Advertisement
ಗುಲಾಬಿ ಬೆಳೆಯುವ ಬೆಳೆಗಾರರಿಗೆ ಮಾತ್ರ ಲಾಭವಾಗುತ್ತಿಲ್ಲ. ಹೆಚ್ಚಿನ ಬೆಲೆ ಬೇಡಿಕೆಯಿದ್ದರೂ ಮಾಮೂಲಿ ದರದಲ್ಲಿ ರೈತರಿಗೆ ಹಣ ನೀಡುತ್ತಾರೆ. ವಿವಿಧ ಜಾತಿಯ ಗುಲಾಬಿ ಹೂಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ದರದಲ್ಲಿ ಬಿಕರಿಯಾಗುತ್ತಿದೆ. ಫೆ.14 ಪ್ರೇಮಿಗಳ ದಿನಾಚರಣೆಗೆ ರಫ್ತಾಗುತ್ತಿರುವ 26 ಗುಲಾಬಿ ಹೂಗಳ ಬಂಚ್‌ನ ಬೆಲೆ ಕೇವಲ 26 ರೂ. ಗೆ ರೈತರಿಂದ ಮಾರಾಟಗಾರರು ಖರೀದಿಸುತ್ತಾರೆ. ಹಬ್ಬ ಹರಿದಿನವಿರಲಿ , ಪ್ರೇಮಿಗಳ ದಿನವಿರಲಿ ನಮಗೆ ಎಂದಿನಂತೆ ಕಡಿಮೆ ಬೆಲೆಗೆ ಬಿಕರಿಯಾಗುತ್ತದೆ. ಯಾವುದೇ ದಿನ ರೈತರಿಗೆ ಏನು ವಿಶೇಷವಲ್ಲ ಅಂತಾರೆ ರೈತರು.
Related Articles
Advertisement
ಡಚ್ ರೋಸ್‌ಗಳ ಬೆಳೆ: ಡಚ್ ರೋಜ್‌ಗಳು ಸಾಧಾರಣವಾಗಿ ಕೆಂಪು, ಬಿಳಿ, ಪಿಂಕ್, ಹಳದಿ, ಹಿತ್ತಾಳೆ ಬಣ್ಣದಲ್ಲಿ ಬೆಳೆಯಲಾಗುತ್ತದೆ. ಅತಿ ಹೆಚ್ಚಿನ ಉಷ್ಣಾಂಶವಿದ್ದರೆ ಹೂಗಳು ಬೇಗನೆ ಅರಳುತ್ತದೆ. ಸಾಧಾರಣವಾಗಿ ಮದುವೆ ಸೀಜನ್‌ಗಳಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಗುಲಾಬಿ ಹೂಗಳಿಗೆ ಪ್ರೇಮಿಗಳ ದಿನಾಚರಣೆಗೆ ಬೋನಸ್ ಸಿಕ್ಕಿದ್ದು ರಫ್ತು ವಹಿವಾಟು ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಒಂದು ಗುಲಾಬಿ ಹೂ ಬಂಚ್‌ಗೆ ಪ್ರೇಮಿ ಗಳ ದಿನದಂದು 40-50 ರೂ.ವರೆಗೂ ಮಾರಾಟವಾಗುತ್ತದೆ. ಹೂಗಳು ಬೇಗ ಅರುಳುವುದನ್ನು ತಡೆಯಲು ಮೊಗ್ಗುಗಳಿಗೆಕ್ಯಾಪ್ ಹಾಕಲಾಗುವುದು. ಒಂದು ಎಕರೆಗೆ ಸಾಧಾರಣ ವಾಗಿ 1500 ಹೂ.ಗಳನ್ನು ಬೆಳೆಯಬಹುದಾಗಿದೆ. ಒಂದು ಹೂವಿನ ಬೆಲೆ 05-10 ರೂ ಇರುತ್ತದೆ. ಮದರ್ ಡೇ, ಪ್ರೇಮಿಗಳ ದಿನಾಚರಣೆಯ ಅಂಗವಾಗಿ ಹಾಗೂ ವಿಶೇಷ ಸಂದರ್ಭಗಳಲ್ಲಿ ಹೂವಿನ ಬೆಲೆ ಹೆಚ್ಚಾಗುತ್ತದೆ. ಅಗಲ ಕೋಟೆಯ ರೈತ ದೇವರಾಜ್ ಕಳೆದ 8 ವರ್ಷಗಳಿಂದ ಗುಲಾಬಿ ತೋಟ ಮಾಡುತ್ತಾ ಬಂದಿದ್ದಾರೆ. ಪ್ರತಿ ದಿನವೂ ಗುಲಾಬಿ ಹೂವನ್ನು ಇಲ್ಲಿನ ವ್ಯಾಪರಸ್ಥರೇ ಖರೀದಿಸಿಕೊಂಡು ಹೋಗುತ್ತಾರೆ. 3 ಲಕ್ಷ ಹಣವನ್ನು ತೋಟಕ್ಕೆ ವೆಚ್ಚ ಮಾಡಿದ್ದೇವೆ. 3-4 ದಿನಕ್ಕೆ ನೀರನ್ನು ಹಾಕುತ್ತೇವೆ. ಪ್ರತಿ 6 ತಿಂಗಳಿಗೆ ಗೊಬ್ಬರ ಹಾಕಬೇಕು. ಪ್ರತಿ ದಿನ 3 ಸಾವಿರ ಹೂಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ರೈತರು ಹೇಳುತ್ತಾರೆ. – ಎಸ್ ಮಹೇಶ್