ಬೆಂಗಳೂರು: ರಾಜ್ಯದಲ್ಲಿ 18ರಿಂದ 45 ವರ್ಷಒಳಗಿನವರಿಗೆ ಲಸಿಕೆ ನೀಡುವ ಅಭಿಯಾನಕ್ಕೆಸಾಂಕೇತಿಕ ಚಾಲನೆ ಸಿಕ್ಕಿದ್ದರೂ, ಅಧಿಕೃತವಾಗಿ ಲಸಿಕೆನೀಡುವ ಪ್ರಕ್ರಿಯೆ ಇನ್ನಷ್ಟೆ ಶುರುವಾಗಬೇಕಿದೆ.
ಕಾಲೇಜು ವಿದ್ಯಾರ್ಥಿಗಳಿಗೆ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಆವರಣದಲ್ಲೇ ಲಸಿಕೆಗೆ ವ್ಯವಸ್ಥೆಮಾಡಬೇಕು ಎಂಬ ಕೂಗು ಕೇಳಿ ಬರುತ್ತಿವೆ. ಸರ್ಕಾರಿ ವಿಶ್ವವಿದ್ಯಾಲಯ, ಖಾಸಗಿ ವಿಶ್ವ ವಿದ್ಯಾನಿಲಯ, ಡೀಮ್ಡ್ ವಿಶ್ವವಿದ್ಯಾಲಯ, ಖಾಸಗಿ ಕಾಲೇಜು, ಸರ್ಕಾರಿ, ಅನುದಾನಿತ ಕಾಲೇಜು ಸೇರಿದಂತೆ ಎಲ್ಲ ಮಾದರಿಯ ಕಾಲೇಜುಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಆಯಾ ಕಾಲೇಜುಗಳಲ್ಲೇ ಲಸಿಕೆ ಹಾಕಿಸಲು ಸರ್ಕಾರ ವ್ಯವಸ್ಥೆ ಮಾಡಿದರೆ, ಉಳಿದಂತೆ ಸಾರ್ವಜನಿಕರು ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ವಿವಿಧಸರ್ಕಾರದ ಅಧಿಕೃತ ಲಸಿಕಾ ಕೇಂದ್ರದಲ್ಲಿ ಲಸಿಕೆಪಡೆಯಲು ಅನುಕೂಲವಾಗಲಿದೆ ಎಂಬುದು ವಿವಿಧಸಂಘಟನೆಗಳ ಬೇಡಿಕೆಯಾಗಿದೆ.ಈ ಸಂಬಂಧ ಈಗಾಗಲೇ ಮಾಜಿ ಮೇಯರ್‌ಬಿ.ಎಸ್. ಸತ್ಯನಾರಾಯಣ( ಕಟ್ಟೆಸತ್ಯ) ಸೇರಿದಂತೆಅನೇಕರು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಪತ್ರ ಬರೆದಿದ್ದಾರೆ.
18 ವರ್ಷ ಮೇಲ್ಪಟ್ಟವರಲ್ಲಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಿರುತ್ತಾರೆ. ಹೀಗಾಗಿ ಸಾಮಾನ್ಯ ನಾಗರಿಕರುಮತ್ತು ಕಾಲೇಜು ವಿದ್ಯಾರ್ಥಿಗಳು ಏಕಕಾಲದಲ್ಲಿಲಸಿಕಾ ಕೇಂದ್ರಕ್ಕೆ ಬಂದರೆ, ಹೆಚ್ಚು ಗೊಂದಲಸೃಷ್ಟಿಯಾಗುವ ಸಾಧ್ಯತೆಯೂ ಇರುತ್ತದೆ, ಹೀಗಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಆಯಾ ಕಾಲೇಜುಗಳಲ್ಲೇಲಸಿಕೆ ಹಾಕಿಸಲು ಶಿಬಿರಗಳನ್ನು ಏರ್ಪಡಿಸಬೇಕು. ಈಹಿಂದೆ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆಯ ನ್ನುಮಾಡಲಾಗಿತ್ತು.ಅದೇ ಮಾದರಿಯಲ್ಲಿ ಲಸಿಕೆಯನ್ನುಹಾಕಿಸುವ ವ್ಯವಸ್ಥೆ ಆಗಬೇಕು ಎಂದು ಕೋರಿದ್ದಾರೆ.
