Advertisement
ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ರಚನೆಯಾಗುವ ನಗರ ಆಶ್ರಯ ಸಮಿತಿಗೆ ಅರ್ಹರನ್ನು ಹುಡುಕುವುದೇ ದೊಡ್ಡ ಸವಾಲು ಎಂಬಂತಾಗಿದೆ. ನಗರ ಪ್ರದೇಶದಲ್ಲಿ ವಾಸವಿದ್ದರೂ ಸ್ವಂತಕ್ಕೊಂದು ಜಾಗ ಹೊಂದಿಲ್ಲದ ಬಡವರಿಂದ 6 ವರ್ಷದ ಹಿಂದೆಯೇ ಅರ್ಜಿ ಆಹ್ವಾನಿಸಲಾಗಿತ್ತು. ತಮ್ಮ ದಾಖಲೆಯೊಂದಿಗೆ ನಿಗದಿತ ಅರ್ಜಿಗಳನ್ನು ತುಂಬಿದ ನಿವೇಶನ ರಹಿತರು ಜಾಗದ ನಿರೀಕ್ಷೆಯಲ್ಲೇ ದಿನ ಕಳೆಯುತ್ತಿದ್ದಾರೆ.
Related Articles
ನಡೆಸಲು ಸೂಚಿಸಲಾಗಿತ್ತು ಎನ್ನುತ್ತಾರೆ ಅಧಿಕಾರಿಗಳು.
Advertisement
ಅರ್ಜಿದಾರರ ಸಂಖ್ಯೆ 5,826ಕ್ಕೆ ಏರಿಕೆಯಾದ ಮೇಲೆ ಅದರಲ್ಲಿ ಅರ್ಹರನ್ನು ಶೋಧಿಸಲು ಮತ್ತೆ ದುರ್ಬೀನು ಹಿಡಿದು ಹೊರಡಲಾಗುತ್ತಿದೆ. ವಾಜಪೇಯಿ ನಗರ ವಸತಿ ಯೋಜನೆಯಡಿ 600 ಬಡ ಕುಟುಂಬಗಳಿಗೆ ವಸತಿ ಕಲ್ಪಿಸಲು ಮುಂದಾದ ಸರಕಾರದ ಯೋಜನೆ, ಮತ್ತೆ ಪರೀಕ್ಷೆಗೆ ಒಳಪಟ್ಟಿದೆ. ಇದೀಗ ನಗರಸಭೆ ಸಿಬ್ಬಂದಿ ಅರ್ಜಿದಾರರ ವಿಳಾಸಕ್ಕೆ ತೆರಳಿ ಅವರನ್ನು ಅರ್ಹ-ಅನರ್ಹರೆಂದು ಪತ್ತೆ ಹಚ್ಚಲು ಆರಂಭಿಸಿದ್ದಾರೆ.
ಸರಕಾರದ ಬೊಕ್ಕಸಕ್ಕೆ ಹೊರೆ: ಆಯಾ ವರ್ಷ ಇಲ್ಲವೇ ತಾಂತ್ರಿಕ, ಆಡಳಿತಾತ್ಮಕ ತೊಡಕುಗಳಿದ್ದರೆ ಮುಂದಿನ ವರ್ಷಕ್ಕಾದರೂ ಪರಿಹರಿಸಿಕೊಳ್ಳಬೇಕು. ಆದರೆ, ನಗರದಲ್ಲಿ ವಸತಿ ಕಲ್ಪಿಸುವ ಯೋಜನೆಗೆ ಅಂತಹ ಯೋಗ ಕೂಡಿಬಂದಿಲ್ಲ. ಬಪ್ಪೂರು ರಸ್ತೆಯಲ್ಲಿ ವಸತಿ ಯೋಜನೆಗಾಗಿ ಸರಕಾರದಿಂದ 18.12 ಎಕರೆ ಜಮೀನು ಖರೀದಿಸಲಾಗಿದೆ. ಕನಕದಾಸ ಕಾಲೇಜ್ ಸಮೀಪದಲ್ಲಿ 11 ಎಕರೆ ಜಮೀನು ಖರೀದಿಸಲಾಗಿದೆ. ನಗರದ ಬಡವರಿಗೆ ನಿವೇಶನ ಕಲ್ಪಿಸುವ ಉದ್ದೇಶದಿಂದಲೇ ಈ ಎಲ್ಲ ಜಮೀನುಗಳಿಗೆ ಮಾರುಕಟ್ಟೆ ದರ ಆಧರಿಸಿ ಸರಕಾರದಿಂದ ಖರೀದಿಸಲಾಗಿದೆ. ಸರಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದ ಖರ್ಚು ಬಿದ್ದಿದೆ. ಅದರ ಪ್ರಯೋಜನ ಜನರಿಗೆ ತಲುಪಿಲ್ಲ.
ಬೇಕಾದಷ್ಟು ಸರಕಾರಿ ಸುಪರ್ದಿಯಲ್ಲಿರುವ ಜಮೀನು ಲಭ್ಯವಿದೆ. ಅರ್ಹರನ್ನು ಗುರುತಿಸಿ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆ ಮಾತ್ರ ಕಬ್ಬಿಣದ ಕಡಲೆಯಾಗಿದೆ. ಆಂತರಿಕವಾಗಿ ಏರ್ಪಟ್ಟಿರುವ ರಾಜಕೀಯ ಸಂಘರ್ಷವೇ ಈ ವಿಳಂಬ ನೀತಿಗೆಕಾರಣವೆಂಬ ಮಾತು ಕೇಳಿಬಂದರೂ ನಗರಸಭೆ ಅಧಿಕಾರಿಗಳ ಬಳಿ ಸ್ಪಷ್ಟ ಉತ್ತರವಿಲ್ಲ. ಹೊಸದಾಗಿ ಅರ್ಜಿ ಹಾಕುವುದಕ್ಕೆ ಅವಕಾಶವಿಲ್ಲ; ಹಾಕಿರುವ ಹಳೇ ಅರ್ಜಿಗಳನ್ನು ಇತ್ಯರ್ಥಪಡಿಸುವುದಕ್ಕೆ ಇನ್ನೆಷ್ಟು ವರ್ಷ ಕಾಯಬೇಕು ಎನ್ನುವುದೇ ನಿರಾಶ್ರಿತರ ಪ್ರಶ್ನೆ.