Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರು- ಬೆಂಗಳೂರು, ಬೆಂಗಳೂರು-ಚೆನ್ನೈ, ಬೆಂಗಳೂರು- ಹೈದರಾಬಾದ್ ನಡುವೆ ವಂದೇ ಭಾರತ ರೈಲು ಓಡಿಸ ಲಾಗು ತ್ತದೆ ಎಂದು ಭರವಸೆ ನೀಡಿದ್ದಾರೆ. ಇತ್ತೀಚೆಗೆ ದಿಲ್ಲಿ- ವಾರಾಣಸಿ ನಡುವೆ ವಂದೇ ಭಾರತ ಸೆಮಿ ಹೈಸ್ಪೀಡ್ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದ್ದು, ಇದೇ ರೀತಿ 30 ರೈಲುಗಳ ಸಂಚಾರ ಸದ್ಯದಲ್ಲೇ ಆರಂಭವಾಗಲಿದೆ. ಅದರಲ್ಲಿ ಬೆಂಗಳೂರು, ಮಂಗಳೂರಿನಿಂದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವುದು ಸೇರಿದೆ ಎಂದು ಹೇಳಿದರು. ಜತೆಗೆ ರಾಷ್ಟ್ರಾದ್ಯಂತ 100ಕ್ಕೂ ಹೆಚ್ಚು ವಂದೇ ಭಾರತ ಸೆಮಿ ಹೈಸ್ಪೀಡ್ ರೈಲುಗಳನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಮುಂದಿನ ಆರು ತಿಂಗಳಲ್ಲಿ ಕರ್ನಾಟಕದ ಎಲ್ಲ ರೈಲು ನಿಲ್ದಾಣಗಳಲ್ಲೂ ವೈಫೈ ಸೌಲಭ್ಯ ಸಿಗಲಿದೆ ಎಂದೂ ಪಿಯೂಷ್ ಗೋಯಲ್ ಘೋಷಿಸಿದ್ದಾರೆ. ಜತೆಗೆ ದೇಶಾದ್ಯಂತ 1.2 ಲಕ್ಷ ಕಿ.ಮೀ. ಸ್ವದೇಶಿ ಆಟೋಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆ ಕಲ್ಪಿಸುವ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಕೋಲಾರದಲ್ಲಿ ಮೊದಲು ಕೋಚ್ ವರ್ಕ್‌ಶಾಪ್ ಪ್ರಾರಂಭಿಸಲು ಉದ್ದೇಶಿಸಿದ್ದೇವೆ. ಅನಂತರ ಬೇಡಿಕೆ ಹೆಚ್ಚಿದಲ್ಲಿ ಅದನ್ನು ಉನ್ನತ ದರ್ಜೆಗೇರಿಸಿ ಕೋಚ್ ಫ್ಯಾಕ್ಟರಿಯಾಗಿ ಪರಿವರ್ತಿಸಲಾಗುತ್ತದೆ ಎಂದು ತಿಳಿಸಿದರು. ಎಚ್‌ಡಿಕೆ ನೋಡಿ ಚಟಾಕಿ
ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಳು ಡಬಲ್ ಎಂಜಿನ್ ರೈಲಿನಂತೆ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದ ಪಿಯೂಷ್ ಗೋಯಲ್, ಕರ್ನಾಟಕದ ಜನ ಬಿಜೆಪಿಗೆ 104 ಸ್ಥಾನಗಳಿಂದ ಹೆಚ್ಚು ಸ್ಥಾನ ನೀಡಿದ್ದರೆ ಡಬಲ್ ಎಂಜಿನ್ ಮತ್ತಷ್ಟು ಚೆನ್ನಾಗಿ ಕಾರ್ಯ ನಿರ್ವಹಿಸು ತ್ತಿತ್ತು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯವರತ್ತ ನೋಟ ಬೀರಿ ಚಟಾಕಿ ಹಾರಿಸಿದರು.