Advertisement
ಅಷ್ಟೇ ಅಲ್ಲದೆ 2ನೇ ಹಂತದ ಕಾಮಗಾರಿಗೆ ಪಡೆದಿದ್ದ 100 ಕೋಟಿ ರೂ. ಸಾಲವನ್ನು 3ನೇ ಹಂತದ ಕಾಮಗಾರಿಗೆ ತಿರುಗಿಸಿರುವುದು ಬೆಳಕಿಗೆ ಬಂದಿದ್ದು, ಕಡಿಮೆ ಬಡ್ಡಿದರಕ್ಕೆ ಸಾಲ ಪಡೆಯುವ ಅವಕಾಶವಿದ್ದರೂ ಹೆಚ್ಚು ಬಡ್ಡಿದರಕ್ಕೆ ಸಾಲ ಪಡೆದಿರುವ ಅಂಶವೂ ಬಹಿರಂಗಗೊಂಡಿದೆ.
Related Articles
ಮಹಾನಗರ ಪಾಲಿಕೆಗಳು 2014-17ರ ಅವಧಿಯಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆ, ಹಂತ 3ರಡಿ ಕೈಗೊಳ್ಳಬೇಕಿದ್ದ ಕಾಮಗಾರಿಗಳ ಬಗ್ಗೆ ರಾಜ್ಯದ 10 ಮಹಾನಗರ ಪಾಲಿಕೆಗಳು ಸಮಗ್ರ ಯೋಜನೆ ರೂಪಿಸಿರಲಿಲ್ಲ. 2021ರ ಆಗÓr…ನಿಂದ ಡಿಸೆಂಬರ್‌ವರೆಗಿನ ಮೂಲ ಕ್ರಿಯಾ ಯೋಜನೆಯಲ್ಲಿ ಒಳಗೊಂಡಿದ್ದ 735 ಕಾಮಗಾರಿಗಳ ಪೈಕಿ 91.35 ಕೋಟಿ ರೂ. ವೆಚ್ಚದ 141 ಕಾಮಗಾರಿಗಳನ್ನು ಕೈಗೊಳ್ಳಲೇ ಇಲ್ಲ. ಮೈಸೂರು, ವಿಜಯಪುರ, ತುಮಕೂರು, ಬಳ್ಳಾರಿ ಮಹಾನಗರ ಪಾಲಿಕೆಗಳ ಪೈಕಿ ವಿಜಯಪುರ ವ್ಯಾಪ್ತಿಯಲ್ಲಿ ಮಾತ್ರ ಸಂಚಾರ ನಿರ್ವಹಣೆಗೆ ಸಂಬಂಧಿಸಿದ ಕಾಮಗಾರಿ ಕೈಗೊಂಡಿದ್ದು, ನೀರು ಸರಬರಾಜು ಮತ್ತು ಯುಜಿಡಿ ಕಾಮಗಾರಿಗೆ ಮೀಸಲಿಟ್ಟಿದ್ದ 15 ಕೋಟಿ ರೂ.ಗಳನ್ನು ನಾಲ್ಕೂ ಮಹಾನಗರ ಪಾಲಿಕೆಗಳಲ್ಲಿ ಬಳಕೆಯನ್ನೇ ಮಾಡಿಲ್ಲ.
