ಉಡುಪಿ: ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇಗುಲದಲ್ಲಿ ಎ. 28ರಿಂದ ಮೇ 2ರ ತನಕ ಆದಿ ಬ್ರಹ್ಮಸ್ಥಾನ, ಆದಿನಾಗ ಮತ್ತು ಪರಿವಾರ ದೈವಗಳ ಪುನಃಪ್ರತಿಷ್ಠಾ ಕಲಶಾಭಿಷೇಕ ಮತ್ತು ರಾಜ ಗೋಪುರ, ನಗಾರಿ ಗೋಪುರ ಹಾಗೂ ಭೋಜನ ಶಾಲೆ ಸಮರ್ಪಣೆ ಕಾರ್ಯಕ್ರಮಗಳು ಜರಗಲಿವೆ.
Advertisement
ತತ್ಸಂಬಂಧ ಎ. 28ರಂದು ಬೆಳಗ್ಗೆ 9.30ರಿಂದ ಶ್ರೀ ವೀರಭದ್ರ ದೇಗುಲದಲ್ಲಿ ಸಾಮೂಹಿಕ ಪ್ರಾರ್ಥನೆ, ಭೂಶುದ್ಧಿ ಹೋಮ, ಭೂವರಾಹ ಹೋಮ, ಸಂಜೆ 6ರಿಂದ ಆದಿಬ್ರಹ್ಮಸ್ಥಾನ ಮತ್ತು ನಾಗಬನದಲ್ಲಿ ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ ವಾಸ್ತು ಹೋಮ, ರಾಕ್ಷೋಘ್ನ ಹೋಮ, ವಾಸ್ತು ಬಲಿ, ಅನ್ನಬ್ರಹ್ಮ ಭೋಜನ ಶಾಲೆಯ ವಾಸ್ತು ಹೋಮ, ಎ. 29ರಂದು ಬೆಳಗ್ಗೆ ಆದಿಬ್ರಹ್ಮಸ್ಥಾನ ಮತ್ತು ಶ್ರೀ ವೀರಭದ್ರ ದೇಗುಲದಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ಸಂಜೆ ಶ್ರೀ ವೀರಭದ್ರ ದೇಗುಲದಲ್ಲಿ ರಾಜಗೋಪುರ, ನಗಾರಿ ಗೋಪುರ, ವಾಲಗ ಮಂಟಪ,ಪರಿವಾರ ದೇವರಲ್ಲಿ ವಾಸ್ತು ಹೋಮ, ಎ. 30ರಂದು ಬೆಳಗ್ಗೆ ಆದಿಬ್ರಹ್ಮಸ್ಥಾನ ಮತ್ತು ಶ್ರೀ ವೀರಭದ್ರ ದೇಗುಲದಲ್ಲಿ ಮಹಾಸುದರ್ಶನ ಯಾಗ, ಸಂಜೆ ಆದಿಬ್ರಹ್ಮಸ್ಥಾನ ಮತ್ತು ಪರಿವಾರ ದೇವರ ಬಿಂಬ ಶುದ್ಧಿ, ಅಧಿವಾಸ ಪೂಜೆ, ಅಘೋರ ಹೋಮಗಳು ನಡೆಯಲಿವೆ.
ಆದಿಬ್ರಹ್ಮ, ಶ್ರೀ ವೀರಭದ್ರಹಾಗೂ ಬ್ರಹ್ಮಲಿಂಗೇಶ್ವರ ದೇವರಿಗೆ ಬ್ರಹ್ಮಕುಂಭಾಭಿಷೇಕ, ಪ್ರಸನ್ನ ಪೂಜೆ, 9.30ಕ್ಕೆ ನಾಗದೇವರಿಗೆ ಪಂಚವಿಂಶತಿ ಕಲಶಾಭಿಷೇಕ ಪೂರ್ವಕ ಪ್ರಾಯಶ್ಚಿತ್ತ ಹೋಮ ಪೂರ್ವಕ ಆಶ್ಲೇಷಾ ಬಲಿ ಜರಗಲಿದೆ. ಮೇ 2ರಂದು ಅಪರಾಹ್ನ 12ರಿಂದ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಶೀರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು. ಶಾಸಕ ವಿನಯ ಕುಮಾರ್ ಸೊರಕೆ ಅಧ್ಯಕ್ಷತೆ ವಹಿಸಲಿದ್ದಾರೆ.
Related Articles
Advertisement
ಪ್ರತಿದಿನ ಸಂಜೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಎ. 28ರಿಂದ ಎ. 30ರ ವರೆಗೆ ಮಧ್ಯಾಹ್ನ ಮತ್ತು ರಾತ್ರಿ ಭೋಜನ ಪ್ರಸಾದ, ಮೇ 1 ಮತ್ತು 2ರಂದು ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ತಿಳಿಸಿದೆ.