Advertisement
ಮಾಜಿ ಸಚಿವ ನಾಗೇಂದ್ರ ಆಪ್ತ ಸಹಾ ಯಕ ನೆಕ್ಕಂಟಿ ನಾಗರಾಜ್ ಖಾತೆ ಮೂಲಕವೇ ಇತರರ ಖಾತೆಗೆ ಹಣ ಜಮಾ ಗೊಂಡಿರುವ ದಾಖಲೆಗಳು ಬಯಲಾಗಿವೆ. ಜಿಲ್ಲೆಯ ಸಿಂಧನೂರಿನ ಬೂದಿಹಾಳ ಕ್ಯಾಂಪ್ ನಿವಾಸಿ ಕೋನಾ ವೆಂಕಟರಾವ್ ಹಾಗೂ ಆತನ ಇಬ್ಬರು ಪುತ್ರಿಯರಾದ ಲಕ್ಕಂಸಾನಿ ಲಕ್ಷ್ಮೀ, ರತ್ನಕುಮಾರಿ ಹಾಗೂ ಮೊಮ್ಮಗ ಎಲ್. ಸುನೀಲ ಅವರ ಖಾತೆಗೆ ಮಾ. 8ರಂದು ಈ ಹಣ ವರ್ಗಾವಣೆ ಮಾಡಲಾಗಿದೆ. ಬೂದಿ ಹಾಳ ಕ್ಯಾಂಪ್‌ನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಖಾತೆ ಗಳಿವೆ.
ಸಂಬಂಧವಿಲ್ಲ ಎಂದ ಕೋನಾ ವೆಂಕಟರಾವ್
ತನ್ನ ಹಾಗೂ ಮಕ್ಕಳ ಖಾತೆಗೆ ಹಣ ಬಂದಿರುವುದು ನಿಜ. ಹಣ ಬಿಡುಗಡೆ ಮಾಡಿಕೊಂಡಿದ್ದೇನೆ ಎಂದಿರುವ ಕೋನಾ ವೆಂಕಟರಾವ್ ಈಗ ಇದಕ್ಕೂ ತನಗೂ ಸಂಬಂಧವಿಲ್ಲ ಎನ್ನುತ್ತಿದ್ದಾರೆ. ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೆಕ್ಕಂಟಿ ನಾಗರಾಜ್ ಯಾರೆಂದು ಗೊತ್ತಿಲ್ಲ. ನನಗೆ ಹಣ ಬಂದಿರುವುದು ಗೊತ್ತಿತ್ತು. ಅವರು ಹಾಕಿದ್ದಾರೆ, ನನ್ನ ಖಾತೆಗೆ ಬಂದಿದೆಯಷ್ಟೇ ಎಂದಿದ್ದಾರೆ.