ಚೆನ್ನೈ: ದಳಪತಿ ವಿಜಯ್ ʼವಾರಿಸುʼ ಹಾಗೂ ಅಜಿತ್ ಕುಮಾರ್ ʼತುನಿವುʼ ಕಾಲಿವುಡ್ ನಲ್ಲಿ ವರ್ಷದ ಮೊದಲ ದೊಡ್ಡ ಹಿಟ್‌ಗಳತ್ತ ಸಾಗುತ್ತಿದೆ. ನಿರೀಕ್ಷೆಯಂತೆ ಸಿನಿಮಾಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗಳಿಕೆಯಲ್ಲೂ ಹಿಂದೆ ಬಿದ್ದಿಲ್ಲ.
ಪೊಂಗಲ್ ಹಬ್ಬವನ್ನು ಗುರಿಯಾಗಿಸಿಕೊಂಡು ಜ.11 ರಂದು ವಿಶ್ವದಾದ್ಯಂತ ತೆರೆಗೆ ಬಂದ ʼವಾರಿಸುʼ ಮೊದಲ ದಿನದಲ್ಲೇ ವರ್ಲ್ಡ್ ವೈಡ್ 45 ಕೋಟಿ ಗಳಿಕೆ ಕಂಡಿತ್ತು. ನಿರೀಕ್ಷೆಯಂತೆ ವಿಜಯ್ ಸಿನಿಮಾ 100 ಕೋಟಿ ಗಳಿಕೆಯನ್ನು ಕಂಡಿದೆ. ರಿಲೀಸ್ ಆದ ಐದೇ ದಿನದಲ್ಲೇ ಸಿನಿಮಾ 100 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಸದ್ದು ಮಾಡಿದೆ.
ಸಿನಿಮಾ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಅವರು ಟ್ವೀಟ್ ಮಾಡಿದ್ದು, ʼವಾರಿಸುʼ ಹಾಗೂ ʼತುನಿವುʼ ಸಿನಿಮಾ ವರ್ಲ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 100 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂದು ಹೇಳಿದ್ದಾರೆ.
ಅಜಿತ್ ಕುಮಾರ್ ಅವರ ʼತುನಿವುʼ ಸಿನಿಮಾದೊಂದಿಗೆ ಪೈಪೋಟಿ ನೀಡಿ, ʼವಾರಿಸುʼ ಎದ್ದು ಗೆದ್ದು ಬಂದಿದೆ. ಶ್ರೀಮಂತ ಉದ್ಯಮಿ ಕುಟುಂಬದ ಕಥೆಯಲ್ಲಿ ವಿಜಯ್ ಮಾಸ್ & ಕ್ಲಾಸ್ ಲುಕ್ ನಲ್ಲಿ ಮಿಂಚಿದ್ದಾರೆ.
Related Articles
ಇದನ್ನೂ ಓದಿ: ಸಚಿವ ನಿತಿನ್ ಗಡ್ಕರಿಗೆ ಜೀವ ಬೆದರಿಕೆ: ಜೈಲಿನಲ್ಲಿದ್ದುಕೊಂಡೇ ಕೃತ್ಯವೆಸಗಿದ ಪುತ್ತೂರಿನ ಜಯೇಶ್
ದಿಲ್ ರಾಜು ಸಿನಿಮಾಕ್ಕೆ ಬಂಡವಾಳ ಹಾಕಿದ್ದು, ವಂಶಿ ಪೈಡಿಪಲ್ಲಿ ನಿರ್ದೇಶನ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ, ಪ್ರಕಾಶ್ ರಾಜ್, ಶರತ್ ಕುಮಾರ್, ಜಯಸುಧಾ, ಶ್ರೀಕಾಂತ್, ಶಾಮ್ ,ಯೋಗಿ ಬಾಬು ಮುಂತಾದ ಕಲಾವಿದರು ಬಣ್ಣ ಹಚ್ಚಿದ್ದಾರೆ.
ವಾರಿಸು ʼ ವಾರ್ಸುಡುʼ ಆಗಿ ತೆಲುಗು ವರ್ಷನ್ ನಲ್ಲಿ ಜ.14 ರಿಂದ ಆಂಧ್ರ ಹಾಗೂ ತೆಲಂಗಾಣದಲ್ಲಿ ರಿಲೀಸ್ ಆಗಿದೆ.
ಇತ್ತ ಮಾಸ್ ಪ್ರಿಯರ ಮನ ಕದ್ದ ʼತುನಿವುʼ ಕೂಡ ವಿಶ್ವದಾದ್ಯಂತ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ನಲ್ಲಿ ಸಖತ್ ಸದ್ದು ಮಾಡಿದೆ.
ಆಸ್ಟ್ರೇಲಿಯಾದಲ್ಲಿ ʼತುನಿವುʼ ಅಜಿತ್ ಕುಮಾರ್ ನ ʼ ವಿವೇಗಂʼ ದಾಖಲೆಯನ್ನು ಮುರಿದು ಹೆಚ್ಚಿನ ಕಲೆಕ್ಷನ್ ಮಾಡಿದೆ.
ಉತ್ತರ ಅಮೆರಿಕಾದಲ್ಲಿ ʼತುನಿವುʼ 6 ಕೋಟಿಗೂ ಅಧಿಕ ಕಮಾಯಿ ಮಾಡಿದೆ. ಮಂಜು ವಾರಿಯರ್, ಜಾನ್ ಕೊಕ್ಕೆನ್, ಅಮೀರ್, ಪಾವ್ನಿ ಮತ್ತು ಬಗವತಿ ಪೆರುಮಾಳ್ ಮುಂತಾದ ಕಲಾವಿದರು ಬಣ್ಣ ಹಚ್ಚಿದ್ದಾರೆ. ಹೆಚ್. ವಿನೋಥ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.