ಮುಂಬಯಿ: ವಸಾಯಿರೋಡ್ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್‌ಬಿ ಸಮಾಜದ ಬಾಲಾಜಿ ಸೇವಾ ಸಮಿತಿಯ ಶ್ರೀ ವೆಂಕಟರಮಣ ಭಜನಾ ಮಂಡಳಿಯವರ ಭಜನಾ ಕಾರ್ಯಕ್ರಮವು ಶ್ರೀ ರಾಮ ಮಂದಿರ ಕಿನ್ನಿಗೋಳಿಯಲ್ಲಿ ಜೂ. 1 ರಂದು ಸಂಜೆ 7 ರಿಂದ ರಾತ್ರಿ 9ರವರೆಗೆ ನಡೆಯಿತು.
ಮಂಡಳಿಯ ಸದಸ್ಯರು ಕನ್ನಡ, ಕೊಂಕಣಿ, ಮರಾಠಿ ಮತ್ತು ಹಿಂದಿ ಭಜನೆಗಳನ್ನು ಹಾಡಿ ಅಲ್ಲಿ ನೆರೆದ ಭಕ್ತಾದಿಗಳನ್ನು ರಂಜಿಸಿದರು. ಹಾರ್ಮೋನಿಯಂನಲ್ಲಿ ಮಲ್ಪೆ ವಿಶ್ವನಾಥ್ ಪೈ, ತಬಲಾದಲ್ಲಿ ಗಣೇಶ್ ಪೈ, ಅನಿಕೇತ್ ಕಾಮತ್, ಸ್ವಪ್ನಿಲ್ ಚವಾಣ್, ಅದಿತ್ಯ ಕಾಮತ್ ಅವರು ಸಹಕರಿಸಿದರು.
ಆನಂತರ ವೇದಮೂರ್ತಿ ಗಿರೀಶ್ ಭಟ್ ಅವರಿಂದ ಮಹಾಮಂಗಳಾರತಿ ನಡೆಯಿತು. ಸೇವಾದಾರರಾಗಿ ಮತ್ತು ಮಂಡಳಿಯವರಿಗೆ ಪ್ರಸಾದವನ್ನಿತ್ತು ಗೌರವಿಸಲಾಯಿತು. ಬಾಲಾಜಿ ಸೇವಾ ಸಮಿತಿ ವಸಾಯಿರೋಡ್ ಅಧ್ಯಕ್ಷ ಮುಲ್ಕಿ ಕೃಷ್ಣ ಕಾಮತ್, ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಸಂಚಾಲಕ ದೇವೇಂದ್ರ ಭಕ್ತ, ಸಹ ಕಾರ್ಯದರ್ಶಿಗಳಾದ ವಿವೇಕಾನಂದ ಭಕ್ತ, ಸತ್ಯೇಂದ್ರ ನಾಯಕ್, ಲಕ್ಷ¾ಣ್ ರಾವ್, ಕಾರ್ತಿಕ್ ನಾರಾಯಣ ಪೈ, ಸಹ ಕೋಶಾಧಿಕಾರಿ ವಿಶ್ವನಾಥ ಪೈ, ಗಣೇಶ್ ಪೈ, ಸಹ ಸಂಚಾಲಕ ಶ್ರೀಧರ ಪ್ರಭು, ಚಂದ್ರಕಾಂತ್ ಕುಡ್ವ, ಜಗದೀಶ್ ಹೆಗ್ಡೆ, ಉಪಾಧ್ಯಕ್ಷ ಗಣೇಶ್ ಕಾಮತ್, ಪ್ರಬಂಧಕ ಪ್ರಕಾಶ್ ಶೆಣೈ, ಸದಸ್ಯರುಗಳಾದ ಪ್ರಶಾಂತ್ ನಾಯಕ್, ಪುರುಷೋತ್ತಮ ಪೈ, ಸುರೇಶ್ ಕಾಮತ್, ಪ್ರಕಾಶ್ ಕಾಮತ್, ಅಶೋಕ್ ಶಿಂಧೆ, ಪಲ್ಲವಿ ಶೆಣೈ, ಹರೀಶ್ ಕಾಮತ್, ಯೋಗೀಶ್ ಶೆಣೈ ಉಪಸ್ಥಿತರಿದ್ದರು.
ಶ್ರೀ ರಾಮ ಮಂದಿರ ಕಿನ್ನಿಗೋಳಿ ಅಧ್ಯಕ್ಷ ಅಚ್ಯುತ್ ಮಲ್ಯ, ಉಪಾಧ್ಯಕ್ಷ ರಾಘವೇಂದ್ರ ಪ್ರಭು, ಕಾರ್ಯದರ್ಶಿ ರಾಧಾಕೃಷ್ಣ ನಾಯಕ್, ಕೋಶಾಧಿಕಾರಿ ಉಮೇಶ್ ಕಾಮತ್, ಜತೆ ಕಾರ್ಯದರ್ಶಿ ಶ್ರೀನಿವಾಸ ಶೆಣೈ ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು. ಈ ವಿಶೇಷ ಪೂಜೆಯ ಸೇವಾದಾರರಾದ ಮತ್ತು ಅನ್ನಸಂತರ್ಪಣೆಯ ಸೇವೆಯು ಬಾಲಾಜಿ ಸೇವಾ ಸಮಿತಿ ವಸಾಯಿರೋಡ್‌ನ ಕಾರ್ಯದರ್ಶಿ ಕಿನ್ನಿಗೋಳಿ ಪುರುಷೋತ್ತಮ ಸದಾನಂದ ಶೆಣೈ ಇವರ ಪುತ್ರಿ ಪಲ್ಲವಿ ಶೆಣೈ ಅವರ ಪ್ರಾಯೋಜಕತ್ವದಲ್ಲಿ ನಡೆಯಿತು.