Advertisement

ವಚನ ವಿಜಯೋತ್ಸವ

10:30 AM Feb 15, 2019 | Team Udayavani |

ಬೀದರ: ಲಿಂಗಾಯತ ಮಹಾಮಠ ಬಸವ ಸೇವಾ ಪ್ರತಿಷ್ಠಾನದಿಂದ ಫೆ.17, 18 ಮತ್ತು 19ರಂದು ವಚನ ವಿಜಯೋತ್ಸವ-2019 ಅದ್ಧೂರಿಯಾಗಿ ನಡೆಯಲಿದೆ ಎಂದು ಅಕ್ಕ ಅನ್ನಪೂರ್ಣ ಹೇಳಿದರು.

Advertisement

ನಗರದ ಶರಣ ಉದ್ಯಾನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶರಣರ ತ್ಯಾಗ ಬಲಿದಾನಗಳ ಸ್ಮರಣೆಣೆಗಾಗಿ ಮತ್ತು ವಚನಗಳಲ್ಲಿಯ ಮಾನವೀಯ ಮೌಲ್ಯಗಳನ್ನು ಜನರ ಮನದಲ್ಲಿ ನೆಲೆಗೊಳಿಸಿ, ಸರ್ವಾಂಗೀಣ ಸುಂದರ ಸಮಾಜ ನಿರ್ಮಿಸುವ ಉದ್ದೇಶದಿಂದ ಪ್ರತಿ ವರ್ಷ ವಚನ ವಿಜಯೋತ್ಸವ ಆಚರಿಸಲಾಗುತ್ತಿದೆ ಎಂದರು. 

ಫೆ.17ರಂದು ಬೆಳಿಗ್ಗೆ 8 ಗಂಟೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ದೇಶಾಂತ ಹುಡಗಿ ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಲಿದ್ದು, ಅಕ್ಕ ಅನ್ನಪೂರ್ಣ ಅವರ ನೇತೃತ್ವದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಲಿದೆ. 11 ಗಂಟೆಗೆ ಸಮಾರಂಭ ಉದ್ಘಾಟನೆಗೊಳ್ಳಲಿದ್ದು, ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಭಾಗವಹಿಸುವರು. 

ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ| ಸಿ.ಎನ್‌. ಮಂಜುನಾಥ ಪ್ರೇರಣಾ ನುಡಿ ಹೇಳುವರು. ಸಂಸದ ಭಗವಂತ ಖೂಬಾ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ಅಂದು ಮಧ್ಯಾಹ್ನ 3 ಗಂಟೆಗೆ ಲಿಂಗಾಯತ ಜಾಗೃತಿ ಸಮಾವೇಶ ಹಾಗೂ ಸಂವಾದ ಕಾರ್ಯಕ್ರಮ ನಡೆಯಲಿದ್ದು, ಜಾಗತಿಕ ಲಿಂಗಾಯತ ಮಹಾಸಭೆಯ ಡಾ| ಎಸ್‌. ಎಂ. ಜಮಾದಾರ ಅವರು ಲಿಂಗಾಯತ ಸಮಾಜದ ಎದುರಿಸುತ್ತಿರುವ ಸವಾಲುಗಳು ಮತ್ತು ಪರಿಹಾರ ಕುರಿತು ಉಪನ್ಯಾಸ ನೀಡಲ್ಲಿದ್ದಾರೆ. ಸಂಜೆ 6 ಗಂಟೆಗೆ ಸಾಂಸ್ಕೃತಿಕ ಸೌರಭದಲ್ಲಿ ಭಾರತೀಯ ತಾಳವಾದ್ಯಗಳ ನುಡಿಸುವಿಕೆ ಮತ್ತು ಬೆಳಗು ಸಾಂಸ್ಕೃತಿಕ ಸಂಸ್ಥೆಯಿಂದ ಸಂಗೀತ ರಸಮಂಜರಿ ಕರ್ಯಕ್ರಮಗಳು ಜರುಗಲಿವೆ. ಫೆ.18ರಂದು 11ಗಂಟೆಗೆ ಯುವ ಜಾಗೃತಿ ಸಮಾವೇಶ ನಡೆಯಲಿದೆ. ಬೆಂಗಳೂರಿನ ಪೊಲೀಸ್‌ ಉಪ ಆಯುಕ್ತ ರವಿ ಚನ್ನಣ್ಣನವರ ಅವರು ಪ್ರೇರಣಾತ್ಮಕ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಮಹಿಳಾ ಜಾಗೃತಿ ಸಮಾವೇಶ ನಡೆಯಲಿದ್ದು, ಅನೇಕ ಮಹನೀಯರು
ಭಾಗವಹಿಸಲಿದ್ದಾರೆ.

ಫೆ.19ರಂದು 9 ಗಂಟೆಗೆ ನಗರದ ಬಸವೇಶ್ವರ ವೃತ್ತದಿಂದ ಬಸವಗಿರಿವರೆಗೆ ವಚನ ಸಾಹಿತ್ಯ ಹಾಗೂ ಧರ್ಮ ಗ್ರಂಥ ಭವ್ಯ ಮೆರವಣಿಗೆ ಜರುಗಲಿದೆ. 500ಕ್ಕೂ ಅಧಿಕ ಗ್ರಾಮಗಳ ಜನರು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದು, 25 ಕಲಾ ತಂಡಗಳು ಭಾಗವಹಿಸಲಿವೆ. ಮೆರವಣಿಗೆಗೆ ಹೊಸ ಸ್ವರೂಪ ನೀಡುವ ಕಾರ್ಯ ನಡೆಯುತ್ತಿದೆ.
 
ವಚನ ವಿಜಯೋತ್ಸವಕ್ಕೆ ಆಗಮಿಸಲಿರುವ ರಾಜ್ಯದ ವಿವಿಧ ಜಿಲ್ಲೆಗಳ ಬಸವ ಭಕ್ತರಿಗೆ ವಸತಿ, ವಿಶೇಷ ಊಟ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು. ಡಾ| ಗಂಗಾಂಕೆ, ಜೈರಾಜ ಖಂಡ್ರೆ, ಶಿವರಾಜ ಮದಕಟ್ಟಿ, ಸಿ.ಎಸ್‌. ಪಾಟೀಲ, ವಿರೂಪಾಕ್ಷಾ

Advertisement
Advertisement

Udayavani is now on Telegram. Click here to join our channel and stay updated with the latest news.

Next