ರಂಗಭೂಮಿಯಲ್ಲಿ ಇತ್ತೀಚೆಗೆ ಸಂಚಲನ ರೂಪಿಸಿದ ನಾಟಕ ಯಾವುದು ಅಂತ ಕೇಳಿದ್ರೆ, ಬರುವ ಉತ್ತರ “ವಾಲಿವಧೆ’. ಕುವೆಂಪು ಅವರ “ರಾಮಾಯಣ ದರ್ಶನಂ’ ಒಂದು ತುಣುಕನ್ನು ಎತ್ತಿಕೊಂಡು, ಅತ್ಯಂತ ನಾಜೂಕಿನಲ್ಲಿ ಆ ವಾಲಿಯನ್ನು ರಂಗದ ಮೇಲೆ ಅರಳಿಸಿದ ಹಿರಿಮೆ ನಿರ್ದೇಶಕ ಎಂ. ಗಣೇಶ ಉಡುಪಿ ಅವರದು. ವಾಲ್ಮೀಕಿ ರಾಮಾಯಣದ ದುಷ್ಟ ವಾಲಿಯನ್ನು ಕುವೆಂಪು ವಿಭಿನ್ನವಾಗಿ ಚಿತ್ರಿಸಿದ್ದರು. ಅವನ ಕೊನೆಯ ದಿನಗಳಲ್ಲಿ ಪ್ರೀತಿಗಾಗಿ ತುಡಿಯುವ, ಪಶ್ಚಾತ್ತಾಪ ಮತ್ತು ವಿವೇಕದಿಂದ ನಡೆದುಕೊಳ್ಳುವ ಪಾತ್ರದಂತೆ ಆ ವಾಲಿಯನ್ನು ತೋರಿಸಿದ್ದರು. ಆ ಸೂಕ್ಷ್ಮತೆಗೆ ಎಲ್ಲೂ ದಕ್ಕೆಯಾಗದಂತೆ ನೋಡಿಕೊಂಡಿದ್ದಾರೆ, ಗಣೇಶ್. ವಾಲಿ- ಸುಗ್ರೀವರ ಕಾಳಗ, ಅವರ ನಡುವಿನ ಸಂಭಾಷಣೆಯು ಪ್ರೇಕ್ಷಕನ ಹೃದಯದಲ್ಲಿ ಹರಳಗಟ್ಟುವಂತೆ ಮಾಡಿಸುತ್ತವೆ. ಈ ಸೂಪರ್ ಹಿಟ್ ನಾಟಕವನ್ನು ರಾಜಧಾನಿಯಲ್ಲಿ ಮತ್ತೂಮ್ಮೆ ದೃಶ್ಯೀಕರಿಸುತ್ತಿರುವುದು, ಹಾನಗಲ್‌ನ ಗಜಾನನ ಯುವಕ ಮಂಡಳಿ.
ಯಾವಾಗ?: ಮೇ 19, ಶನಿವಾರ, ಸಂ.5.30
ಎಲ್ಲಿ?: ಚೌಡಯ್ಯ ಮೆಮೋರಿಯಲ್ ಹಾಲ್
ಪ್ರವೇಶ: 249 ರೂ.