Advertisement

Valmiki ಆಶ್ರಮ ಶಾಲೆ ಸಂಪನ್ಮೂಲ ಶಿಕ್ಷಕರ ಕನಿಷ್ಠ ವೇತನ ಏರಿಕೆಗೆ ಒಪ್ಪಿಗೆ

11:12 PM Oct 13, 2023 | Team Udayavani |

ಸುರತ್ಕಲ್‌: ರಾಜ್ಯ ಸರಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಾಲ್ಮೀಕಿ ಅಶ್ರಮ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರ ಸಂಪನ್ಮೂಲ ಶಿಕ್ಷಕರ ಮಾಸಿಕ ವೇತನವನ್ನು 10 ಸಾವಿರ ರೂ.ಗಳಿಂದ 16,600 ರೂ.ಗಳಿಗೆ ಏರಿಸಲು ಸರಕಾರ ತಾತ್ವಿಕ ಒಪ್ಪಿಗೆ ನೀಡಿದೆ.

Advertisement

ಈ ಶಿಕ್ಷಕರಿಗೆ ಸಿಗುವ ಅತೀ ಕಡಿಮೆ ವೇತನದ ಕುರಿತು ವರ್ಷದ ಹಿಂದೆ ಶಾಸಕ ಉಮಾನಾಥ ಕೋಟ್ಯಾನ್‌ ವಿಧಾನಸಭೆಯ ಅಧಿವೇಶನದಲ್ಲಿ ಧ್ವನಿ ಎತ್ತಿದ್ದು, ವೇತನವನ್ನು ಕನಿಷ್ಠ 25 ಸಾವಿರ ರೂ.ಗೆ ಏರಿಸುವಂತೆ ಒತ್ತಡ ಹೇರಿದ್ದರು.

ಪ್ರಸಕ್ತ ಸರಕಾರ ಬದಲಾವಣೆ ಅಗಿರುವುದರಿಂದ ಕೋಟ್ಯಾನ್‌ ಅವರು ಮತ್ತೆ ವಿಧಾನಸಭೆಯ ಅರ್ಜಿಗಳ ಸಮಿತಿಯ ಗಮನಕ್ಕೆ ತಂದಿದ್ದು, ಗುರುವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನ. 1ರಿಂದ ರಾಜ್ಯದ ವಾಲ್ಮೀಕಿ ಆಶ್ರಮ ಶಾಲೆಗಳ ಸುಮಾರು 2 ಸಾವಿರ ಶಿಕ್ಷಕರ ಕನಿಷ್ಠ ವೇತನ ಹೆಚ್ಚಿಸುವ ಬಗ್ಗೆ ಒಪ್ಪಿಗೆ ದೊರೆತಿದೆ.

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next