Advertisement
ಸಾಲ ನಿರ್ವಹಣೆಯಲ್ಲಿ ವ್ಯತ್ಯಯಒಟ್ಟು ಯೋಜನಾ ವೆಚ್ಚವು 931.63 ಕೋಟಿ ರೂ. ಆಗಿದ್ದು, ಈ ಪೈಕಿ 442.18 ಕೋಟಿ ರೂ. (ಶೇ.50) ಹಣವನ್ನು ಕರ್ನಾಟಕ ವಾಟರ್‌ಅಂಡ್ ಸ್ಯಾನಿಟೇಶನ್ ಪೂಲ್ ಫಂಡ್ ಟ್ರಸ್ಟ್ ನಿಂದ (ಕೆಡಬ್‌ಲ್ಯುಎಸ್ ಪಿ ಆಫ್ ಟಿ) ಎರವಲು ಸಾಲದ ರೂಪದಲ್ಲಿ ಪಡೆದು 432.90 ಕೋಟಿ ರೂ. ಸೇರಿ ಒಟ್ಟಾರೆ 922.35 ಕೋಟಿ ರೂ. ವೆಚ್ಚ ಮಾಡಲಾಗಿತ್ತು. ಸಾಲ ಮರುಪಾವತಿಗೆ ಬಜೆಟ್‌ನಲ್ಲಿ 239.05 ಕೋಟಿ ರೂ. ಹಂಚಿಕೆಯಾಗಿದ್ದರೂ 176.23 ಕೋಟಿ ರೂ. ಬಿಡುಗಡೆ ಮಾಡಿದೆ. 62.82 ಕೋಟಿ ರೂ.ಗಳನ್ನು ಹೆಚ್ಚುವರಿಯಾಗಿ ಬಜೆಟ್‌ನಲ್ಲಿ ಮೀಸಲಿಟ್ಟಿದ್ದೇಕೆ ಎಂದು ಪ್ರಶ್ನಿಸಿದೆ. ಅಲ್ಲದೆ, ಸಿಎಂ ನಗರೋತ್ಥಾನ ಯೋಜನೆಯ 2ನೇ ಹಂತಕ್ಕೆ 2016 ರ ಸೆ.26 ರಂದು ಸಿಂಡಿಕೇಟ್ ಬ್ಯಾಂಕ್‌ನಿಂದ 60 ಕೋಟಿ ರೂ. ಹಾಗೂ ಬ್ಯಾಂಕ್ ಆಫ್ ಇಂಡಿಯಾದಿಂದ 40 ಕೋಟಿ ರೂ.ಗಳನ್ನು ತಲಾ ಶೇ. 9.95ರ ಬಡ್ಡಿದರಲ್ಲಿ ಪಡೆದಿದ್ದ 100 ಕೋಟಿ ರೂ. ಸಾಲವನ್ನು 3ನೇ ಹಂತದ ಕಾಮಗಾರಿಗೆ ತಿರುಗಿಸಲಾಗಿದೆ. ಡಿಎಲ್‌ಸಿ ಒಪ್ಪಿಗೆ ಪಡೆಯದೆ ಸರಕಾರದ ಅನುಮೋದನೆ
ಮಹಾನಗರ ಪಾಲಿಕೆಗಳು ಸಿದ್ಧಪಡಿಸಿದ ಕ್ರಿಯಾಯೋಜನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದ ಜಿಲ್ಲಾ ಮಟ್ಟ ಸಮಿತಿ (ಡಿಎಲ್‌ಸಿ) ಮುಂದಿಟ್ಟು ಅನುಮತಿ ಪಡೆಯಬೇಕು. ಆದರೆ 2021ರ ಸೆಪ್ಟಂಬರ್‌ನಿಂದ ನವೆಂಬರ್ ವರೆಗಿನ ಬಳ್ಳಾರಿ ಮತ್ತು ಮೈಸೂರು ಮಹಾನಗರ ಪಾಲಿಕೆಯ ಲೆಕ್ಕಪರಿಶೋಧನೆ ವೇಳೆ 43.57 ಕೊಟಿ ರೂ.ಗಳ ಪರಿಷ್ಕೃತ ಕ್ರಿಯಾಯೋಜನೆಗೆ ಡಿಎಲ್‌ಸಿ ಒಪ್ಪಿಗೆ ಪಡೆಯದೆ, ಸರಕಾರದ ಅನುಮೋದನೆ ಪಡೆದುಕೊಂಡಿದ್ದು, ಇದು ಸಮುದಾಯ ಯೋಜನೆ ಪರಿಕಲ್ಪನೆಗೆ ವಿರುದ್ಧವಾಗಿ ಎಂದು ಸಮಿತಿ ಆಕ್ಷೇಪಿಸಿದೆ. ಕ್ರಿಯಾ ಯೋಜನೆ ಅನುಮೋದಿಸಿ, ಆಡಳಿತಾತ್ಮಕ ಹಾಗೂ ತಾಂತ್ರಿಕ ಮಂಜೂರಾತಿಗಳನ್ನು ಪಡೆದು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿದ ನಂತರ ಕಾಮಗಾರಿ ಅನುಷ್ಠಾನ ವಿಳಂಬವಾದ್ದರಿಂದ 2015-16ರಲ್ಲಿ 27.64 ಕೋಟಿ ರೂ. ಅನುದಾನ ಲ್ಯಾ±Õ… ಆಗಿದೆ. 2014-21ರವರೆಗೆ ಬಿಡುಗಡೆಯಾಗಿದ್ದ 532.78 ಕೋಟಿ ರೂ.ಗಳಲ್ಲಿ ಇದೇ ಕಾರಣದಿಂದ 43.33 ಕೋಟಿ ರೂ. ರದ್ದಾಯಿತು.