Advertisement

Vandseಬೆಳ್ಳಾಲ ದುರಂತ: ಮಕ್ಕಳಿಬ್ಬರ ಅಂತ್ಯಸಂಸ್ಕಾರ: ತಾಯಿ ಚೇತರಿಕೆ,ಆಸ್ಪತ್ರೆಯಿಂದ ಬಿಡುಗಡೆ

12:33 AM Jul 01, 2024 | Team Udayavani |

ವಂಡ್ಸೆ: ಬೆಳ್ಳಾಲ ಗ್ರಾಮದಲ್ಲಿ ಕೆರೆಗೆ ಬಿದ್ದು ಮೃತಪಟ್ಟ ನಂದ್ರೋಳಿಯ ಕುಕ್ಕಡಬೈಲು ಹೊಸಮನೆಯ ಇಬ್ಬರು ಮಕ್ಕಳ ಮರಣೋತ್ತರ ಪರೀಕ್ಷೆಯ ಅನಂತರ ಮೃತದೇಹಗಳನ್ನು ವೈದ್ಯರು ವಾರಸುದಾರರಿಗೆ ಹಸ್ತಾಂತರಿಸಿದರು.

Advertisement

ಮಕ್ಕಳನ್ನು ರಕ್ಷಿಸಲು ಹೋಗಿ ನೀರಿಗೆ ಧುಮುಕಿ ಅಪಾಯಕ್ಕೆ ಸಿಲುಕಿದ್ದ ತಾಯಿ ಶೀಲಾ ಅವರನ್ನು ಸ್ಥಳೀಯರು ರಕ್ಷಿಸಿ ಅಸ್ಪತ್ರೆಗೆ ದಾಖಲಿಸಿದ್ದರು. ಅವರು ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ಜೂ. 30ರಂದು ವೈದ್ಯರ ಅನುಮತಿ ಮೇರೆಗೆ ಬೆಳ್ಳಾಲಕ್ಕೆ ಕರೆತರಲಾಯಿತು.

ಬಿಇಒ ನಾಗೇಶ ನಾಯಕ್‌, ಶಾಲೆಯ ಶಿಕ್ಷಕರು, ಕೊಲ್ಲೂರು ಠಾಣೆಯ ಎಸ್‌ಐ ಜಯಶ್ರೀ, ಸ್ಥಳೀಯ ಮುಖಂಡರು, ವಿವಿಧ ಸಂಘಟನೆಗಳ ಪದಾ ಧಿಕಾರಿಗಳ ಉಪಸ್ಥಿತಿಯಲ್ಲಿ ಮಕ್ಕಳ ಅಂತ್ಯಸಂಸ್ಕಾರ ರವಿವಾರ ನಡೆಯಿತು. ತಾಯಿ ಶೀಲಾ, ತಂದೆ ಸತೀಶ ಮಡಿವಾಳ ಹಾಗೂ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.

ಹೊಸ ಮನೆ ಸಿದ್ಧ; ಮನೆ ಬೆಳಗಬೇಕಿದ್ದ ಮಕ್ಕಳೇ ಇಲ್ಲ!
50ಕ್ಕೂ ಅಧಿಕ ವರ್ಷಗಳಿಂದ ಬೆಳ್ಳಾಲದಲ್ಲಿ ವಾಸ್ತವ್ಯ ಹೂಡಿರುವ ಮನೆಯವರಿಗೆ ಈವರೆಗೆ ಕಂದಾಯ ಇಲಾಖೆ ಹಕ್ಕುಪತ್ರ ನೀಡದಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡುಕುಟುಂಬವಾಗಿ ವಾಸಿಸುತ್ತಿರುವ ಸತೀಶ ಮಡಿವಾಳ ಅವರು ಪ್ರಸ್ತುತ ಇರುವ ಮನೆಯ ಸಮೀಪದಲ್ಲೇ ಹೊಸ ಮನೆ ನಿರ್ಮಿಸುತ್ತಿದ್ದು, ಅದು ಪೂರ್ಣಗೊಳ್ಳುವ ಹಂತದಲ್ಲಿದೆ. ಗೃಹಪ್ರವೇಶಕ್ಕೆ ದಿನ ನಿಗದಿ ಮಾಡಲಿರುವ ಸಂದರ್ಭದಲ್ಲೇ ಮನೆ ಬೆಳಗಬೇಕಿದ್ದ ಮಕ್ಕಳು ಸಾವಿಗೀಡಾಗಿರುವುದು ಆಘಾತಕ್ಕೀಡು ಮಾಡಿದೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next