ಪಣಜಿ: ಗೋವಾದ ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರ ಮೋಸ ಮಾಡಿದೆ. ಗೋವಾದ ಸ್ವಾತಂತ್ರ್ಯ ಹೋರಾಟಗಾರರ ವಾರಸುದಾರರಿಗೆ ಉದ್ಯೋಗ ಕೊಡಿಸುವುದಾಗಿ ಸರ್ಕಾರ ಸುಳ್ಳು ಭರವಸೆ ನೀಡಿ ದಾರಿ ತಪ್ಪಿಸುತ್ತಿದೆ ಎಂದು ರೆವಲ್ಯೂಷನರಿ ಗೋವಾನ್ಸ್ ಪಾರ್ಟಿಯ ಸಂತ, ಶಾಸಕ ವಿರೇಶ್ ಆರೋಪಿಸಿದ್ದಾರೆ.
ಸರಕಾರ ಬೇಡಿಕೆಗಳನ್ನು ಕಡೆಗಣಿಸಿದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಗೋವಾದ ಸ್ವಾತಂತ್ರ್ಯ ಹೋರಾಟಗಾರರ ವಾರಸುದಾರರಿಗೆ ಸರ್ಕಾರ ನೀಡಿದ ಉದ್ಯೋಗದ ಭರವಸೆ ಈಡೇರದ ಹಿನ್ನೆಲೆಯಲ್ಲಿ ವಿರೇಶ್ ಬೋರ್ಕರ್ ಸೋಮವಾರ ಸುದ್ದಿಗೋಷ್ಠಿ ನಡೆಸಿದರು. ಈ ಪತ್ರಿಕಾಗೋಷ್ಠಿಯಲ್ಲಿ ಅವರ ಜೊತೆ ಕೆಲವು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರು ಉಪಸ್ಥಿತರಿದ್ದರು. ಸರಕಾರ ನೀಡಿದ್ದ ಭರವಸೆಯೂ ಕಣ್ಮರೆಯಾಗಿದ್ದು, ಇದರಿಂದ ಅನೇಕರು ಕೆಲಸದಿಂದ ವಂಚಿತರಾಗಬೇಕಾಗಿದೆ ಎಂದು ಬೋರ್ಕರ್ ಆರೋಪಿಸಿದ್ದಾರೆ.
ಗೋವಾ ವಿಮೋಚನೆಗಾಗಿ ಸ್ವಾತಂತ್ರ್ಯ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ. ಆದರೆ ಗೋವಾ ವಿಮೋಚನೆಗೊಂಡು 60 ವರ್ಷಗಳು ಕಳೆದರೂ ಅವರ ಹಕ್ಕುಗಳು ಸಿಕ್ಕಿಲ್ಲ ಎಂದರು. ಹಲವು ಸರ್ಕಾರಗಳು ಬಂದು ಹೋದವು ಆದರೆ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳು ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ಪ್ರತಿಯೊಂದು ಸರ್ಕಾರವೂ ಅವರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದೆ. ಮುಖ್ಯಮಂತ್ರಿಗಳು ಅವರಿಗೆ ಉದ್ಯೋಗ ಭರವಸೆ ನೀಡಿದ್ದರು ಅದನ್ನು ಈಡೇರಿಸಬೇಕು ಎಂದು ರೆವೊಲ್ಯೂಶನ್ ಗೋವನ್ಸ ಪಾರ್ಟಿಯ ಶಾಸಕ ವೀರೇಶ್ ಬೋರಕರ್ ಆಗ್ರಹಿಸಿದ್ದಾರೆ. ಈ ಪತ್ರಿಕಾಗೋಷ್ಠಿಯಲ್ಲಿ ರೆವೊಲ್ಯೂಶನ್ ಗೋವನ್ಸ ಪಾರ್ಟಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ : ಟ್ರಾಲಿ ಬ್ಯಾಗ್‌ನಲ್ಲಿ ಯುವತಿ ಶವ; ಇದೊಂದು ಮರ್ಯಾದಾ ಹತ್ಯೆ ಎಂದ ಪೊಲೀಸರು