Advertisement

Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!

07:52 PM Nov 22, 2024 | Team Udayavani |

ಬೆಂಗಳೂರು: ‘ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ’ ಎನ್ನುವ ವಿದ್ಯಾರ್ಥಿಯ ಹೇಳಿಕೆ ಬಳಿಕ ಬಾರೀ ಟ್ರೊಲ್ ಆಗಿದ್ದ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶುಕ್ರವಾರ(ನ22) ಕಿಡಿ ಕಾರಿ, ನಾನು ಟ್ರೊಲ್ ಗಳಿಗೆ ಬಗ್ಗುವುದಿಲ್ಲ ಎಂದಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ ಬುಧವಾರ ನಡೆದ ಘಟನೆ ಕುರಿತು ಪ್ರಶ್ನಿಸಿದಾಗ ಮತ್ತೆ ಕಿಡಿಯಾದರು. ‘ನಾನೊಬ್ಬ ಶಿಕ್ಷಣ ಸಚಿವ, ನೀವು ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತೀರಿ. ನಿಮ್ಮ ಮಗ ಹಾಗೆ ಮಾತನಾಡಿದ್ದಾರೆ ನೀವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

60-70 ಸಾವಿರ ಮಕ್ಕಳು ಆನ್ ಲೈನ್ ನಲ್ಲಿ ಇದ್ದಾಗ ವಿದ್ಯಾರ್ಥಿ ಆ ರೀತಿ ಮಾತನಾಡಿರುವುದು ಸರಿಯಲ್ಲ. ಈ ರೀತಿ ಮಾಡಿದರೆ ಶಾಲೆಗಳಲ್ಲಿ ಶಿಸ್ತು ತರಲು ಸಾಧ್ಯವಾಗುತ್ತದಾ? ನಾನೊಬ್ಬ ತಂದೆಯಾಗಿ ಇದನ್ನ ಹೇಳುತ್ತಿದ್ದೇನೆ. ನನ್ನ ಮಗ ಹೀಗೆ ಮಾಡಿದರೂ ಪ್ರಶ್ನಿಸುತ್ತಿದ್ದೆ’ ಎಂದರು.

1,500 ರೂ. ವೆಚ್ಚದಲ್ಲಿ ಮಕ್ಕಳಿಗೆ ಗೆ ಮೊಟ್ಟೆ ಕೊಟ್ಟಿರುವ ವಿಚಾರ ಹೇಳುತ್ತಿಲ್ಲ. ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲಅನ್ನುವುದನ್ನು ದೊಡ್ಡದು ಮಾಡುತ್ತೀರಿ ಎಂದು ಸಿಡಿಮಿಡಿಗೊಂಡರು.

‘ನಾನು ಆ ರೀತಿ ಮಾತನಾಡಿದ ವಿದ್ಯಾರ್ಥಿ ವಿರುದ್ದ ಕ್ರಮ ತೆಗೆದುಕೊಳ್ಳಿ ಎಂದು ಹೇಳಿಲ್ಲ. ಹೆಡ್ ಮಾಸ್ಟರ್, ಬಿಇಒ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದ್ದೆ. ಮಕ್ಕಳ ಮೇಲೆ ಕ್ರಮ ತೆಗೆದುಕೊಳ್ಳಲು ನಮಗೆ ಅಧಿಕಾರ ಇಲ್ಲ. ಮಕ್ಕಳನ್ನ ಹತೋಟಿಯಲ್ಲಿ ಇಡಬೇಕು ಎಂದು ಮುಖ್ಯೋಪಾದ್ಯಾಯರಿಗೆ, ಬಿಇಒಗೆ ಸೂಚನೆ ನೀಡಿದ್ದೇನೆ’ ಎಂದರು.

Advertisement

ವಿಧಾನ ಸೌಧದಲ್ಲಿ ಬುಧವಾರ ನಡೆದ ನೀಟ್ ಆನ್‌ಲೈನ್‌ ಕೋಚಿಂಗ್ ತರಗತಿ ತರಬೇತಿ ಉದ್ಘಾಟನಾ ಕಾರ್ಯಕ್ರಮ ವೇಳೆ ಅಧಿಕಾರಿಗಳ ಸಮ್ಮುಖದಲ್ಲೇ ಸಚಿವ ಮಧು ನಗೆಪಾಟಲಿಗೀಡಾಗಿದ್ದರು.

ಆನ್‌ಲೈನ್ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಳ್ಳುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದಿದ್ದ. ಇದನ್ನು ಕೇಳಿಸಿಕೊಂಡ ಸಚಿವ ಮಧು ಬಂಗಾರಪ್ಪ ಮೊದಲು ತಣ್ಣಗೆ, ಏಯ್‌ ಯಾರೋ ಅವನು..ನಾನೇನು ಉರ್ದುವಿನಲ್ಲಿ ಮಾತಾಡ್ತಾ ಇದ್ದೀನಾ, ಟಿವಿಯವರು ಇದನ್ನೇ ಹಾಕಿಕೊಂಡು ಹೊಡಿತಾರೆ ಎಂದು ಬಳಿಕ ಗರಂ ಆಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದರು. ಈ ವಿಚಾರವನ್ನು ಬಿಜೆಪಿ ಸೇರಿ ಹಲವರು ಭಾರೀ ಟ್ರೋಲ್ ಮಾಡಿದ್ದರು. ಕ್ರಮ ಕೈಗೊಳ್ಳಲು ಸೂಚಿಸುದರ ವಿರುದ್ಧ ಆಕ್ರೋಶವೂ ವ್ಯಕ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next