Advertisement

ಕರ್ನಾಟಕದಲ್ಲಿ ಏನಾಗುತ್ತಿದೆ ಅಂತ ಅರ್ಥವಾಗುತ್ತಿಲ್ಲ : ವಾಟಾಳ್ ನಾಗರಾಜ್

05:35 PM Apr 06, 2022 | Team Udayavani |

ಬೆಂಗಳೂರು: ಕರ್ನಾಟಕದಲ್ಲಿ ಏನಾಗುತ್ತಿದೆ ಅಂತ ಅರ್ಥವಾಗುತ್ತಿಲ್ಲ ಎಂದು ಕನ್ನಡ ಚಳವಳಿ ಹೋರಾಟಗಾರ, ಮಾಜಿ ಶಾಸಕ ವಾಟಾಳ್ ನಾಗರಾಜ್ ಬುಧವಾರ ಕಿಡಿ ಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರ ಕವಿ ಕುವೆಂಪು ಸಾಹಿತ್ಯ ಬರೆದಿದ್ದಾರೆ. ಎಲ್ಲಾ ಸಭೆ ಸಮಾರಂಭಗಳಲ್ಲಿ ಈ ಹಾಡನ್ನ ಹೇಳುತ್ತಿದ್ದಾರೆ. ಹಿಂದೂ, ಕ್ರೈಸ್ತ, ಮುಸಲ್ಮಾನ ಅಂತ ಸಾಲು ಇದೆ, ಇದು ಯಾರಿಗೂ ಅರ್ಥ ಆಗುತ್ತಿಲ್ಲ. ನಾಡಿಗೆ ಅಪಚಾರ ಆಗಬಾರದು, ಭವ್ಯ ನಾಡಿದು ಎಂದು ತೀವ್ರ ಬೇಸರ ಹೊರ ಹಾಕಿದರು.

ನಾವು ರಾಜ್ಯವನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದೇವೆ ಎಂದು ಅಂದುಕೊಂಡಿದ್ದಾರೆ.ಒಂದಾದ ಮೇಲೆ ಒಂದು ನಡೆಯುತ್ತಿದೆ. ಹಿಜಾಬ್, ದೇವಸ್ಥಾನ, ಹಲಾಲ್ ಕಟ್, ಜಟಕಾ ಕಟ್ ಬಂತು.ಈಗ ಮಾವಿನ ಹಣ್ಣು ವಿಚಾರ ಬಂದಿದೆ. ನಾನು ನಮ್ಮ ತೋಟದಲ್ಲಿ ಮಾವಿನ ಹಣ್ಣನ್ನ ಮುಸ್ಲಿಮರಿಗೆ ಕೊಟ್ಟಿದ್ದೇನೆ ಎಂದರು.

ಒಬ್ಬ ಯುವಕನ ಹತ್ಯೆಯಾಗಿದೆ.ಅದರ ಹೇಳಿಕೆ ಬಗ್ಗೆ ಗೃಹ ಸಚಿವರು ಇಂಟಲಿಜೆನ್ಸ್ ರಿಪೋರ್ಟ್ ಪಡೆದಿಲ್ಲ‌.ಅವರು ವಿಫಲ ಆಗಿದ್ದಾರೆ. ಉರ್ದು ಮಾತಾಡದಿದ್ದುದಕ್ಕೆ ಚೂರಿ ಇರಿದಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಕನ್ನಡದವರು ಸುಮ್ಮನೆ ಕೂತಿದ್ದೀರಾ ಎಂದು ಹರಿದಾಡುತ್ತಿದೆ. ಆರಗ ಜ್ಞಾನೇಂದ್ರ ಅವರು ಹೇಳಿಕೆ ನೀಡಿ ಬಳಿಕ ತಪ್ಪಾಯ್ತು ಅಂತ ಹೇಳಿದ್ದಾರೆ. ನಿಮಗೆ ಗೃಹ ಸಚಿವ ಸ್ಥಾನ ಕೊಡಲಾಗಿದೆ,‌ಯಾಕೆ ಕೊಟ್ಟಿದ್ದಾರೆ ಅನ್ನುವ ಚರ್ಚೆ ಬೇಡ. ಕೂಡಲೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಡಿ.ರಾಜೀನಾಮೆ ಕೊಟ್ಟರೆ ನಿಮಗೂ ಘನತೆ. ಗೃಹಸಚಿವ ಸ್ಥಾನಕ್ಕೂ ಮಾನ ಉಳಿಯುತ್ತದೆ. ನೀವು ಸಣ್ಣ ಮಕ್ಕಳ ರೀತಿ ಹುಡುಗಾಟ ಆಡುತ್ತಿದ್ದೀರಾ? ಮುಖ್ಯಮಂತ್ರಿಗಳಿಗೆ ರಾಜೀನಾಮೆ ಕೊಟ್ಟು ಹೊರಡಿ ಎಂದು ಕಿಡಿ ಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next