Advertisement

‘ಲವ್ ಲಿ’ ಮೂಡ್ ನಲ್ಲಿ ವಸಿಷ್ಠ; ಹೊಸ ಸಿನಿಮಾದಲ್ಲಿ ಸ್ಟೈಲಿಶ್ ಲುಕ್

02:40 PM Apr 23, 2022 | Team Udayavani |

“ಟಗರು’ ಚಿಟ್ಟೆ ಖ್ಯಾತಿಯ ವಸಿಷ್ಠ ಸಿಂಹ ಅನೇಕ ಸಿನಿಮಾಗಳಲ್ಲಿ ಹೀರೋ ಆಗಿ ನಟಿಸುತ್ತಿರೋದು ನಿಮಗೆ ಗೊತ್ತೇ ಇದೆ. ಒಂದು ಚಿತ್ರ ತೆರೆ ಕಾಣುವ ಮೊದಲೇ ಇದೀಗ ವಸಿಷ್ಠ ಅವರ ಮತ್ತೂಂದು ಚಿತ್ರ ಮುಹೂರ್ತವನ್ನು ಮುಗಿಸಿದೆ.

Advertisement

ವಸಿಷ್ಠ ಸಿಂಹ ನಾಯಕ ನಟನಾಗಿ ನಟಿಸುತ್ತಿರುವ ನೂತನ ಚಿತ್ರಕ್ಕೆ “ಲವ್‌ಲಿ’ ಎಂಬ ಟೈಟಲ್‌ ಇಡಲಾಗಿದ್ದು, ಇತ್ತೀಚೆಗೆ ಬೆಂಗಳೂರಿನ ಸರ್ಕಲ್‌ ಮಾರಮ್ಮ ದೇಗುಲದಲ್ಲಿ ಸರಳವಾಗಿ ಸಿನಿಮಾದ ಮುಹೂರ್ತ ನೆರವೇರಿದೆ. ಮುಹೂರ್ತ ಮುಗಿಸಿರುವ ಚಿತ್ರತಂಡ ಫ‌ಸ್ಟ್ ಲುಕ್‌ ಕೂಡ ರಿಲೀಸ್‌ ಮಾಡಿದೆ. ಬೈಕ್‌ ಮೇಲೆ ಕುಳಿತು ಧಮ್‌ ಹೊಡೆಯುತ್ತಾ, ಸಖತ್‌ ಸ್ಟೈಲಿಶ್‌ ಲುಕ್‌ನಲ್ಲಿ ಚಿಟ್ಟೆ ಮಿಂಚಿದ್ದಾರೆ.

“ಲವ್‌ ಲಿ’ ಒಂದು ಕಮರ್ಷಿಯಲ್‌ ರೊಮ್ಯಾಂಟಿಕ್‌ ಲವ್‌ ಸ್ಟೋರಿ ಸಿನಿಮಾವಾಗಿದ್ದು, ರೊಮ್ಯಾಂಟಿಕ್ ಲವ್‌ ಸ್ಟೋರಿ ಜೊತೆಗೆ ರೌಡಿಸಂ ಕಥಾಹಂದರವನ್ನು ಸಿನಿಮಾ ಒಳಗೊಂಡಿದೆ.

ಇದನ್ನೂ ಓದಿ:ಗಾಳಿಪಟ-2 ಸಾಂಗ್‌ ಬಂತು; ಎಕ್ಸಾಂ ಟೆನ್ಷನ್ ನಲ್ಲಿ ಬಾಯಿ ಬಡ್ಕ!

ಕಳೆದ ಎಂಟು ವರ್ಷಗಳಿಂದ ವಸಿಷ್ ಸಿಂಹ ಜೊತೆಯಲ್ಲಿರುವ, ಮಫ್ತಿ ನಿರ್ದೇಶಕ ನರ್ತನ್‌ ಜೊತೆ ಕೆಲಸ ಮಾಡಿ ಅನುಭವವಿರುವ ಚೇತನ್‌ ಕೇಶವ್‌ “ಲವ್‌ಲಿ’ ಸಿನಿಮಾಗೆ ಆಕ್ಷನ್‌ ಕಟ್‌ ಹೇಳಲಿದ್ದಾರೆ. ಮೇ 4 ರಿಂದ ಬೆಂಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್‌ ಶುರುವಾಗಲಿದೆ. ಸದ್ಯದಲ್ಲಿ ಚಿತ್ರದ ಉಳಿದ ಪಾತ್ರ ವರ್ಗದ ಕುರಿತು ಚಿತ್ರತಂಡ ಪರಿಚಯ ನೀಡಲಿದೆ.

Advertisement

ಒಂದರ ಹಿಂದೆ ಒಂದು ಚಿತ್ರಗಳಲ್ಲಿ ವಸಿಷ್ಠ ಬಿಝಿಯಾಗಿದ್ದು, ಹೆಡ್‌ ಬುಷ್‌, ಸಿಂಬಾ, ಓದೆಲಾ ರೈಲ್ವೇ ಸ್ಟೇಷನ್‌ ಸಿನಿಮಾ ಸೇರಿದಂತೆ ಒಂದಿಷ್ಟು ಸಿನಿಮಾಗಳು ವಸಿಷ್ಠ ಸಿಂಹ ಬತ್ತಳಿಕೆಯಲ್ಲಿವೆ

Advertisement

Udayavani is now on Telegram. Click here to join our channel and stay updated with the latest news.

Next