Advertisement

ವಾಟಾಳ್‌ರನ್ನು ಪರಿಷತ್ತಿಗೆ ನಾಮನಿರ್ದೇಶನ ಮಾಡಿ

11:59 AM Apr 19, 2017 | Team Udayavani |

ಬೆಂಗಳೂರು: ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌ ಅವರನ್ನು ರಾಜ್ಯಸರ್ಕಾರ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಳಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಎಂ.ವಿ ರಾಜಶೇಖರನ್‌ ಒತ್ತಾಯಿಸಿದ್ದಾರೆ.

Advertisement

ನಗರದ ವುಡ್‌ಲ್ಯಾಂಡ್‌ ಹೋಟೆಲ್‌ನಲ್ಲಿ ಎಸ್ಸೆನ್‌ ಕೆಂಗಲ್‌ ವಿಚಾರ ವೇದಿಕೆ ಆಯೋಜಿಸಿದ್ದ “ಸದನದಲ್ಲಿ ವಾಟಾಳ್‌ ನಾಗರಾಜ್‌ 50 ವರ್ಷಗಳ ಅನುಭವ, ಹೋರಾಟಗಳ ಮೆಲುಕು ”ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ಸಚಿವ ರಾಜಶೇಖರನ್‌, “ಹೋರಾಟಗಾರ ವಾಟಾಳ್‌ ನಾಗರಾಜ್‌, ಕನ್ನಡ ಮತ್ತು ಕರ್ನಾಟಕದ ಅಭಿವೃದ್ಧಿಗೆ ಗಣನೀಯ ಸೇವೆ ಸಲ್ಲಿಸಿದ್ದಾರೆ.

ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕನ್ನಡಿಗರಿಗೆ ಉದ್ಯೋವಕಾಶಗಳು ದೊರೆಯುತ್ತಿರುವುದರ ಹಿಂದೆ ನಾಗರಾಜ್‌ ಹೋರಾಟವಿದೆ. ಕನ್ನಡಕ್ಕಾಗಿ ಅವಿರತ ಹೋರಾಟ ನಡೆಸುತ್ತಿರುವ ಅವರ ಸೇವೆ  ಪರಿಗಣಿಸಿ, ರಾಜ್ಯ ಸರ್ಕಾರ ವಿಧಾನಪರಿಷತ್ತಿಗೆ ನಾಮನಿರ್ದೇಶನಗೊಳಿಸಲಿ,’ ಎಂದು ಆಗ್ರಹಿಸಿದರು.

ನಿವೃತ್ತ ನ್ಯಾಯಮೂರ್ತಿ ಎಸ್‌.ಆರ್‌. ನಾಯಕ್‌ ಮಾತನಾಡಿ, “ನೆಲ-ಜಲ, ಸಂಸ್ಕೃತಿಗೆ ಧಕ್ಕೆಯುಂಟಾದಾಗ ವಾಟಾಳ್‌ ನಾಗರಾಜ್‌ ಸಿಡಿದೆದ್ದು ಹೋರಾಟ ಮಾಡುತ್ತಾರೆ.ಕನ್ನಡಕ್ಕಾಗಿ ಅವರು ಸಲ್ಲಿಸಿರುವ ಹೋರಾಟ, ತ್ಯಾಗ ಅವಿಸ್ಮರಣೀಯ,’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನಿವೃತ್ತ ನ್ಯಾಯಮೂರ್ತಿ ಎಂ. ರಾಮಕೃಷ್ಣ  ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next