Advertisement

ವಾಲ್ಮೀಕಿ ಜಾತ್ರೆಗೆ ಬನ್ನಿ: ಪ್ರಸನ್ನಾನಂದ ಶ್ರೀ

06:28 PM Dec 20, 2020 | Suhan S |

ಹನೂರು: ರಾಜ್ಯದಲ್ಲೇ 4ನೇ ದೊಡ್ಡ ಸಮುದಾಯ ವಾಗಿರುವ ವಾಲ್ಮೀಕಿ ಸಮಾಜವು 50-60ಲಕ್ಷಜನಸಂಖ್ಯೆ ಹೊಂದಿದೆ. ಈ ನಿಟ್ಟಿನಲ್ಲಿ ಮೀಸಲಾತಿ ಯನ್ನು ಶೇ.3ರಿಂದ ಶೇ.7.5ಕ್ಕೆ ಹೆಚ್ಚಳಗೊಳಿಸ ಬೇಕು ಎಂದು ಪ್ರಸನ್ನಾನಂದ ಶ್ರೀ ಆಗ್ರಹಿಸಿದರು.

Advertisement

ಪಟ್ಟಣದ ಲೋಕೋಪಯೋಗಿ ಇಲಾಖಾ ವಸತಿ ಗೃಹದ ಆವರಣದಲ್ಲಿ ನಡೆದ ವಾಲ್ಮೀಕಿ ಜಾತ್ರೆ ಪೂರ್ವಭಾವಿ ಸಭೆ ಮತ್ತು ಜನಾಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮುದಾಯಕ್ಕೆ ಸೇರಿದವರು ರಾಜ್ಯದ 28 ಜಿಲ್ಲೆಗಳಲ್ಲಿ ವಾಸಿಸುತ್ತಿದ್ದ 50-60 ಲಕ್ಷ ಜನಸಂಖ್ಯೆ ಹೊಂದಿದ್ದೇವೆ. ಈ ಮೂಲಕ ರಾಜ್ಯದ 4ನೇ ಅತಿದೊಡ್ಡ ಸಮುದಾಯವಾಗಿದೆ. ಆದರೆ ಸಮುದಾಯಕ್ಕೆ ದೊರಕಬೇಕಾದ ಸಾಂವಿಧಾನಕ ಹಕ್ಕುಗಳಿಂದ ವಂಚಿತರಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ಸಮುದಾಯವನ್ನು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಮತ್ತು ರಾಜಕೀಯುವಾಗಿ ಸಮಾಜದ ಮುಖ್ಯ ವಾಹಿನಿಗೆ ತರಲುು ಮೀಸಲಾತಿಯನ್ನು ಶೇ.3ರಿಂದಶೇ.7.5ಕ್ಕೆ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ 2021ರ ಫೆ.8 ಮತ್ತು 9ರಂದು ರಾಜ್ಯಮಟ್ಟದ ವಾಲ್ಮೀಕಿ ಜಾತ್ರೆ ಮತ್ತುಜನಜಾಗೃತಿ ಸಭೆ ಹಮ್ಮಿಕೊಳ್ಳಲಾಗಿದೆ. ಸಮುದಾಯ ದವರು ಭಾಗವಹಿಸಬೇಕು ಎಂದರು.

ಇದೇ ವೇಳೆ ವಾಲ್ಮೀಕಿ ಸೇವಾ ಸಮಿತಿಯ ಪದಾಧಿಕಾರಿಗಳಾಗಿ ಹನೂರು ಮಹೇಶ್‌ನಾಯ್ಕ, ಹುತ್ತೂರು ಚಿಕ್ಕಮಾದನಾಯ್ಕ, ಬಂಡಳ್ಳಿ ವೆಂಕಟಾಚಲ(ತಿರುಪತಿ), ಕೌದಳ್ಳಿ ಸ್ವಾಮಿ ಮತ್ತು ಶಾಗ್ಯ ಕೆಂಚಪ್ಪ ಅವರನ್ನು ಆಯ್ಕೆ ಮಾಡಲಾಯಿತು.  ಬಳಿಕ ಜಂಗಲ್‌ ಲಾಡ್ಜಸ್‌ ಮತ್ತು ರೆಸಾರ್ಟ್‌ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಅಪ್ಪಣ್ಣ, ಪಾಳ್ಯ ಕೃಷ್ಣ, ಕೊಪ್ಪಾಳಿ ಮಹದೇವ ನಾಯ್ಕ, ಪಾಳ್ಯ ಜಯಸುಂದರ, ಮಾನಸ ಸಂಸ್ಥೆಯ ದತ್ತೇಶ್‌ಕುಮಾರ್‌ ಅವರನ್ನು ಗೌರವಿಸಲಾಯಿತು. ಬಳಿಕ ಜಾತ್ರಾ ಮಹೋತ್ಸವ ಮತ್ತು ಜನಜಾಗೃತಿ ಸಭೆಯ ಭಿತ್ತಿಪತ್ರ ಬಿಡುಗಡೆಗೊಳಿಸಲಾಯಿತು.

ಈ ವೇಳೆ ಮುಖಂಡರಾದ ಉದ್ದನೂರು ಸಿದ್ಧರಾಜು ಹಾಗೂ ತಾಲೂಕಿನ ವಿವಿಧ ಗ್ರಾಮಗಳ ವಾಲ್ಮೀಕಿ ಸಮುದಾಯದ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next