ಒಂದನೇ ಹಂತದ ವಂದೇ ಭಾರತ್ ಏರ್‌ಲಿಫ್ಟ್ ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದೆ.
ಮನಿಲಾದಿಂದ 149 ಪ್ರಯಾಣಿಕರನ್ನು ಹೊತ್ತುತಂದ ಏರ್ ಇಂಡಿಯಾ ವಿಮಾನ ಹೈದರಾಬಾದ್‌ನಲ್ಲಿ ಇಳಿದಿದೆ.
ಇನ್ನೊಂದೆಡೆ, ಕುವೈಟ್ ಹಾಗೂ ಲಂಡನ್‌ನಿಂದ ಪ್ರತ್ಯೇಕ ವಿಮಾನಗಳಲ್ಲಿ 349 ಪ್ರಯಾಣಿಕರು ಅಹಮದಾಬಾದ್‌ಗೆ ತಲುಪಿದ್ದಾರೆ.
ಏರ್‌ಲಿಫ್ಟ್ ನ ಮೊದಲನೇ ಹಂತ ಮೇ 7ರಿಂದ ಆರಂಭಗೊಂಡು, 15ಕ್ಕೆ ಮುಕ್ತಾಯ ಕಾಣಲಿದೆ.
16ರಿಂದ 2ನೇ ಏರ್‌ಲಿಫ್ಟ್ ಶುರುವಾಗಲಿದ್ದು, ಭಾರತದಿಂದ ವಿವಿಧ ದೇಶಗಳಿಗೆ ಹೊರಡುವ ವಿಮಾನಗಳಿಗೆ, ಗುರುವಾರದಿಂದ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಭಾರತದ ವಿವಿಧ ವಿಮಾನ ನಿಲ್ದಾಣಗಳಿಂದ ಅಮೆರಿಕ, ಯು.ಕೆ, ಆಸ್ಟ್ರೇಲಿಯಾ, ಪ್ಯಾರಿಸ್ ಹಾಗೂ ಸಿಂಗಾಪುರಕ್ಕೆ ವಿಮಾನಗಳು ಹಾರಲಿವೆ.