Advertisement
ಉಡುಪಿಯಲ್ಲಿ ನಡೆದ ಧರ್ಮಸಂಸತ್‌ನಲ್ಲಿ ಪೇಜಾವರ ಶ್ರೀಗಳು ಸಂವಿಧಾನವನ್ನು ತಿದ್ದುಪಡಿ ಮಾಡಬೇಕೆಂದಿದ್ದು, ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯದ ಸೊಲ್ಲು ಶುರುವಾಗಿರುವುದು, ಲಿಂಗಾಯತ ಧರ್ಮಕ್ಕಾಗಿನ ಹೋರಾಟ, ಡಬ್ಬಿಂಗ್ ಬೇಕೆ, ಬೇಡವೇಎಂಬ ಪ್ರಶ್ನೆಗಳಿಗೆಲ್ಲ ಚಂಪಾ ಉತ್ತರಿಸಿದರು. ಇವೆಲ್ಲದರ ಜೊತೆಗೆ ಕನ್ನಡ ಭಾಷೆಯ ಅಳಿವು, ಉಳಿವು, ಬೆಳವಣಿಗೆಯ ಕುರಿತು ಹಲವರು ಪ್ರಶ್ನಿಸಿದರು. ಅದಕ್ಕೆಲ್ಲ ಚಂಪಾ ನೀಡಿದ ಉತ್ತರ ಇಲ್ಲಿದೆ.
ಬಸವಕೇಂದ್ರಿತ ಲಿಂಗಾಯತ ಚಳವಳಿಗೆ ನನ್ನ ಬೆಂಬಲವಿದೆ ಎನ್ನುವುದರ ಜೊತೆಗೆ ವೀರಶೈವ ಧರ್ಮ ಎನ್ನುವುದೇ ಸುಳ್ಳು, ಅದೊಂದು ಪುರೋಹಿತಶಾಹಿ ಎಂದು ನೇರವಾಗಿ ಜರಿದರು. ಜಾತಿವ್ಯವಸ್ಥೆಯಲ್ಲಿ ಯಾವುದೋ ಜಾತಿಯಲ್ಲಿ ಹುಟ್ಟಲೇಬೇಕು. ಹಾಗೆ
ನಾನು ಜಂಗಮನಾಗಿ ಹುಟ್ಟಿದ್ದೇನೆ. ವೀರಶೈವ ಮತ್ತೂಂದು ಪುರೋಹಿತಶಾಹಿ ವ್ಯವಸ್ಥೆ. ಅದನ್ನು ಒಪ್ಪಲು ಸಾಧ್ಯವೇ ಇಲ್ಲ. ಲಿಂಗಾಯತ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎನ್ನುವುದರ ಮೂಲಕ ಪ್ರಸ್ತುತ ನಡೆಯುತ್ತಿರುವ ಲಿಂಗಾಯತ ಧರ್ಮ
ಹೋರಾಟಕ್ಕೆ ವೇದಿಕೆಯ ಮೂಲಕ ಮತ್ತೂಮ್ಮೆ ಬೆಂಬಲ ಘೋಷಿಸಿದರು. ಪೇಜಾವರರು ಹಾಗೆ ಮಾತನಾಡುವುದು
ಅನಿವಾರ್ಯ!: ಉಡುಪಿ ಧರ್ಮ ಸಂಸದ್‌ನಲ್ಲಿ ಪೇಜಾವರ ಶ್ರೀಗಳು, ಸಂವಿಧಾನಕ್ಕೆ ತಿದ್ದುಪಡಿ ಮಾಡಿ ಎಂದು ನೀಡಿದ ಹೇಳಿಕೆ ಸರಿಯೇ ಎಂಬ ಪ್ರಶ್ನೆಗೆ ಚಂಪಾ ಸಂಯಮದಿಂದ ಉತ್ತರಿಸಿ, ಪೇಜಾವರ ಶ್ರೀಗಳು ನನಗೆ ವೈಯಕ್ತಿಕವಾಗಿ ಪ್ರೀತಿಪಾತ್ರರು.
