ಮುಂಬಯಿ: ವಸಾಯಿ ಕರ್ನಾಟಕ ಸಂಘದ ವತಿಯಿಂದ ಸದಸ್ಯರ ಮಾಹಿತಿ ಹಾಗೂ ವಿವರಗಳನ್ನು ಆಹ್ವಾನಿಸ ಲಾಗಿದೆ. ಕಳೆದ 33 ವರ್ಷಗಳಿಂದ ತುಳು ಕನ್ನಡಿಗರ ಏಕತೆ ಹಾಗೂ ಸುಧೃಡ ಸಮಾಜದ ಬೆಳವಣಿಗೆ ಗಾಗಿ ಶ್ರಮಿಸುತ್ತಿರುವ ವಸಾಯಿ ಕರ್ನಾಟಕ ಸಂಘ ಸ್ಥಾಪನೆಯಾದ ದಿನದಿಂದ ಇಂದಿನವರೆಗೆ ಸಂಘದ ಪ್ರತಿಯೋರ್ವ ಪದಾಧಿಕಾರಿ ವಿವಿಧ ಯೋಜನೆಗಳೊಂದಿಗೆ ಸಂಘದ ಸದಸ್ಯರೊಂದಿಗೆ ಹಾಗೂ ಪರಿಸರದಲ್ಲಿರುವ ಎಲ್ಲ ಸಂಘ ಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವಲ್ಲಿ ಸಫಲತೆ ಕಂಡವರು. ಪ್ರಸ್ತುತ 3 ದಶಕಗಳ ಕಾಲದಿಂದ ಕಾರ್ಯವೆಸಗುತ್ತಿರುವ ಸಂಘವು ತನ್ನ ಸದಸ್ಯರ ಮಾಹಿತಿ, ವಿವರ ಸಂಗ್ರಹಿಸುವ ಕಾರ್ಯ ಕೈಗೆತ್ತಿಗೊಂಡಿದೆ.
ಇದುವರೆಗೆ ಸಂಘವು ತನ್ನ ಸದಸ್ಯರಿಗೆ ಸಾಮಾನ್ಯ ಗುರುತು ಚೀಟಿಯನ್ನು ನೀಡಿ ಸದಸ್ಯತನ ನೋಂದಾವಣೆ ಪ್ರಕ್ರಿಯೆಯನ್ನು ಪಾಲಿಸುತ್ತಿದ್ದು, ಬದಲಾವಣೆ ತರುವ ಉದ್ದೇಶದಿಂದ ಈಗಾಗಲೇ ಸಂಘದ ಸದಸ್ಯತನವನ್ನು ಹೊಂದಿದ ಸದಸ್ಯರಿಗೆ ಸಾಮಾನ್ಯ ಗುರುತು ಚೀಟಿಯ ಬದಲಾಗಿ ಸ್ಮಾರ್ಟ್‌ಕಾರ್ಡ್ ಅಧಾರಿತ ಗುರುತು ಚೀಟಿಯನ್ನು ನೀಡಲಿದೆ. ಈ ಹೊಸ ಕ್ರಮದ ಪ್ರಕಾರ ಈಗಾಗಲೇ ಸಂಘದ ಸದಸ್ಯ ತನವನ್ನು ಹೊಂದಿದ ಸದಸ್ಯರು ತಮ್ಮ ವೈಯಕ್ತಿಕ ಮಾಹಿತಿಯನ್ನು ಹೊಸ ಅರ್ಜಿ ಪತ್ರದೊಂದಿಗೆ ಹಿಂದೆ ನೀಡಿದ ಗುರುತು ಚೀಟಿಯನ್ನು ಹಿಂತಿರುಗಿಸಿ ಹೊಸ ಸ್ಮಾರ್ಟ್ ಕಾರ್ಡ್ ಗುರುತು ಚೀಟಿಯನ್ನು ಪಡೆಯಬೇಕೆಂದು ಸಂಘದ ಗೌರವ ಅಧ್ಯಕ್ಷರು, ಅಧ್ಯಕ್ಷರು ಹಾಗೂ ಸರ್ವ ಪದಾಧಿಕಾರಿಗಳು ತಿಳಿಸಿದ್ದಾರೆ.
ಹಳೆಯ ಗುರುತು ಚೀಟಿ ಇಲ್ಲದ ಅಥವಾ ಸದಸ್ಯತನ ನೋಂದಾವಣೆ ಸಂಖ್ಯೆ ಗೊತ್ತಿಲ್ಲದ ಸದಸ್ಯರು ತಮ್ಮನ್ನು ಹೊಸ ಸದಸ್ಯರಾಗಿ ನೋಂದಾಯಿಸಿ ಸದಸ್ಯತನ ಶುಲ್ಕವನ್ನು ಭರಿಸಿ ಹೊಸ ಸ್ಮಾರ್ಟ್‌ಕಾರ್ಡ್ ಗುರುತು ಚೀಟಿಯನ್ನು ಪಡೆಯಬಹುದು. ಹಳೆಯ ಗುರುತು ಚೀಟಿ ಇರುವ ಅಥವಾ ಸದಸ್ಯತನ ನೋಂದಾವಣೆ ಸಂಖ್ಯೆ ಗೊತ್ತಿರುವ ಸದಸ್ಯರು ತಮ್ಮ ಈಗಿನ ವೈಯಕ್ತಿಕ ಮಾಹಿತಿಯನ್ನು ನೀಡಿ ಹೊಸ ಸ್ಮಾರ್ಟ್ ಕಾರ್ಡ್ ಗುರುತು ಚೀಟಿಯನ್ನು ನಿಶುÏಲ್ಕವಾಗಿ ಪಡೆಯಬಹುದು. ಮಾಹಿತಿಗಾಗಿ, ಸಂಘದ ಸದಸ್ಯತನ ನೋಂದಾವಣೆ ಸಮಿತಿಯ ಕಾರ್ಯಾಧ್ಯಕ್ಷ ಕೆ.ಟಿ.ಬಂಗೇರ (9890534013) ಅಥವಾ ಸಂಘದ ಕಚೇರಿಯನ್ನು (0250-2344511) ಸಂಪರ್ಕಿಸಬಹುದು.