Advertisement

ವಾರಾಹಿ ಎಂಜಿನಿಯರ್‌ ಸ್ಥಳಕ್ಕೆ ಭೇಟಿ, ದುರಸ್ತಿ ಆರಂಭ

01:28 PM Jun 20, 2023 | Team Udayavani |

ಕಾರ್ಕಳ: ಕಾರ್ಕಳ ಪುರಸಭಾ ವ್ಯಾಪ್ತಿಯ ಕಲ್ಲೊಟ್ಟೆ 3ನೇ ವಾರ್ಡ್‌ನ ಅಂಚಿಕಟ್ಟೆ 1ನೇ ಅಡ್ಡರಸ್ತೆಯಲ್ಲಿ ಪೈಪ್‌ಲೈನ್‌ ಅಗೆತದಿಂದ ಸಮಸ್ಯೆಗಳಾಗಿತ್ತು. ಈ ಸ್ಥಳದಲ್ಲಿ ರಸ್ತೆ ಬದಿ ಹೂಳು ತೆಗೆದು ಸಮಸ್ಯೆ ಪರಿಹರಿಸುವ ದುರಸ್ತಿ ಕಾಮಗಾರಿ ಜೂ.19ರಂದು ಆರಂಭಗೊಂಡಿದೆ.

Advertisement

ವಾರಾಹಿ ನೀರಾವರಿ ಯೋಜನೆಯ ಎಂಜಿನಿಯರ್‌ ಪ್ರೀತಂ ರಾವ್‌ ಜೂ. 19ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಚರಂಡಿಯ ಹೂಳೆತ್ತುವ ಕಾಮಗಾರಿ ಆರಂಭಗೊಂಡಿದೆ. ಈ ಮಾರ್ಗದಲ್ಲಿ ಎಣ್ಣೆಹೊಳೆಯಿಂದ ಕಾರ್ಕಳ ರಾಮ ಸಮುದ್ರಕ್ಕೆ ನೀರು ಹಾಯಿಸಲೆಂದು ಪೈಪ್‌ಲೈನ್‌ಗಾಗಿ ಈ ಹಿಂದೆ ಅಗೆಯಲಾಗಿತ್ತು. ಬಳಿಕ ಮರು ದುರಸ್ತಿಗೆ ಕ್ರಮವಹಿಸದೇ ಇದ್ದ ಪರಿಣಾಮ 400 ಮೀ. ದೂರದ ರಸ್ತೆ ಹದಗೆಟ್ಟಿತ್ತು. ರಸ್ತೆಯಲ್ಲೇ ಮಳೆ ನೀರು ನಿಂತು ಕೃತಕ ನೆರೆಯಂಟಾಗಿ ಸಂಚಾರಕ್ಕೆ ತೊಂದರೆ ಆಗುತ್ತಿತ್ತು.

ಮಳೆ ಬಂದಾಗ ನೆರೆ ನೀರು ಹರಿದು ಹೋಗದೆ ಈ ಎಲ್ಲ ಅವಾಂತರಗಳಾಗುತ್ತಿದ್ದವು. ಪೈಪ್‌ಲೈನ್‌ ಕಾಮಗಾರಿ ಪರಿಣಾಮ ಪರಿಣಾಮ ರಸ್ತೆಗೂ ಹಾನಿಯಾಗಿದ್ದವು. ಚರಂಡಿಗಳು ಮುಚ್ಚಿಕೊಂಡು ಮಳೆ ಬಂದಾಗ ನೀರು ರಸ್ತೆಗೆ ಹರಿಯುತ್ತಿತ್ತು. ನಿತ್ಯ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಅಲ್ಲದೆ ಚರಂಡಿಗಳು ಮುಚ್ಚಿಕೊಂಡ ಹಿನ್ನೆಲೆಯಲ್ಲಿ ರಸ್ತೆಯ ಎರಡು ಇಕ್ಕೆಲಗಳಲ್ಲಿ ಚರಂಡಿಯಿಲ್ಲದೆ ಪರಿಸರದ ನಿವಾಸಿಗಳಿಗೆ ಸಾಕಷ್ಟು ಸಮಸ್ಯೆಗಳಾಗುತ್ತಿತ್ತು. ಮನೆ ಅಂಗಳಕ್ಕೂ ನೀರು ಹರಿಯುತ್ತಿತ್ತು. ರಸ್ತೆಯು ಅಲ್ಲಲ್ಲಿ ಹೊಂಡ ಗುಂಡಿಗಳಿಂದ ಕೂಡಿದ್ದು ಸಂಪೂರ್ಣ ಹದಗೆಟ್ಟು ಸಂಚಾರಕ್ಕೂ ಕಷ್ಟವಾಗುತ್ತಿತ್ತು.

ಸುದಿನ ವರದಿ
ಕಳೆದ ಒಂದು ವರ್ಷದಿಂದ ಈ ಸಮಸ್ಯೆಯಿದ್ದರೂ ಇದೀಗ ಮಳೆಗಾಲ ಬಂದಂತಹ ಸಂದರ್ಭ ಸಮಸ್ಯೆ ಗಂಭಿರ ಪಡೆದುಕೊಂಡಿದೆ. ಇದರಿಂದ ಸಮಸ್ಯೆಗಳು ಹೆಚ್ಚು ಜನರನ್ನು ಕಾಡಲಾರಂಭಿಸಿತ್ತು. ಸ್ಥಳೀಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಧಾರಿಸಿ ಜೂ.19ರಂದು ಸುದಿನ ವಿಶೇಷ ವರದಿ ಪ್ರಕಟಿಸಿತ್ತು. ಪ್ರಕಟಗೊಂಡ ಬೆನ್ನಲ್ಲೇ ಎಂಜಿನಿಯರ್‌ ಭೇಟಿ ನೀಡಿ ದುರಸ್ತಿ ಕಾರ್ಯವೂ ಪ್ರಾರಂಭಗೊಂಡಿದೆ. ಸದ್ಯ ಮಳೆಗಾಲ ಈ ರಸ್ತೆ ತಾತ್ಕಾಲಿಕ ದುರಸ್ತಿಗೊಂಡು ಮುಂದಕ್ಕೆ ರಸ್ತೆ ಶಾಶ್ವತ ಪರಿಹಾರ ಕಾಣಬೇಕಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next