Advertisement

ವೀಣಾವರ್ಷ ವೈಭವ: 25 ವೀಣಾ ವಾದಕರಿಂದ ವಾದನ

03:45 AM Jul 03, 2017 | Team Udayavani |

ಉಡುಪಿ: ಶ್ರೀಕೃಷ್ಣಮಠ ಪರ್ಯಾಯ ಶ್ರೀಪೇಜಾವರ ಮಠದ ಆಶ್ರಯದಲ್ಲಿ ಮಣಿಪಾಲದ ಡಾ|ಪಳ್ಳತ್ತಡ್ಕ ಕೇಶವ ಭಟ್‌ ಮೆಮೋರಿಯಲ್‌ ಟ್ರಸ್ಟ್‌ ರವಿವಾರ ರಾಜಾಂಗಣದಲ್ಲಿ ಪ್ರಸ್ತುತ ಪಡಿಸಿದ ವೀಣಾ ವರ್ಷ ವೈಭವ, ಮಣಿಪಾಲದ ಕಲಾಸ್ಪಂದನದ 22ನೆಯ ವಾರ್ಷಿಕೋತ್ಸವದಲ್ಲಿ 25 ವೀಣಾ ವಾದಕರು ಏಕಕಾಲದಲ್ಲಿ ವೀಣೆಯನ್ನು ನುಡಿಸಿದರು. 

Advertisement

16 ವರ್ಷ ಪ್ರಾಯದ ರಮಣ ಬಾಲಚಂದ್ರನ್‌ ವೀಣಾ ವಾದನ ಕಛೇರಿಯನ್ನು ನಡೆಸಿಕೊಟ್ಟನು. ಬೆಳಗ್ಗೆ ಶ್ರೀಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಟ್ರಸ್ಟ್‌ ಅಧ್ಯಕ್ಷೆ ದೇವಕಿ ಕೆ. ಭಟ್‌ ವಹಿಸಿದ್ದರು. ಸರೋಜಾ ಆರ್‌. ಆಚಾರ್‌, ಡಾ| ಅನುಸೂಯ ದೇವಿ, ಡಾ| ಬಾಲಚಂದ್ರ ಆಚಾರ್‌, ವೀಣಾ ಶಿಕ್ಷಕಿ ಪವನ ಆಚಾರ್‌ ಉಪಸ್ಥಿತರಿದ್ದರು. ಶ್ರೀವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

 

ಎಂ.ರಾಮದಾಸ ಆಚಾರ್ಯ ಸಾಮಗನ ಮಾಡಿದರೆ ಪವನ ಆಚಾರ್‌ ವೀಣೆಯನ್ನು ಸಾಮಗಾನದ ರೀತಿ ನುಡಿಸಿದರು. ಅರ್ಜುನ್‌, ಡಾ|ಬಾಲಕೃಷ್ಣನ್‌, ವೈಭವ್‌ ಅವರು ವೀಣಾ, ವೇಣು, ವಯಲಿನ್‌ ನುಡಿಸಿದರು. ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ಶ್ರೀಕೃಷ್ಣನ ಆಗಮನ ಯಕ್ಷ ನೃತ್ಯಕ್ಕೆ ವೀಣಾವಾದನ ಪ್ರಯೋಗ ನಡೆಯಿತು. ಕಿಶೋರ ವೀಣೆಯಲ್ಲಿ ರಾಮಕೃಷ್ಣನ್‌ ಎಸ್‌., ಪಂಚವೀಣಾ ವಾದನವನ್ನು ವಿಪಂಚಿ ಬಳಗದ ಪವನ, ವೀನಾ ಉಪಾಧ್ಯ, ಸುಮಂಗಲಾ ಹೆಬ್ಟಾರ್‌, ಶಿಲ್ಪಾ ಜೋಶಿ, ಜಾಹ್ನವಿ ನುಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next