Advertisement

ಅವಧಿಗೆ ಮುನ್ನ ಗುರಿ ಹಿಂದಿಕ್ಕಿದ ಮುಂಗಾರು; ಕರಾವಳಿಯಲ್ಲಿ 4 ವರ್ಷಗಳ ಬಳಿಕ ಅಧಿಕ ವರ್ಷಧಾರೆ

01:12 AM Sep 02, 2024 | Team Udayavani |

ಮಂಗಳೂರು: ಮುಂಗಾರು ಅವಧಿ ಮುಗಿಯಲು ಇನ್ನೂ ಒಂದು ತಿಂಗಳು ಬಾಕಿ ಇದ್ದು, ಈಗಾಗಲೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದು ಆಗಿದೆ.

Advertisement

ಕರಾವಳಿಯಲ್ಲಿ ಜೂನ್‌ ತಿಂಗಳಿನಿಂದ ಸೆಪ್ಟಂ ಬರ್‌ ಅಂತ್ಯದವರೆಗೆ ಮುಂಗಾರು ಋತು. ಈ ಸಮಯದಲ್ಲಿ 3,101 ಮಿ.ಮೀ. ಮಳೆ ಆಗಬೇಕು. ಸೆ. 1ರ ವೇಳೆಗಾಗಲೇ 3,327 ಮಿ.ಮೀ. ಮಳೆಯಾಗಿದೆ.

ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 7, ಉಡುಪಿ ಜಿಲ್ಲೆಯಲ್ಲಿ ಶೇ. 8, ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ. 31ರಷ್ಟು ವಾಡಿಕೆಗಿಂತ ಅಧಿಕ ಮಳೆ ಸುರಿದಿದೆ. ಒಟ್ಟಾರೆಯಾಗಿ ಕರಾವಳಿಯಲ್ಲಿ ಈವರೆಗೆ 2,811 ಮಿ.ಮೀ. ವಾಡಿಕೆ ಮಳೆ ಆಗಬೇಕಿದ್ದು, 3,327 ಮಿ.ಮೀ. ಮಳೆಯಾಗಿ ಶೇ. 18ರಷ್ಟು ಅಧಿಕ ಸುರಿದಿದೆ. ಕಳೆದ 4 ವರ್ಷ ಕರಾವಳಿಯಲ್ಲಿ ಮಳೆ ಕಡಿಮೆ ಇತ್ತು. 2020ರ ಬಳಿಕ ವಾಡಿಕೆಯಷ್ಟು ಸುರಿದಿರಲಿಲ್ಲ.

ಕೇರಳ ಕರಾವಳಿ ತೀರಕ್ಕೆ ಮೇ 30ರಂದು ಪ್ರವೇಶ ಪಡೆದ ಮುಂಗಾರು ಜೂ. 2ರಂದು ರಾಜ್ಯ ಕರಾವಳಿಯನ್ನು ಪ್ರವೇಶಿಸಿತ್ತು. ಆದರೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಜೂನ್‌ ಮಧ್ಯಭಾಗದವರೆಗೆ ಮಳೆಗಾಲದ ಯಾವುದೇ ಲಕ್ಷಣ ಕಾಣಿಸಿಕೊಡಿರಲಿಲ್ಲ. ಸಾಮಾನ್ಯವಾಗಿ ಮುಂಗಾರು ಆಗಮನದ ವೇಳೆ ಕೆಲವು ದಿನ ಮೋಡದ ವಾತಾವರಣ, ಗಾಳಿ ಸಹಿತ ಬಿರುಸಿನ ಮಳೆಯಾಗುತ್ತದೆ. ಆದರೆ ಎರಡರಿಂದ ಮೂರು ವಾರಗಳ ಕಾಲ ಉಭಯ ಜಿಲ್ಲೆಗಳಲ್ಲಿ ನಿರೀಕ್ಷಿತ ಮಳೆ ಸುರಿದಿರಲಿಲ್ಲ. ಜುಲೈ ಅಂತ್ಯದಿಂದ ತೊಡಗಿ ಆಗಸ್ಟ್‌ವರೆಗೆ ಕರಾವಳಿಯಲ್ಲಿ ಭಾರೀ ವರ್ಷಧಾರೆಯಾಗಿತ್ತು.

ಯಾವ ತಾಲೂಕಿನಲ್ಲಿ
ಎಷ್ಟು ಮಳೆ? (ಶೇಕಡಾದಲ್ಲಿ)
ದಕ್ಷಿಣ ಕನ್ನಡ ಜಿಲ್ಲೆ
ಬೆಳ್ತಂಗಡಿ 9+
ಬಂಟ್ವಾಳ 2+
ಮಂಗಳೂರು 4+
ಪುತ್ತೂರು -7
ಸುಳ್ಯ 17+
ಮೂಡುಬಿದಿರೆ 14+
ಕಡಬ 4+
ಮೂಲ್ಕಿ 0
ಉಳ್ಳಾಲ 2+
ಉಡುಪಿ ಜಿಲ್ಲೆ
ಕಾರ್ಕಳ 2+
ಕುಂದಾಪುರ 41+
ಉಡುಪಿ 9+
ಬೈಂದೂರು 16+
ಬ್ರಹ್ಮಾವರ 14+
ಕಾಪು 8+
ಹೆಬ್ರಿ -10

Advertisement
Advertisement

Udayavani is now on Telegram. Click here to join our channel and stay updated with the latest news.

Next