Advertisement

ವಂಡ್ಸೆ ಗ್ರಾ.ಪಂ. ವ್ಯಾಪ್ತಿಯ ಬಾವಿಗಳಲ್ಲಿ ಉಪ್ಪು ನೀರು

10:56 PM Mar 31, 2021 | Team Udayavani |

ವಂಡ್ಸೆ: ಕುಡಿಯುವ ನೀರಿನ ಕ್ಷಾಮ ಎದುರಾಗುವ ಭೀತಿಯಲ್ಲಿರುವ ವಂಡ್ಸೆ ಗ್ರಾಮಸ್ಥರಿಗೆ  ಇದ್ದ ಬಾವಿಯ ನೀರೂ ಉಪ್ಪಾಗಿರುವುದರಿಂದ ಇತ್ತ ಕುಡಿಯಲೂ ಆಗದೆ ಅತ್ತ ಉಗುಳಲೂ ಆಗದ ಸ್ಥಿತಿ ನಿರ್ಮಾಣವಾಗಿದೆ.

Advertisement

ಎಲ್ಲೆಲ್ಲಿ  ಸಮಸ್ಯೆ :

ವಂಡ್ಸೆ ಮುಖ್ಯ ಪೇಟೆ, ಆತ್ರಾಡಿ, ಹೆಸಿನಗದ್ದೆ, ಉದ್ದಿನಬೆಟ್ಟು, ಅಭಿ, ಹರಾವರಿ ಮುಂತಾದೆಡೆಯ ಬಾವಿಗಳಲ್ಲಿ ಉಪ್ಪು ನೀರು ಕಂಡು ಬಂದಿದ್ದು, ಈ ಭಾಗದ ನಿವಾಸಿಗಳು ಕುಡಿಯುವ ನೀರಿಗಾಗಿ ವಲಸೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಪ್ರತೀ ವರ್ಷ ಮಾರ್ಚ್‌, ಎಪ್ರಿಲ್‌ನಲ್ಲಿ ಉಪ್ಪು ನೀರಿನ ಸಮಸ್ಯೆ ಎದುರಾದರೆ,  ಮೇ ಹಾಗೂ ಜೂನ್‌ ತಿಂಗಳಲ್ಲಿ  ಬಾವಿಯಲ್ಲಿ ನೀರಿಲ್ಲದೆ ಹಾಹಾಕಾರ ಪಡಬೇಕಾಗಿದೆ.

ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಭೇಟಿ :

ಉಪ್ಪು ನೀರಿನ ಸಮಸ್ಯೆ ಬಗ್ಗೆ ಸ್ಥಳೀಯರು ಇಲಾಖೆಗಳಿಗೆ ದೂರು ನೀಡಿರುವ ಹಿನ್ನೆಲೆಯಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್‌ ಅವರು ಸ್ಥಳಕ್ಕೆ ಭೇಟಿ ಇತ್ತು, ಉಪ್ಪು ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿರುತ್ತಾರೆ.

Advertisement

ಚಕ್ರಾನದಿಯ ಪಾತ್ರ :

ಸಮೀಪದಲ್ಲಿ ಹರಿಯುವ ಚಕ್ರಾನದಿ ಉಪ್ಪು ನೀರಿನಿಂದ ಕೂಡಿದೆ. ಇದರ ನೀರು ಬಾವಿಗೆ ಬಂದು ಸೇರುತ್ತಿರುವುದರಿಂದ ಆ ಭಾಗದ ನಿವಾಸಿಗಳು ನಿತ್ಯ ಬಳಕೆಗೂ ಯೋಗ್ಯವಾದ ನೀರಿಲ್ಲದೆ ಪರಿತಪಿಸುವಂತಾಗಿದೆ.

ಬಹಳಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಇಲ್ಲಿನವರಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಮತ್ತು ಇನ್ನಿತರ ಬೇಡಿಕೆಗಳನ್ನು ಹಂತ ಹಂತವಾಗಿ ಪೂರ್ಣಗೊಳಿಸಲಾಗುವುದು.  ಬಿ.ಎಂ. ಸುಕುಮಾರ್‌ ಶೆಟ್ಟಿ,  ಶಾಸಕರು, ಬೈಂದೂರು

ಪ್ರತೀ ವರ್ಷ ಬೇಸಗೆಯಲ್ಲಿ ಈ ಭಾಗದಲ್ಲಿ  ಉಪ್ಪು ನೀರು ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದ್ದು,   ಟ್ಯಾಂಕರ್‌ ಮೂಲಕ ಅಗತ್ಯವಿರುವಲ್ಲಿ ನೀರು ಒದಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಉಪ್ಪು ನೀರಿನ ಸಮಸ್ಯೆ ನಿಭಾಯಿಸುವಲ್ಲಿ ಸಂಬಂಧಪಟ್ಟ ಇಲಾಖೆೆಯವರು ಕ್ರಮ ಕೈಗೊಳ್ಳುವುದು ಸೂಕ್ತ.  ಉದಯಕುಮಾರ್‌ ಶೆಟ್ಟಿ,  ಅಧ್ಯಕ್ಷರು ಗ್ರಾ.ಪಂ. ವಂಡ್ಸೆ

Advertisement

Udayavani is now on Telegram. Click here to join our channel and stay updated with the latest news.

Next