Advertisement

flights ಸಹಿತ ಹಲವು ಸೇವೆಗಳಲ್ಲಿ ವ್ಯತ್ಯಯ; ಕರಾವಳಿಯಲ್ಲೂ ಸಾಫ್ಟ್‌ವೇರ್‌ ದೋಷ ಪರಿಣಾಮ

01:18 AM Jul 20, 2024 | Team Udayavani |

ಮಂಗಳೂರು/ಉಡುಪಿ: ಮೈಕ್ರೋಸಾಫ್ಟ್‌ನಲ್ಲಿ ಉಂಟಾಗಿರುವ ದೋಷದಿಂದಾಗಿ ಕರಾವಳಿಯಲ್ಲೂ ವಿಮಾನ, ಬ್ಯಾಂಕಿಂಗ್‌, ಕಾಲ್‌ಸೆಂಟರ್‌ ಸೇವೆಗಳಲ್ಲಿ ವ್ಯತ್ಯಯವಾಗಿದೆ.

Advertisement

ಕ್ಲೌಡ್ ಆಧರಿತ ಸೇವೆಗಳನ್ನು ಅವಲಂಬಿಸಿರುವವರಿಗೆ ಮಾತ್ರವೇ ಈ ಸಮಸ್ಯೆಯಾಗಿದ್ದು, ಉಳಿದಂತೆ ಇತರೆಲ್ಲ ಸೇವೆಗಳು ಎಂದಿನಂತೆ ಇದ್ದವು. ನಗರದಲ್ಲಿರುವ ಕೆಲವು ಕಾಲ್‌ಸೆಂಟರ್‌ಗಳು ಕ್ಲೌಡ್ ಸೇವೆಯನ್ನು ಬಳಸುತ್ತಿದ್ದು, ಅವರಿಗೆ ದಿನವಿಡೀ ಕಾರ್ಯನಿರ್ವಹಿಸಲು ಆಗಲಿಲ್ಲ. ಕೆಲವು ಬ್ಯಾಂಕ್‌ಗಳ ಆನ್‌ಲೈನ್‌ ಸೇವೆಗಳು ಸ್ವಲ್ಪ ಕಾಲ ಸ್ಥಗಿತಗೊಂಡಿ ದ್ದವು. ಕೆಲವು ಸ್ಟಾಕ್‌ಬ್ರೋಕಿಂಗ್‌ ಆ್ಯಪ್‌ಗ್ಳೂ ಸಮಸ್ಯೆಗೊಳಗಾದವು.

ಮಂಗಳೂರು: 3 ವಿಮಾನ ರದ್ದು
ಮಂಗಳೂರು ವಿಮಾನ ನಿಲ್ದಾಣದ ಮೂರು ದೇಶೀಯ ವಿಮಾನ ಹಾರಾಟಗಳು ರದ್ದುಗೊಂಡಿವೆ. ಮೂರು ಅಂತಾರಾಷ್ಟ್ರೀಯ ವಿಮಾನ ಹಾರಾಟ ವಿಳಂಬಗೊಂಡಿದ್ದು, ಮಂಗಳೂರು ನಿಲ್ದಾಣಕ್ಕೆ ಕೆಲವು ತಾಸುಗಳಷ್ಟು ತಡವಾಗಿ ಆಗಮಿಸಿವೆ. ಏರ್‌ ಇಂಡಿಗೋದ 3 ಬೆಂಗಳೂರು, ದಿಲ್ಲಿ ಹಾಗೂ ಹೈದರಾಬಾದ್‌ ದೇಶೀಯ ವಿಮಾನ ಹಾರಾಟಗಳು ರದ್ದುಗೊಂಡಿವೆ.

ಹಲವು ವಿಮಾನ ಕಂಪೆನಿಗಳ ಸರ್ವರ್‌ಗಳು ಮೈಕ್ರೋಸಾಫ್ಟ್‌ ಆಧಾರಿತವಾದ್ದರಿಂದ ಅಂತಾರಾ ಷ್ಟ್ರೀಯ ವಾಗಿಯೇ ಎಲ್ಲ ಕಡೆಗಳಲ್ಲೂ ಚೆಕ್‌-ಇನ್‌, ಬೋರ್ಡಿಂಗ್‌ ಪಾಸ್‌ ನೀಡಿಕೆ ಇತ್ಯಾದಿಗಳಲ್ಲಿ ತೊಂದರೆ ಉಂಟಾಗಿದೆ. ಕೆಲವೆಡೆ ಮ್ಯಾನ್ಯುವಲ್‌ ಆಗಿ ಬೋರ್ಡಿಂಗ್‌ ಪಾಸ್‌ ನೀಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಉಡುಪಿಯಲ್ಲೂ ವಿವಿಧ ಕ್ಷೇತ್ರ ಗಳಲ್ಲಿ ದುಡಿಯುವವರಿಗೆ ಈ ಸಮಸ್ಯೆ ಅನುಭವಕ್ಕೆ ಬಂದಿತು.

Advertisement

Udayavani is now on Telegram. Click here to join our channel and stay updated with the latest news.

Next