Advertisement

ಯಾವುದೇ ಕಾರಣಕ್ಕೂ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಬಾರದು: ವಾಟಾಳ್ ನಾಗರಾಜ್ ಜಾಗಟೆ ಪ್ರತಿಭಟನೆ

12:57 PM Jun 13, 2020 | keerthan |

ಹುಬ್ಬಳ್ಳಿ: ಆನ್ ಲೈನ್ ಕಲಿಕೆ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸುವ ವಿಚಾರವನ್ನು ವಿರೋಧಿಸಿ ವಾಟಾಳ್ ನಾಗರಾಜ ಅವರು ಇಲ್ಲಿನ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಜಾಗಟೆ ಪ್ರತಿಭಟನೆ ಮಾಡಿದರು.

Advertisement

ಕೂಡಲೇ ಸರಕಾರ ಎಸ್ಎಸ್ಎಲ್ ಸಿ ಪರೀಕ್ಷೆ ಹಾಗೂ ಆನ್ ಲೈನ್ ಕಲಿಕೆ ರದ್ದುಗೊಳಿಸಬೇಕು. ಯಾರೇ ಏನೇ ಹೇಳಿದರೂ ಎಸ್ಎಸ್ಎಲ್ ಸಿ ಪರೀಕ್ಷೆ ನಡೆಸಬಾರದು. ಶೈಕ್ಷಣಿಕ ವರ್ಷ ಮೊಟಕುಗೊಳಿಸಿ ಎಲ್ಲರನ್ನೂ ಪಾಸ್ ಮಾಡಬೇಕು ಎಂದರು.

ಕೋವಿಡ್-19 ಸೋಂಕು ಇದ್ದಾಗ ಲಾಕ್ ಡೌನ್ ಮಾಡಿದರು. ಇದೀಗ ಸೋಂಕು ಪ್ರಕರಣ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸಲು ಸರಕಾರ ಮುಂದಾಗಿರುವುದು ಅವೈಜ್ಞಾನಿಕ. ಪಾಲಕರು, ಪೋಷಕರು ಪರೀಕ್ಷೆಗೆ, ಶೈಕ್ಷಣಿಕ ವರ್ಷಕ್ಕೆ ವಿರೋಧ ವ್ಯಕ್ತಪಡಿಸಿದರೂ, ಸರಕಾರಕ್ಕೆ ಶಾಲೆ ಆರಂಭ ಹಾಗೂ ಪರೀಕ್ಷೆ ನಡೆಸಲು ಮುಂದಾಗಿರುವುದು ಯಾವ ಕಾರಣಕ್ಕೆ ಎಂದು ಪ್ರಶ್ನಿಸಿದರು.

ಇತರೆ ರಾಜ್ಯಗಳಲ್ಲಿ ಕೈಗೊಂಡಂತೆ ನಮ್ಮ ರಾಜ್ಯದಲ್ಲಿಯೂ ಪರೀಕ್ಷೆ ರದ್ದು ಮಾಡಬೇಕು. ಒಂದು ವೇಳೆ ಸರಕಾರಕ್ಕೆ ಹಠಕ್ಕೆ ಬಿದ್ದು ಪರೀಕ್ಷೆ ನಡೆಸಲು ಮುಂದಾದರೆ ಪ್ರತಿ ವಿದ್ಯಾರ್ಥಿಗೆ 50 ಲಕ್ಷ ರೂ. ಶಿಕ್ಷಕರಿಗೆ 25 ಲಕ್ಷ ರೂ. ಠೇವಣಿ ಇಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next