Advertisement

ಮೌಲ್ಯ ನಿಂತ ನೀರಲ್ಲ: ಮಂಜುನಾಥ

09:10 AM Jan 21, 2019 | Team Udayavani |

ಕಲಬುರಗಿ: ಸಮಾಜ ಬದಲಾದ ಹಾಗೆ ಮೌಲ್ಯಗಳು ಬದಲಾಗುತ್ತವೆ. ಹೀಗಾಗಿ ಮೌಲ್ಯಗಳು ನಿಂತ ನೀರಲ್ಲ ಎಂದು ಬೆಂಗಳೂರಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಾ| ಬಿ.ಆರ್‌. ಮಂಜುನಾಥ ಹೇಳಿದರು.

Advertisement

ನಗರದ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವೇಶ್ವರ ಕಲಾ ಮಹಾ ವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ ಸಾಂಸ್ಥಿಕ ಮೌಲ್ಯಗಳು, ರಾಷ್ಟ್ರೀಯತೆ ಮತ್ತು ಸಾಮಾಜಿಕ ಜವಾಬ್ದಾರಿ’ ಕುರಿತು ಹಮ್ಮಿಕೊಳ್ಳಲಾಗಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಸಂವೇದನಾಶೀಲತೆ ಬೆಳೆಸಿಕೊಂಡರೆ ಮೌಲ್ಯಗಳು ತಾನಾಗಿಯೇ ಬೆಳವಣಿಗೆ ಹೊಂದುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಯೌವನಾವಸ್ಥೆಯಲ್ಲಿಯೇ ಮೌಲ್ಯಗಳು ಚಿಗುರೊಡೆಯುವಂತ ಚಟುವಟಿಕೆಗಳಲ್ಲಿ ಆಸಕ್ತಿಯಿಂದ ಪಾಲ್ಗೊಳ್ಳಬೇಕು ಎಂದು ಸಲಹೆ ನೀಡಿದರು.

ಮೌಲ್ಯವಿಲ್ಲದ ಜೀವನ ಜೀವನವಲ್ಲ, ಉತ್ತಮ ಜೀವನಕ್ಕೆ ಮೌಲ್ಯಗಳು ಬೇಕೆಬೇಕು. ವ್ಯಕ್ತಿತ್ವ ವೃದ್ಧಿಸಿಕೊಳ್ಳುವುದರಿಂದ ಉದಾತ್ತ ಗುಣಧರ್ಮದ ಮೌಲ್ಯಗಳು, ಸಾಮಾಜಿಕ ಹೊಣೆಗಾರಿಕೆಗಳು ಪ್ರಾಪ್ತವಾಗುತ್ತವೆ ಎಂದರು.

ಕಲೆ, ಸಂಗೀತ ಮತ್ತು ಸಾಹಿತ್ಯ ಪ್ರಕಾರಗಳು ನಮ್ಮಲ್ಲಿ ಸಂವೇದನೆ ಜಾಗೃತಗೊಳಿಸುತ್ತವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಇರುವವರು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಪರಿಹಾರ ಮಾನವಿಕ ಶಾಸ್ತ್ರದ ಅಧ್ಯಯನದಲ್ಲಿ ಇದೆ ಎಂದು ಹೇಳಿದರು.

Advertisement

ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ| ಶಿವರಾಜ ಶಾಸ್ತ್ರೀ ಹೇರೂರ, ಡಾ| ರೇಣುಕಾ ಕನಕೇರಿ, ಪ್ರೊ| ಜಗದೇವಿ ಕಲಶೆಟ್ಟಿ, ಪ್ರೊ| ವಿ.ಬಿ. ಬಿರಾದಾರ, ಪ್ರೊ| ಛಾಯಾ ಭರತನೂರ, ಗೌಸ್‌ ಪಟೇಲ್‌ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಾಚಾರ್ಯ ಡಾ| ಡಿ.ಟಿ. ಅಂಗಡಿ ಅಧ್ಯಕ್ಷತೆ ವಹಿಸಿದ್ದರು. ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಡಾ| ಸುರೇಶಕುಮಾರ ನಂದಗಾಂವ ಸ್ವಾಗತಿಸಿದರು. ಪ್ರೊ| ಶರಣಮ್ಮ ವಾರದ ನಿರೂಪಿಸಿದರು, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ| ವೆಂಕಣ್ಣ ಡೊಣ್ಣೆಗೌಡರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next