Advertisement

ವಲಸೆ ಬಂದ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ಕೆಲಸ

04:14 PM Jul 09, 2020 | Naveen |

ವಡಗೇರಾ: ಕೋವಿಡ್ ವೈರಸ್‌ ಹಿನ್ನೆಲೆಯಲ್ಲಿ ವಲಸೆ ಬಂದ ಮತ್ತು ಗ್ರಾಮದಲ್ಲಿರುವ ಕಾರ್ಮಿಕರಿಗೆ ಯಾವುದೇ ತೊಂದರೆಯಾಗದಂತೆ ಉದ್ಯೋಗ ಖಾತ್ರಿ ಯೋಜನೆ ಕೆಲಸ ನೀಡಲಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗನ್ನಾಥ ಮೂರ್ತಿ ಹೇಳಿದರು.

Advertisement

ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, 15ನೇ ಹಣಕಾಸು ಯೋಜನೆಯಡಿ ಕ್ರಿಯಾ ಯೋಜನೆ ಸಿದ್ದಪಡಿಸಿ ಜಿಪಂಗೆ ಕಳುಹಿಸಲಾಗಿದೆ. ಸರ್ಕಾರದಿಂದ ಗ್ರಾಪಂಗೆ ಮಾತ್ರ 15ನೇ ಹಣಕಾಸು ಬರುತ್ತಿತ್ತು. ಪ್ರಸ್ತುತ ವರ್ಷದಲ್ಲಿ ಸರ್ಕಾರ ತಾಪಂಗೆ 15ನೇ ಹಣಕಾಸ ನೀಡಿದೆ. ನೂತನ ವಡಿಗೇರಾ ತಾಲೂಕಿಗೆ 15ನೇ ಹಣಕಾಸು ಪ್ರತ್ಯೇಕವಾಗಿ ಮಂಜೂರಾಗಿದೆ. ಕೆಲವು ದಿನಗಳ ಕಾಲ ಸಿಬ್ಬಂದಿಯನ್ನು ವಡಗೇರಾ ತಾಲೂಕಿಗೆ ತಾತ್ಕಾಲಿಕವಾಗಿ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ರಾಹುತಪ್ಪ ಹವಾಲ್ದಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ. ಎಸ್‌. ಸೂರ್ಯವಂಶಿ, ತಾಲೂಕು ವೈದ್ಯಾಧಿಕಾರಿ ಡಾ| ರಮೇಶ ಗುತ್ತೇದಾರ, ಬಿಸಿಎಂ ಅಧಿಕಾರಿ ಶರಣಪ್ಪ ಬಳಬಟ್ಟಿ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ| ಷಣ್ಮುಖಪ್ಪ. ತೋಟಗಾರಿಕೆ ಇಲಾಖೆಯ ಶಶಿಕಾಂತ ಕಟ್ಟಿಮನಿ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next