಪರಿಣಾಮ ಬೀರಿಲ್ಲ. ತರಕಾರಿಗಳ ಬೇಡಿಕೆ ಈ ಹಿಂದಿ ನಂತೆಯೇ ಇದ್ದು ಬೆಲೆ ಏರಿಕೆ ಆಗಿಲ್ಲ. ಆದರೆ ಮಾಲ್‌ಗಳನ್ನು ಮುಚ್ಚಿರುವ ಕಾರಣ ಗ್ರಾಹಕರು ಸೆಂಟ್ರಲ್ ಮಾರುಕಟ್ಟೆಯನ್ನು ಅವ ಲಂಬಿಸಿದ್ದು ವ್ಯವಹಾರ ಜಾಸ್ತಿ ಇದೆ.
– ಡೇವಿಡ್ ಡಿ’ಸೋಜಾ, ವ್ಯಾಪಾರಿ