Advertisement
ಶಿರಾಬೇಕಾಗುವ ಸಾಮಗ್ರಿ:
ಬ್ರೆಡ್- 1 ಪೌಂಡ್, ಹಾಲು- ಅರ್ಧ ಲೀಟರ್, ಸಕ್ಕರೆ- ಅರ್ಧ ಕೆ.ಜಿ, ತುಪ್ಪ, ಏಲಕ್ಕಿ, ಗೋಡಂಬಿ, ದ್ರಾಕ್ಷಿ. ಮಾಡುವ ವಿಧಾನ: ಬ್ರೆಡ್ ಅನ್ನು ಸಣ್ಣ ಸಣ್ಣ ತುಣುಕು ಮಾಡಿ, ತುಪ್ಪದಲ್ಲಿ ಹುರಿದುಕೊಳ್ಳಿ. ಹಾಲು ಕಾಯಲು ಇಟ್ಟು, ಅದು ಕುದಿಯಲು ಶುರುವಾದಾಗ ಬ್ರೆಡ್ ತುಣುಕನ್ನು ಹಾಕಿ, ಚೆನ್ನಾಗಿ ಮಗುಚಿ. ಮಿಶ್ರಣವು ಗಟ್ಟಿಯಾದ ಮೇಲೆ, ಸಕ್ಕರೆ ಹಾಕಿ, 5 ನಿಮಿಷ ಬೇಯಿಸಿ. ಅದಕ್ಕೆ ಏಲಕ್ಕಿ ಪುಡಿ, ದ್ರಾಕ್ಷಿ, ಗೋಡಂಬಿ ಸೇರಿಸಿ ಕೆಳಗಿಳಿಸಿ.
ಬೇಕಾಗುವ ಸಾಮಗ್ರಿ: 3 ಸೇಬುಹಣ್ಣು, 1 ಪ್ಯಾಕ್ ಬ್ರೆಡ್, ಹಾಲು, ಸಕ್ಕರೆ, ಬೆಣ್ಣೆ, ತುಪ್ಪ, ಗೋಡಂಬಿ, ಒಣ ದ್ರಾಕ್ಷಿ, ವೆನಿಲ್ಲಾ ಎಸೆನ್ಸ್ ಮಿಠಾಯಿ
ಬೇಕಾಗುವ ಸಾಮಗ್ರಿ: 1 ಪ್ಯಾಕ್ ಬ್ರೆಡ್, ಅರ್ಧ ಕಿಲೋ ಸಕ್ಕರೆ, ಕೇಸರಿ ಅಥವಾ ಅಡುಗೆ ಬಣ್ಣ, ಏಲಕ್ಕಿ ಪುಡಿ. ಮಾಡುವ ವಿಧಾನ: ಬ್ರೆಡ್ ಅನ್ನು ಉದ್ದುದ್ದವಾಗಿ ಕತ್ತರಿಸಿಕೊಳ್ಳಿ. ಗಟ್ಟಿಯಾಗಿ ಸಕ್ಕರೆ ಪಾಕ ಮಾಡಿ, ಅದಕ್ಕೆ ಏಲಕ್ಕಿ ಪುಡಿ, ಕೇಸರಿ/ ಬಣ್ಣ ಬೆರೆಸಿ. ಬ್ರೆಡ್‌ನ ಒಂದೊಂದೇ ತುಣುಕನ್ನು ಪಾಕದೊಳಗೆ ಮುಳುಗಿಸಿ, ಎಲ್ಲ ಕಡೆಯೂ ಪಾಕ ಅಂಟಿಕೊಂಡ ಮೇಲೆ ತೆಗೆದು ತಟ್ಟೆಯ ಮೇಲಿಡಿ. ಈ ರೀತಿ ಎಲ್ಲ ಬ್ರೆಡ್ ತುಣುಕನ್ನೂ ಪಾಕಕ್ಕೆ ಹಾಕಿ ತೆಗೆದು, ಬಿಡಿ ಬಿಡಿಯಾಗಿ ಜೋಡಿಸಿ. ಆರಿದ ಮೇಲೆ, ಬ್ರೆಡ್ ಚೂರು ಗಟ್ಟಿಯಾಗಿ ತಿನ್ನಲು ರುಚಿಯಾಗಿರುತ್ತದೆ. ಮಾಡುವ ವಿಧಾನ: ಬ್ರೆಡ್ ಅನ್ನು ಸಣ್ಣ ಸಣ್ಣ ತುಣುಕು ಮಾಡಿ ಬೆಣ್ಣೆ ಹಾಗೂ ಸಕ್ಕರೆ ಹಾಕಿ ಇಡಿ. ಸೇಬು ಹಣ್ಣಿನ ಸಿಪ್ಪೆ ತೆಗೆದು, ಸಣ್ಣಗೆ ಹೋಳು ಮಾಡಿ, ಬೇಯಿಸಿಕೊಳ್ಳಿ. ಸಕ್ಕರೆ ಮಿಶ್ರಿತ ಬ್ರೆಡ್ ನೆನೆಯುವಷ್ಟು ಹಾಲು ಹಾಕಿ, ಸ್ವಲ್ಪ ಕಿವುಚಿ (ಮಿಶ್ರಣ ಸ್ವಲ್ಪ ಗಟ್ಟಿಯಾಗಿ ಇರಲಿ) ಗೋಡಂಬಿ, ಒಣ ದ್ರಾಕ್ಷಿ, ವೆನಿಲ್ಲಾ ಎಸೆನ್ಸ್ ಹಾಕಿ ಮಿಶ್ರಣ ಮಾಡಿ. ಒಂದು ಪಾತ್ರೆಗೆ ಬೆಣ್ಣೆ ಸವರಿ, ಅದರಲ್ಲಿ ಮೊದಲು ಬ್ರೆಡ್ಡಿನ ಒಂದು ಪದರ ಹಾಕಿ, ಅದರ ಮೇಲೆ ಬೇಯಿ ಸಿದ ಸೇಬು ಹಣ್ಣಿನ ಪದರ ಹಾಕಿ. ಹೀಗೆ, ಒಂದರ ಮೇಲೆ ಒಂದರಂತೆ 2 -3ಪದರ ಹರಡಿ, ಓವನ್‌ನಲ್ಲಿ ಬೇಯಿಸಿ.
Related Articles
Advertisement