ನವದೆಹಲಿ: ಕೋವಿಡ್ 19 ಸೋಂಕಿತರಲ್ಲಿ ಕೋವಿಡ್ ಲಸಿಕೆಯು ನೈಸರ್ಗಿಕ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಜತೆಗೆ ರೂಪಾಂತರಿ ವೈರಸ್ ಗಳಿಂದಲೂ ರಕ್ಷಿಸುವ ಸಾಧ್ಯತೆ ಇದ್ದಿರುವುದಾಗಿ ನೂತನ ಅಧ್ಯಯನವೊಂದು ತಿಳಿಸಿದೆ.
ಇದನ್ನೂ ಓದಿ;ಸದಾ ಒಂದೇ ಮಾಸ್ಕ್ ಬಳಸಿದ್ರೆ ಬರುತ್ತಂತೆ ಬ್ಲಾಕ್ ಫಂಗಸ್ : ತಜ್ಞರು ಹೇಳುವುದೇನು ಗೊತ್ತಾ?
ಅಮೆರಿಕದ ರಾಕ್ ಫೆಲ್ಲರ್ ವಿವಿಯ ಸಂಶೋಧಕರು, ಕೋವಿಡ್ ರೋಗಿಗಳ ರಕ್ತದಲ್ಲಿ ಇರುವ ರೋಗ ನಿರೋಧಕಗಳನ್ನು ವಿಶ್ಲೇಷಿಸಿ ಈ ಅಂಶವನ್ನು ಪತ್ತೆಹಚ್ಚಿರುವುದಾಗಿ ವರದಿ ವಿವರಿಸಿದೆ. ಇದಕ್ಕಾಗಿ ಸುಮಾರು 63 ಮಂದಿಯನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು.
ಈ ಅಧ್ಯಯನದ ಅಂಕಿಅಂಶದ ಪ್ರಕಾರ, ಕಾಲಕ್ರಮೇಣ ಪ್ರತಿರಕ್ಷಣಾ ವ್ಯವಸ್ಥೆಯ ಮೆಮೊರಿ ಬಿ ಜೀವಕೋಶಗಳಿಂದ ಉತ್ಪತ್ತಿಯಾಗುವ ರೋಗ ನಿರೋಧ ಶಕ್ತಿಗಳು ಕೋವಿಡ್ ಗೆ ಕಾರಣವಾಗುವ ಸೋಂಕನ್ನು ನಿಷ್ಕ್ರಿಯಗೊಳಿಸಲು ಲಸಿಕೆ ಉತ್ತಮವಾಗಿ ಕಾರ್ಯನಿರ್ವಸುತ್ತದೆ ಎಂಬುದನ್ನು ತಿಳಿಸಿದೆ.
ಅಧ್ಯಯನಕ್ಕೊಳಗಾದ ಜನರ ರೋಗ ನಿರೋಧಕ ಜೀವಕೋಶಗಳನ್ನು ಪರೀಕ್ಷಿಸಿದಾಗ ಕೋವಿಡ್ 19 ಸೋಂಕಿನ ವಿರುದ್ಧ ದೀರ್ಘಕಾಲ ಹೋರಾಡುವ ಪ್ರತಿಕಾಯಗಳು ಅಭಿವೃದ್ಧಿಯಾಗಿರುವುದು ಪತ್ತೆಹಚ್ಚಿರುವುದಾಗಿ ತಿಳಿಸಿದೆ.