Advertisement

ಇಂದಿನಿಂದ ಎರಡನೇ ಹಂತದ ಏರ್ ಲಿಫ್ಟ್: ಕರ್ನಾಟಕಕ್ಕೆ ಬರಲಿದೆ 17 ವಿಮಾನಗಳು

08:40 AM May 18, 2020 | keerthan |

ಬೆಂಗಳೂರು: ಕೋವಿಡ್-19 ಸೋಂಕಿನ ಕಾರಣದಿಂದ ವಿವಿಧ ದೇಶದಗಳಲ್ಲಿ ಸಿಲುಕಿರುವ ಭಾರತೀಯರನ್ನು ಐತಿಹಾಸಿಕ ಏರ್ ಲಿಫ್ಟ್ ಮೂಲಕ ಭಾರತಕ್ಕೆ ಕರೆದುಕೊಂಡು ಬರಲಾಗುತ್ತಿದೆ. ಮೊದಲ ಹಂತದ ವಂದೇ ಭಾರತ್ ಮಿಷನ್ ಯೋಜನೆ ಮೇ 13ಕ್ಕೆ ಅಂತ್ಯವಾಗಿದ್ದು, ಇಂದಿನಿಂದ ಎರಡನೇ ಹಂತದ ಏರ್ ಲಿಫ್ಟ್ ಆರಂಭವಾಗಲಿದೆ.

Advertisement

ಇಂದಿನಿಂದ ಮೇ 22ರ ವರೆಗೆ ಎರಡನೇ ಹಂತದಲ್ಲಿ ವಂದೇ ಭಾರತ್ ಮಿಷನ್  ಏರ್ ಲಿಫ್ಟ್ ನಡೆಯಲಿದೆ. ಈ ಹಂತದಲ್ಲಿ 31 ದೇಶಗಳಿಂದ  ಭಾರತೀಯರನ್ನು ಕರೆದುಕೊಂಡು ಬರಲಾಗುತ್ತಿದೆ. 149 ವಿಮಾನಗಳು ದೇಶದ 15 ನಗರಗಳಿಗೆ ಆಗಮಿಸಲಿದೆ.

ಮೊದಲ ಹಂತದಂತೆ ಈ ಬಾರಿಯೂ ಗರ್ಭಿಣಿಯರು, ವೃದ್ಧರು, ಆರೋಗ್ಯ ಸಮಸ್ಯೆ ಇರುವವರು, ಕೆಲಸ ಕಳೆದುಕೊಂಡವರಿಗೆ ಆದ್ಯತೆ ನೀಡಲಾಗಿದೆ. ಮತ್ತು ಇಲ್ಲಿ ಬಂದು ಕಡ್ಡಾಯ ಕ್ವಾರಂಟೈನ್ ಗೆ ಒಳಗಾಗಬೇಕಿದೆ.

ಈ ಪೈಕಿ ಕರ್ನಾಟಕಕ್ಕೆ ಒಟ್ಟು 14 ದೇಶಗಳಿಂದ 17 ವಿಮಾನಗಳು ಬರಲಿದೆ. ಸೋಮವಾರ ಒಂದು ವಿಮಾನ ಮಂಗಳೂರಿಗೆ ಬರಲಿದೆ. ಅಮೆರಿಕಾದಿಂದ 3, ಕೆನಡಾದಿಂದ 2, ಯುಎಇ, ಸೌದಿ ಅರೆಬಿಯಾ, ಮಲೇಷಿಯಾ, ಒಮನ್, ಫಿಲಿಪೈನ್ಸ್, ಫ್ರಾನ್ಸ್, ಜರ್ಮನಿ, ಕತಾರ್, ಇಂಡೋನೇಷ್ಯಾ, ಐರ್ಲೆಂಡ್, ಜಪಾನ್ ಮತ್ತು ಆಸ್ಟ್ರೇಲಿಯಾದಿಂದ ತಲಾ ಒಂದೊಂದು ವಿಮಾನಗಳ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next