Advertisement

ವಠಾರ ಶಾಲೆಗಳಿಗೆ ಉತ್ತಮ ಸ್ಪಂದನೆ

06:47 PM Aug 19, 2020 | Suhan S |

ಸಂಡೂರು: ತಾಲೂಕಿನಾದ್ಯಂತ ವಿದ್ಯಾಗಮ ವಠಾರ ಶಾಲೆಗಳು ಬಹು ಚುರುಕಿನಿಂದಲೇ ಪ್ರಾರಂಭವಾಗಿವೆ. ಕಾರಣ ಇದಕ್ಕೆ ತಾಲೂಕಿನ ಬಹಳಷ್ಟು ಪಾಲಕರು ಸ್ಪಂದಿಸುತ್ತಿದ್ದು ಕೋವಿಡ್ ಕಂಠಕದ ಮಧ್ಯದಲ್ಲಿಯೇ ಕಲಿಕೆ ಪ್ರಾರಂಭವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ.

Advertisement

ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ 273 ವಿದ್ಯಾರ್ಥಿಗಳು ನೋಂದಾಯಿಸಿದ್ದಾರೆ. ಇದರಲ್ಲಿ ವಠಾರ ಶಾಲೆಗೆ 6 ಬ್ಲಾಕ್‌ಗಳನ್ನು ಮಾಡಿದ್ದು 1 ಕೇಂದ್ರದಲ್ಲಿ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಗಾಳೆಮ್ಮ ದೇವಸ್ಥಾನದಲ್ಲಿ ನಡೆಯುವ ಕೇಂದ್ರಕ್ಕೆ ಅತಿ ಹೆಚ್ಚು ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಈ ಗ್ರಾಮದ ಶಾಲೆಯಲ್ಲಿ ಒಟ್ಟು 8 ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದು ಸರತಿ ಮೇಲೆ ವಿದ್ಯಾರ್ಥಿಗಳನ್ನು ವಠಾರ ಶಾಲೆಗೆ ಬರುವಂತೆ ಮಾಡುತ್ತಿದ್ದಾರೆ. ಅಲ್ಲದೆ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನೆ ಉತ್ತರಗಳನ್ನು ಝರಾಕ್ಸ್‌ ಪ್ರತಿಗಳಲ್ಲಿ ವಿತರಿಸುವ ಕಾರ್ಯವೂ ನಡೆಯುತ್ತಿದೆ. ಈ ಬಗ್ಗೆ ಶಿಕ್ಷಕರಾದ ಬಸವರಾಜ ಅವರು ಪ್ರತಿಕ್ರಿಯಿಸಿ, ಶಿಕ್ಷಕರು ಅಸಕ್ತಿಯಿಂದಲೇ ಭಾಗವಹಿಸುತ್ತಿದ್ದು ಅದಕ್ಕೆ ಹೊಂದಿಕೊಂಡಂತೆ ವಠಾರಗಳಲ್ಲಿತರಗತಿ ತೆಗೆದುಕೊಳ್ಳಲು ಮುಂದಾದಾಗ ಮೊದಲು ಭಯಪಡುತ್ತಿದ್ದರು. ಆದರೆ ಈಗ ಮಾಸ್ಕ್ ಮತ್ತು ಸಾಮಾಜಿಕ ಅಂತರದೊಂದಿಗೆ ಮಕ್ಕಳನ್ನು ಆಕರ್ಷಿಸಲಾಗುತ್ತಿದೆ. ಅವರಿಗೆ ಈಗಾಗಲೇ ಪಠ್ಯಪುಸ್ತಕಗಳನ್ನು ಸಹ ವಿತರಿಸಿದ್ದೇವೆ. ಶಾಲೆಗಳಲ್ಲಿ ಅವರಿಗೆ ಪಾಠಗಳನ್ನು ಹೇಳುವ ಅದಕ್ಕೆ ಬೇಕಾದ ನೋಟ್ಸ್‌ ನ್ನು ಶಿಕ್ಷಕರೇ ಸಿದ್ಧಪಡಿಸಿ ನೀಡುತ್ತಿದ್ದೇವೆ, ಇದರಿಂದ ವಿದ್ಯಾರ್ಥಿಗಳು ಅಸಕ್ತಿವಹಿಸಿದ್ದಾರೆ.

ಮಳೆಗಾಲ ಮತ್ತು ಮುಂಗಾರು ಪರಿಣಾಮ ವಿದ್ಯಾರ್ಥಿಗಳು ತೋಟಗಳಿಗೂ, ತಮ್ಮ ಕೃಷಿ ಜಮೀನುಗಳಿಗೂ ಹೋಗುತ್ತಾರೆ, ಅದರೆ ಬೆಳಗಿನಜಾವ ಬೇಗ ಹೋದರೆ ಎಲ್ಲ ವಿದ್ಯಾರ್ಥಿಗಳು ಸಿಗುತಾರೆ. ಆದ್ದರಿಂದ ಶಿಕ್ಷಕರು ಆ ರೀತಿಯ ಎಲ್ಲ ಪ್ರಯತ್ನದೊಂದಿಗೆ ಕಾರ್ಯನಿರ್ವಹಿಸುತ್ತೇವೆ ಎನ್ನುತ್ತಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಐ.ಅರ್‌. ಅಕ್ಕಿ ಪ್ರತಿಕ್ರಿಯಿಸಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಮಹತ್ತರ ಉದ್ದೇಶವನ್ನು ಪ್ರತಿಯೊಬ್ಬ ಶಿಕ್ಷಕರು ಹೊಂದಿದ್ದು ಅದರಂತೆ ವಠಾರ ಶಾಲೆ ಪ್ರಾರಂಭ ಮಾಡಿದ್ದೇವೆ ಉತ್ತಮ ಪ್ರೋತ್ಸಾಹ, ಪ್ರತಿಕ್ರಿಯೆ ಸಿಗುತ್ತಿದೆ, ಕೊರೊನಾ ಭಯ ಸ್ವಲ್ಪ ಕಡಿಮೆಯಾಗುತ್ತಿದೆ ಎನ್ನುತ್ತಾರೆ. ಮಕ್ಕಳ ಹಾಜರಾತಿ ಕಡಿಮೆ ಇದ್ದರೂ ಸಹ ಸರ್ಕಾರಿ ಶಾಲೆಗಳ ವಠಾರ ಶಾಲೆ ಉತ್ತಮವಾಗಿ ಪ್ರಾರಂಭವಾಗಿದೆ.

ಮತ್ತೂಂದು ಕಡೆ ಖಾಸಗಿ ಶಾಲೆಗಳು ಆನ್‌ಲೈನ್‌ ಕ್ಲಾಸ್‌, ವಿಡಿಯೋ ಕ್ಲಾಸ್‌ ಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೆ ಸ್ಪರ್ಧೆಯ ರೀತಿಯಲ್ಲಿ ಸರ್ಕಾರಿ ಶಾಲೆಗಳು ಮುಂದಾಗಿರುವುದು ಉತ್ತಮ ಬೆಳವಣಿಗೆಯೇ ಸರಿ ಎನ್ನಬಹುದು, ಇನ್ನೂ ತಾಲೂಕಿನ ಪ್ರತಿಯೊಂದು ಶಾಲೆಗಳು ಸಹ ಈ ರೀತಿ ನಡೆದರೆ ಶಿಕ್ಷಣ ವಂಚಿತರ ಸಂಖ್ಯೆ ಇಳಿಮುಖವಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next