ಆದರೆ, ಅವರು ಮೊದಲಿಂದಲೂ ಪ್ರಶ್ನಾರ್ಹ ಸ್ವಾಮಿ. 5 ಸಾವಿರ ವರ್ಷಗಳ ನಂಬಿಕೆಯನ್ನು ಹೊಂದಿರುವ ಅವರು ಹಾಗೆಯೇ ಮಾತನಾಡಬೇಕಾಗುತ್ತದೆ. ಇಲ್ಲದಿದ್ದರೆ ಅವರನ್ನು ಕೃಷ್ಣಮಠದಿಂದ ಹೊರಹಾಕುತ್ತಾರೆ. ಅದೇ ರೀತಿ ನಾವು ಅದರ ವಿರುದ್ಧದ
ಹೋರಾಟವನ್ನು ಜಾರಿಯಲ್ಲಿಡಬೇಕಾಗುತ್ತದೆ. ನಾವು ವಿರುದ್ಧ ನಂಬಿಕೆಯವರನ್ನು ಕೆರಳಿಸುವುದಕ್ಕಿಂತ ಪ್ರಭಾವಿಸಬೇಕು. ಅವರನ್ನು ಬೈಯುತ್ತಾ ಕೂರುವುದರ ಬದಲು ನಮ್ಮನ್ನು ಸುಧಾರಿಸಿಕೊಳ್ಳಬೇಕು ಎಂದು ಭಿನ್ನನುಡಿಯಾಡಿದರು.
Related Articles
ಕಾರ್ಮಿಕರಿಗೆ, ಉದ್ಯೋಗಿಗಳಿಗೆ, ಕಲಾವಿದರಿಗೆ ಅನ್ಯಾಯವಾಗುತ್ತದೆ. ಆದ್ದರಿಂದ ಅದು ಬೇಡ. ಆದರೆ ಶೈಕ್ಷಣಿಕ ಮೌಲ್ಯವುಳ್ಳ ಚಲನಚಿತ್ರವನ್ನು ಡಬ… ಮಾಡುವುದಕ್ಕೆ ನನ್ನ ಬೆಂಬಲವಿದೆ ಎಂದೂ ಸ್ಪಷ್ಟಪಡಿಸಿದರು.
Advertisement
ಕನ್ನಡ ಸಾಹಿತ್ಯ ತನ್ನ ಮಿತಿ ಮೀರಬೇಕು: ಕನ್ನಡ ಸಾಹಿತ್ಯ ದಲಿತ ಚಳವಳಿ, ಸ್ತ್ರೀಶೋಷಣೆ, ಶೋಷಣೆ ಇಂತಹದ್ದರಿಂದಲೇ ತುಂಬಿಹೋಗಿದೆ. ಇನ್ನೂ ಎಷ್ಟು ಬಾರಿ ಇದನ್ನು ನಾವು ಕೇಳಬೇಕೆಂಬ ತಕರಾರನ್ನು ಚಂಪಾ ಒಪ್ಪಿಕೊಂಡರು. ಸಾಹಿತ್ಯದಲ್ಲಿ ವೈದ್ಯರು,ಶಿಕ್ಷಕರು ಸೇರಿ ಇನ್ನಿತರ ಜೀವನವೇಕೆ ಬರಬಾರದು, ಕನ್ನಡ ಸಾಹಿತ್ಯವೇಕೆ ಸೀಮಿತಗೊಳ್ಳಬೇಕು ಎಂಬುದನ್ನು ಅವರೂ ಒಪ್ಪಿಕೊಂಡು ಸಾಹಿತ್ಯ ಎಲ್ಲ ದಿಕ್ಕಿನಲ್ಲೂ ಹರಡಿಕೊಳ್ಳುವುದರ ಅಗತ್ಯವನ್ನು ಬೆಂಬಲಿಸಿದರು. ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ:
ಕರ್ನಾಟಕದಲ್ಲಿ ಕನ್ನಡಿಗರಿಗರಿಗೆ ಉದ್ಯೋಗ ನೀಡುವ ಸರೋಜಿನಿ ಮಹಿಷಿ ವರದಿ ಜಾರಿಯಾಗಬೇಕು. ಈಗಿನ ಕಾಲಕ್ಕೆ ತಕ್ಕಂತೆ ಅದನ್ನು ಬದಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ್ದೇವೆ. ಅದನ್ನು ಗಂಭೀರವಾಗಿ ಪರಿಗಣಿಸುವುದಾಗಿ ಮುಖ್ಯಮಂತ್ರಿಗಳೂ ಬೆಂಬಲಿಸಿ¨ªಾರೆ ಎಂದು ಚಂಪಾ ಭರವಸೆಯಿತ್ತರು. ಎಲ್ಲ ಕಾಲದಲ್ಲೂ ಬಂಡಾಯವೇಳಲು ಸಾಧ್ಯವಿಲ್ಲ:
