Advertisement

ವಸಾಯಿರೋಡ್‌ ಜಿಎಸ್‌ಬಿ ಬಾಲಾಜಿ ಮಂದಿರ:12ನೇ ವರ್ಧಂತ್ಯುತ್ಸವ

03:35 PM May 27, 2018 | |

ಮುಂಬಯಿ: ವಸಾಯಿರೋಡ್‌ ಪಶ್ಚಿಮದ ಬ್ರಾಹ್ಮಣ (ಜಿಎಸ್‌ಬಿ) ಸಮಾಜದವರ ಬಾಲಾಜಿ ಸೇವಾ ಸಮಿತಿ (ಶ್ರೀ ವೆಂಕಟರಮರಣ ಭಜನ ಮಂಡಳಿ) ಯ ಬಾಲಾಜಿ ಸಭಾಗೃಹ ಮತ್ತು ಪ್ರಾರ್ಥನ ಮಂದಿದ 12 ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಮೇ 24 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಈ ಸಂದರ್ಭದಲ್ಲಿ ಶ್ರೀ ವೆಂಕಟೇಶ್ವರ ವೃತ ಕಾರ್ಯಕ್ರಮವು ನಡೆದಿದ್ದು, ವೇದಮೂರ್ತಿ ಗಿರಿಧರ್‌ ಭಟ್‌ ಅವರ ಮಾರ್ಗದರ್ಶನದಲ್ಲಿ ನಂದಿನಿ ಮತ್ತು ಸಮಿತಿಯ ಸಹ ಕೋಶಾಧಿಕಾರಿ ವಿನಾಯಕ ವಿಠೊಭ ಮಹಾಲೆ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಸಮಿತಿಯವರಿಂದ ಭಜನ ಕಾರ್ಯಕ್ರಮ ಜರಗಿತು. ಮಂಡಳಿಯವರು ಕನ್ನಡ, ಕೊಂಕಣಿ, ಮರಾಠಿ ಮತ್ತು ಹಿಂದಿಯಲ್ಲಿ ವೆಂಕಟೇಶ್ವರನ ಭಜನೆಯನ್ನು ಹಾಡಿದರು.

ಹಾರ್ಮೋನಿಯಂನಲ್ಲಿ ವಿಶ್ವನಾಥ ಪೈ, ಪ್ರಸಾದ್‌ ಪ್ರಭು, ಪ್ರಕಾಶ್‌ ಪ್ರಭು, ತಬಲಾದಲ್ಲಿ ಅಮೇಯ್‌ ಪೈ, ಅವನೀಕಾಂತ್‌ ಬೋರRರ್‌, ಪಖ್ವಾಜ್‌ದಲ್ಲಿ ಗಣೇಶ್‌ ಪೈ, ಅಶೋಕ್‌ ಶಿಂಧೆ ಸಹಕರಿಸಿದರು. 12 ನೇ ಪ್ರತಿಷ್ಠಾ ವರ್ಧಂತಿಯ ಸವಿನೆನಪಿಗಾಗಿ ಶ್ರೀ ಸತ್ಯಮಾರುತಿ ದೇವರ ವಿಗ್ರಹಕ್ಕೆ ಬೆಳ್ಳಿಯ ಪ್ರಭಾವಳಿ ಮತ್ತು ವಿದ್ಯುತ್‌ ಚಾಲಿತ ತೆಂಗಿನ ಕಾಯಿ ತುರಿಯುವ ಯಂತ್ರವನ್ನು ದಾನಿಗಳಾದ ಅಂಧೇರಿ ನಿವಾಸಿ ಜಿ. ಎ. ಪೈ ಪರಿವಾರದಿಂದ ಸಮರ್ಪಿಸಲಾಯಿತು.

ಸ್ಥಳೀಯ ಶಾಂತಿಧಾಮ ಸೇವಾ ಸಮಿತಿಯ ವಿಶ್ವಸ್ತರಾದ ಲಕ್ಷ್ಮೀ ನರಸಿಂಹ ಪ್ರಭು, ವೆಂಕಟೇಶ್ವರ ವೃತದ ಮಹಿಮೆಯ ಬಗ್ಗೆ ವಿಸ್ತರಿಸಿ ಹೇಳಿದರು. 

