Advertisement

‘ವೇದ’ ಕಲರ್ ಫುಲ್‌ ಪ್ರೀ-ರಿಲೀಸ್‌ ಇವೆಂಟ್‌

11:30 AM Dec 22, 2022 | Team Udayavani |

ನಟ ಶಿವರಾಜಕುಮಾರ್‌ ಅಭಿನಯದ “ವೇದ’ ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಅಂದಹಾಗೆ, “ವೇದ’ ಇದೇ ಡಿಸೆಂಬರ್‌ 23ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದು, ಕನ್ನಡದ ಜೊತೆಗೆ, ತಮಿಳು ಮತ್ತು ತೆಲುಗಿನಲ್ಲೂ “ವೇದ’ ತೆರೆ ಕಾಣುತ್ತಿದೆ.

Advertisement

ಈಗಾಗಲೇ ಭರ್ಜರಿಯಾಗಿ “ವೇದ’ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ರಾಜ್ಯದಾದ್ಯಂತ ಸುಮಾರು ಐದಕ್ಕೂ ಹೆಚ್ಚು ಕಡೆಗಳಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮಗಳನ್ನು ನಡೆಸ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಇನ್ನು “ವೇದ’ ಶಿವರಾಜಕುಮಾರ್‌ ಅಭಿನಯದ 125ನೇ ಸಿನಿಮಾವಾಗಿದ್ದು, ಶಿವರಾಜಕುಮಾರ್‌ ಪತ್ನಿ ಗೀತಾ ಶಿವರಾಜಕುಮಾರ್‌ “ಗೀತಾ ಪಿಕ್ಚರ್’ ಬ್ಯಾನರ್‌ನಲ್ಲಿ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.

“ವೇದ’ ಸಿನಿಮಾದ ಬಿಡುಗಡೆಗೂ ಮುನ್ನ, ನಾಗವಾರದಲ್ಲಿರುವ ನಟ ಶಿವರಾಜಕುಮಾರ್‌ ಅವರ ಸ್ವಗೃಹದಲ್ಲಿ “ವೇದ’ ಸಿನಿಮಾದ ಪ್ರೀ-ರಿಲೀಸ್‌ ಇವೆಂಟ್‌ ನಡೆಯಿತು. ವರ್ಣರಂಜಿತವಾಗಿ ನಡೆದ “ವೇದ’ ಪ್ರೀ-ರಿಲೀಸ್‌ ಇವೆಂಟ್‌ನಲ್ಲಿ ನಟ ಶಿವರಾಜಕುಮಾರ್‌, ನಿರ್ಮಾಪಕಿ ಗೀತಾ ಶಿವರಾಜಕುಮಾರ್‌, ನಿರ್ದೇಶಕ ಎ. ಹರ್ಷ, ನಾಯಕಿ ಗಾನವಿ ಲಕ್ಷ್ಮಣ್‌, ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ, ನಟಿಯರಾದ ಶ್ವೇತಾ ಚೆಂಗಪ್ಪ, ಅದಿತಿ ಸಾಗರ್‌, ಲಾಸ್ಯಾ ನಾಗರಾಜ್‌, ಸೇರಿದಂತೆ ಸಿನಿಮಾದ ಕಲಾವಿದರು ಮತ್ತು ತಂತ್ರಜ್ಞರು ಹಾಜರಿದ್ದು, ಸಿನಿಮಾದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.

ಎಲ್ಲರ ಪ್ರೀತಿ, ಅಭಿಮಾನದಿಂದ ಇಷ್ಟು ವರ್ಷ ಸಿನಿಮಾರಂಗದಲ್ಲಿ ನಡೆದು ಬಂದಿದ್ದೇನೆ. ಜನ, ಮಾಧ್ಯಮಗಳು ಪ್ರತಿ ಸಿನಿಮಾದಲ್ಲೂ ನನ್ನನ್ನು ತಿದ್ದಿ ಬೆಳೆಸಿದ್ದಾರೆ. ನನ್ನ ಈ ಜರ್ನಿಯ ಹಿಂದೆ ಎಲ್ಲರ ಸಹಕಾರ, ಬೆಂಬಲ, ಪ್ರೋತ್ಸಾಹ, ಪ್ರೀತಿ, ಹಾರೈಕೆ ಇದೆ. “ವೇದ’ ಸಿನಿಮಾದ ಮೇಲೂ ಹಿಂದಿನಂತೆಯೇ ಎಲ್ಲರ ಆಶೀರ್ವಾದವಿರಲಿ. “ವೇದ’ ಎಲ್ಲರಿಗೂ ಇಷ್ಟವಾಗುವಂತ ಒಳ್ಳೆಯ ಸಿನಿಮಾವಾಗಲಿದೆ ಎಂಬ ನಂಬಿಕೆಯಿದೆ.- ಶಿವರಾಜಕುಮಾರ್‌, ನಟ

Advertisement

ಶಿವರಾಜಕುಮಾರ್‌ ಅವರ ಸಿನಿಮಾವೊಂದನ್ನು ನಮ್ಮದೇ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಬೇಕೆಂಬುದು ನಮ್ಮ ಹಲವು ವರ್ಷಗಳ ಕನಸು. ಆ ಕನಸು ಈಗ “ವೇದ’ ಸಿನಿಮಾದ ಮೂಲಕ ನನಸಾಗುತ್ತಿದೆ. ಇದು ಶಿವರಾಜಕುಮಾರ್‌ ಅವರ 125ನೇ ಸಿನಿಮಾ. ನಮ್ಮ ಬ್ಯಾನರ್‌ನ ಮೊದಲನೇ ಸಿನಿಮಾ.: – ಗೀತಾ ಶಿವರಾಜಕುಮಾರ್‌, ನಿರ್ಮಾಪಕಿ

ಇದೊಂದು ಕಂಪ್ಲೀಟ್‌ ಮಾಸ್‌ ಕಂಟೆಂಟ್‌, ಜೊತೆಗೊಂದು ಮೆಸೇಜ್‌ ಇರುವಂಥ ಸಿನಿಮಾ. 1960 ಮತ್ತು 1980ರ ದಶಕದ ಹಿನ್ನೆಲೆಯಲ್ಲಿ ಇಡೀ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ಶಿವಣ್ಣ ಅಭಿಮಾನಿಗಳಿಗೆ “ವೇದ’ ಖಂಡಿತವಾಗಿಯೂ ಡಿಫ‌ರೆಂಟ್‌ ಎಕ್ಸ್‌ಪೀರಿಯನ್ಸ್‌ ಕೊಡುವ ಸಿನಿಮಾ. ಈಗಾಗಲೇ “ವೇದ’ ಸಿನಿಮಾದ ಹಾಡುಗಳು, ಟ್ರೇಲರ್‌ ಎಲ್ಲದಕ್ಕೂ ಬಿಗ್‌ ರೆಸ್ಪಾನ್ಸ್‌ ಸಿಗುತ್ತಿದೆ.:-  ಎ. ಹರ್ಷ, ನಿರ್ದೇಶಕ.

Advertisement

Udayavani is now on Telegram. Click here to join our channel and stay updated with the latest news.