ವಿಶ್ವವಿದ್ಯಾಲಯಗಳಿಗೆ ಸೂಚನೆ: ರಾಜ್ಯಸರ್ಕಾರದಿಂದ ಎಲ್ಲ ವಿಶ್ವ ವಿದ್ಯಾನಿಲಯಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರತಿವಿಶ್ವ ವಿದ್ಯಾನಿಲಯದಲ್ಲೂ ಕೊರೊನಾ ಲಸಿಕೆ ಹಾಕಿಸಲು ಶಿಬಿರಗಳನ್ನು ಆಯೋಜಿಸಬೇಕು. ಆರಂಭದಲ್ಲಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗೆ ಲಸಿಕೆ ಹಾಕಿಸಬೇಕು. ನಂತರ ವಿದ್ಯಾರ್ಥಿಗಳಿಗೆ ಹಾಕಿಸಬೇಕು.ಇಡೀ ಕ್ಯಾಂಪಸ್‌ನಲ್ಲಿ ಎಲ್ಲರೂ ಅತಿ ಶೀಘ್ರದಲ್ಲಿ ಲಸಿಕೆಪಡೆಯುವಂತೆ ಮಾಡಬೇಕು ಎಂದು ಈಗಾಗಲೇಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಸರ್ಕಾರದಿಂದ ಸ್ಪಷ್ಟ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲಸಿಕೆ ಲಭ್ಯತೆ ಆಧಾರದಲ್ಲಿ ಕ್ರಮ: ಕೊರೊನಾ ಲಸಿಕೆಲಭ್ಯತೆ ಆಧಾರದಲ್ಲಿ ಮುಂದಿನ ಕ್ರಮತೆಗೆದುಕೊಳ್ಳಲಾಗುತ್ತದೆ. ಪ್ರತಿ ಕಾಲೇಜುಗಳಲ್ಲೂಲಸಿಕೆ ಶಿಬಿರ ನಡೆಸಿ, ನೀಡಬಹುದಾದಷ್ಟುಪ್ರಮಾಣದಲ್ಲಿ ಲಸಿಕೆ ಲಭ್ಯತೆಯಾದರೆ, ಆ ಬಗ್ಗೆಯೋಚನೆ ಮಾಡಲಾಗುತ್ತದೆ. ಸದ್ಯಕ್ಕೆ ಸರ್ಕಾರದಿಂದಕಾಲೇಜುಗಳಲ್ಲಿ ಲಸಿಕೆ ಶಿಬಿರ ನಡೆಸುವ ಯಾವಸೂಚನೆಯೂ ಬಂದಿಲ್ಲ. ಅಲ್ಲದೆ, ಈಗ ಕಾಲೇಜುಗಳುರಜೆ ಇರುವುದರಿಂದ ಆನ್‌ಲೈನ್ ತರಗತಿ ಮಾತ್ರನಡೆಯುತ್ತಿದೆ. ಮುಂದೆ, ಪರಿಸ್ಥಿತಿ ಆಧಾರದಲ್ಲಿಸರ್ಕಾರ ಹೊರಡಿಸಬಹುದಾದ ಮಾರ್ಗಸೂಚಿಯಂತೆ ಕ್ರಮ ತೆಗೆದುಕೊಳ್ಳಲಿವೆ ಎಂದು ಕಾಲೇಜುಶಿಕಣ Ò ಇಲಾಖೆಯ ಹಿರಿಯ ಅಧಿಕಾರಿಯೊಬ್ಬರುಮಾಹಿತಿ ನೀಡಿದರು.
ರಾಜು ಖಾರ್ವಿ ಕೊಡೇರಿ