ಜಿಎಸ್‌ಬಿ ಸಮಾಜದ ವಸಾಯಿ ಉದ್ಯಮಿ ದೀಪಕ್‌ ರಾವ್‌ ದಂಪತಿಯನ್ನು ಸಮಿತಿಯ ಉಪಾಧ್ಯಕ್ಷ  ಕೃಷ್ಣ ಗೋಪಾಲ್‌ ಕಾಮತ್‌ ಅವರ ಹಸ್ತದಿಂದ ಶಾಲು ಹೊದೆಸಿ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು. ಭಜನಾ ಮಂಡಳಿಗೆ ವಾರಕರಿ ಪದ್ಧತಿಯಲ್ಲಿ ತರಬೇತು ನೀಡಿದ ವಸಾಯಿ ನಿವಾಸಿ, ಪ್ರಸಿದ್ಧ ಗಾಯಕ ವಾಸುದೇವ ಕಾರೇಕರ್‌ ಭುವಾಜಿ ದಂಪತಿಯನ್ನು ಸಮಿತಿಯ ಅಧ್ಯಕ್ಷ ತಾರನಾಥ ಪೈ ಅವರು ಗೌರವಿಸಿದರು. ಸಂಸ್ಥೆಯ ಲೆಕ್ಕ ಪರಿಶೋಧಕ ಅನಿತಾ ಮತ್ತು ವಿಶ್ವನಾಥನ್‌ ಅವರನ್ನು ಸಮಿತಿಯ ಕೋಶಾಧಿಕಾರಿ ವೆಂಕಟ್ರಾಯ ಪ್ರಭು ಗೌರವಿಸಿದರು. ವಸಾಯಿ ಪರಿಸರದ ಜಿಎಸ್‌ಬಿ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Advertisement

ಶಾಂತಿಧಾಮ ಸೇವಾ ಸಮಿತಿಯ ವಿಶ್ವಸ್ಥ ನರಸಿಂಹ ಪ್ರಭು, ವೆಂಕಟೇಶ್‌ ಪ್ರಭು, ಉಪೇಂದ್ರ ಆಚಾರ್ಯ, ನಿತ್ಯಾನಂದ ಆಚಾರ್ಯ, ವಿಶ್ವನಾಥ ಕುಡ್ವ, ಪುರುಷೋತ್ತಮ ನಾಯಕ್‌, ಗುರು ಸೇವಾ ಮಂಡಳ ಸಯಾನ್‌ ಕೋಶಾಧಿಕಾರಿ ಕೃಷ್ಣ ಪೈ, ನಗರ ಸೇವಕ ವಿರಾರ್‌ ಗುರುದಾಸ ಕಾಮತ್‌, ಮಾಜಿ ಮೇಯರ್‌ ನಾರಾಯಣ ಮಾನ್ಕರ್‌, ಸಂದೇಶ್‌ ಜಾಧವ್‌, ಕರ್ನಾಟಕ ಸಂಘ ವಸಾಯಿ ಅಧ್ಯಕ್ಷ ಒ. ಪಿ. ಪೂಜಾರಿ, ಉಪಾಧ್ಯಕ್ಷ ಪಾಂಡು ಶೆಟ್ಟಿ ಉಪಸ್ಥಿತರಿದ್ದರು. ಉಪಸ್ಥಿತರಿದ್ದ ಅತಿಥಿಗಳಿಗೆ ಮತ್ತು ವಿವಿಧ ಸಂಸ್ಥೆಯ ಸದಸ್ಯರುಗಳನ್ನು ಪ್ರಸಾದವನ್ನಿತ್ತು ಗೌರವಿಸಲಾಯಿತು. ಮಹಾಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯು ಸುಜಾತಾ ಮತ್ತು ಹಾಲಾಡಿ ವೆಂಕಟ್ರಾಯ ಪ್ರಭು ಅವರ ಸೇವಾರ್ಥಕವಾಗಿ ನಡೆಯಿತು.

ಸಮಿತಿಯ ಅಧ್ಯಕ್ಷ ತಾರನಾಥ ಪೈ, ಗೌರವಾಧ್ಯಕ್ಷ ವಸಂತ ನಾಯಕ್‌, ಕಾರ್ಯದರ್ಶಿ ಪುರುಷೋತ್ತಮ ಶೆಣೈ, ಕೋಶಾಧಿಕಾರಿ ವೆಂಕಟ್ರಾಯ ಪ್ರಭು, ಸಂಚಾಲಕ ದೇವೇಂದ್ರ ಭಕ್ತ ಇತರ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು ಮತ್ತು ಎಲ್ಲಾ ಸದಸ್ಯರ ಉಸ್ತುವಾರಿಯಲ್ಲಿ ಧಾರ್ಮಿಕ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ವಿನಾಯಕ ಎಚ್‌. ಪೈ ಅವರ ನೇತೃತ್ವದಲ್ಲಿ, ನಾಗೇಶ್‌ ಪೈ ಅವರು ಅಲಂಕರಿಸಿದ ದೇವರ ಮಂಟಪವು ಭಕ್ತಾದಿಗಳನ್ನು ಆಕರ್ಷಿಸಿತು.

Advertisement

Udayavani is now on Telegram. Click here to join our channel and stay updated with the latest news.

Next