ಎಲ್ಲ ಕಾಲದಲ್ಲೂ ನಾವು ವ್ಯವಸ್ಥೆಯ ವಿರೋಧಿಗಳಾಗಲು ಸಾಧ್ಯವಿಲ್ಲ. ಆಗ ನಾವೇ ಮೂಲಭೂತವಾದಿಗಳೆನಿಸುತ್ತೇವೆ. ನಾವು ಯಾಕೆ
ವಿರೋಧ ಮಾಡಬೇಕೆಂಬ ಅರಿವಿರಬೇಕು. ನಮ್ಮ ಕನಸು ಸಾಕಾರವಾಗಿ¨ªಾಗ ವಿರೋಧವೇಕೆ ಎಂದು ಪ್ರಶ್ನಿಸಿದರು. ಹಿಂದೆ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಶ್ನಿಸಿದ್ದಕ್ಕೆ ಅದು ದಾರಿ ತಪ್ಪಿದ್ದೇ ಕಾರಣ. ಈಗ ಅದನ್ನು ಬೆಂಬಲಿಸಲು ಅದು ದಾರಿ ಹಿಡಿದಿರುವುದೇ
ಕಾರಣವಾಗಿದೆ ಎಂದು ಚಂಪಾ ವಿವರಿಸಿದರು. ಪ್ರತ್ಯೇಕ ರಾಜ್ಯಕ್ಕೆ ವಿರೋಧ
ಉತ್ತರ ಕರ್ನಾಟಕದಲ್ಲಿ ಇತ್ತೀಚೆಗೆ ಪ್ರತ್ಯೇಕ ರಾಜ್ಯದ ಕೂಗೆದ್ದಿದೆ ಇದನ್ನು ನಿರ್ಲಕ್ಷಿಸಬೇಡಿ ಎಂದ ಚಂಪಾ, ನಾನು ಪ್ರತ್ಯೇಕ ರಾಜ್ಯದ ಕೂಗಿಗೆ ವಿರೋಧಿ, ಅಖಂಡ ಕರ್ನಾಟಕಕ್ಕೆ ನನ್ನ ಬೆಂಬಲ. ಆದರೆ, ಅಭಿವೃದ್ಧಿ ಎಲ್ಲೋ ಕೆಲವು ಭಾಗಗಳಿಗೆ ಸೀಮಿತವಾಗಿದೆ. ಈ
ನೋವನ್ನು ಬೆಂಗಳೂರಿನಲ್ಲಿರುವ ಆಡಳಿತಗಾರರು ಅರ್ಥ ಮಾಡಿಕೊಂಡರೆ ಒಳ್ಳೆಯದು ಎಂದರು. ಜಾತ್ಯತೀತ ಪಕ್ಷಗಳಿಗೆ ಮತ ನೀಡಿ ಎಂದಿದ್ದು ಸರಿ ಸಾಹಿತ್ಯವನ್ನು ವಿಶಾಲ ದೃಷ್ಟಿಯಿಂದ ನೋಡಬೇಕು. ಆದ್ದರಿಂದಲೇ ಸಮ್ಮೇಳನದಲ್ಲಿ ಕೃಷಿ, ಮಾಧ್ಯಮ ಹೀಗೆ ಹಲವು ರೀತಿಯ ಗೋಷ್ಠಿಗಳು ಜರುಗುತ್ತವೆ. ಇಂತಹ ಸಮ್ಮೇಳನದಲ್ಲಿ ಜಾತ್ಯತೀತ ಪಕ್ಷಗಳಿಗೆ ಮತ ನೀಡಿದ್ದರಲ್ಲಿ ತಪ್ಪೇನಿಲ್ಲ ಎಂದು ಅತ್ಯಂತ ವಿವಾದಿತ ಪ್ರಶ್ನೆಗೆ ಉತ್ತರ ನೀಡಿದರು. ಈ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ಚಂಪಾ ಜಾತ್ಯತೀತ ಪಕ್ಷಗಳಿಗೆ ಮತನೀಡಿ ಎಂದಿದ್ದರು. ಅದು ಎಲ್ಲೆಡೆ ಟೀಕೆಗೆ ಕಾರಣವಾಗಿತ್ತು. ಅದಕ್ಕೆ ಪ್ರತಿಯಾಗಿ ಚಂಪಾ ಮತ್ತೂಮ್ಮೆ ಸಮರ್ಥಿಸಿಕೊಂಡರು. ರಾಜಕೀಯ
ಎನ್ನುವುದು ಅಸಮಾನತೆ ಸರಿಪಡಿಸಲು ನಮಗಿರುವ ಆಯ್ಕೆಗಳಲ್ಲಿ ಒಂದು. ಅದರಲ್ಲಿ ಜಾತ್ಯತೀತ ಪಕ್ಷಗಳನ್ನು ಆಯ್ದುಕೊಳ್ಳಿ ಎಂದಿದ್ದೇನೆ. ಇದಕ್ಕೆ ನಾನು ಬದ್ಧ ಎಂದರು.