Advertisement

ಜಾಗತಿಕ ಟೆಂಡರ್‌ ಮೂಲಕ ಲಸಿಕೆ ಖರೀದಿ

01:53 PM May 12, 2021 | Team Udayavani |

ಬೆಂಗಳೂರು: ರಾಜ್ಯಕ್ಕೆ ಅಗತ್ಯವಿರುವ 2 ಕೋಟಿಲಸಿಕೆಯನ್ನು ಜಾಗತಿಕ ಟೆಂಡರ್‌ ಮೂಲಕ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಗೆ ಕ್ರಮ ತೆಗೆದುಕೊಳ್ಳಲಾಗಿದೆಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷರಾದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿದರು.

Advertisement

ಬೆಂಗಳೂರಿನಲ್ಲಿ ಮಂಗಳವಾರ ನಡೆದ ಉನ್ನತಮಟ್ಟದಸಭೆಯ ನಂತರ ಮಾತನಾಡಿ, ಈವರೆಗೂ ಕೇಂದ್ರ ಸರ್ಕಾರಹಂಚಿಕೆ ಮಾಡುತ್ತಿದ್ದ ಲಸಿಕೆಯನ್ನು ಬಿಟ್ಟರೆ ನೇರವಾಗಿಮುಕ್ತ ಮಾರುಕಟ್ಟೆಯಲ್ಲಿ ಟೆಂಡರ್‌ ಕರೆದು ಖಾಸಗಿಕಂಪನಿಗಳಿಂದ ಖರೀದಿ ಮಾಡಿರಲಿಲ್ಲ. ರಾಜ್ಯಕ್ಕೆಅಗತ್ಯವಿರುವ ಲಸಿಕೆ ಪೂರೈಕೆಗಾಗಿ ಇದೇ ಮೊದಲ ಬಾರಿಗೆಜಾಗತಿಕ ಟೆಂಡರ್‌ ಕರೆಯಲು ಸೂಚಿಸಲಾಗಿದ್ದು, ಯಾವಕಂಪನಿ ಬೇಕಾದರೂ ಟೆಂಡರ್‌ನಲ್ಲಿ ಭಾಗವಹಿಸಬಹುದು.

ಏಳು ದಿನದ ಒಳಗಾಗಿ ಈ ಪ್ರಕ್ರಿಯೆ ಮುಗಿಸಿ ಟೆಂಡರ್‌ಪಡೆಯುವ ಕಂಪನಿಯು ಲಸಿಕೆಯನ್ನು ಪೂರೈಕೆಆರಂಭಿಸಬೇಕು. ಮೂರು ಕೋಟಿ ಲಸಿಕೆ ಖರೀದಿಗೆಈಗಾಗಲೇ ಬೇಡಿಕೆ ಸಲ್ಲಿಸಲಾಗಿದೆ. ಇದರಲ್ಲಿ 1 ಕೋಟಿಕೋವ್ಯಾಕ್ಸಿನ್‌, 2 ಕೋಟಿ ಕೋವಿಶೀಲ್ಡ್‌ ಸೇರಿದೆ ಎಂದರು.ಸೋಂಕಿತರಿಗೆ ಅತ್ಯವಶ್ಯವಾಗಿರುವ ಐವರ್‌ವೆುಕ್ಟಿನ್‌ಮಾತ್ರೆಯನ್ನು 10 ಲಕ್ಷ ಖರೀದಿ ಮಾಡಲಾಗಿದ್ದು, ಮೇ14ರಿಂದ ಪೂರೈಕೆ ಶುರುವಾಗಲಿದೆ. ಇನ್ನೂ 25 ಲಕ್ಷ ಮಾತ್ರೆಖರೀದಿಗೆ ಸೂಚಿಸ ಲಾ ಗಿದೆ.

ಇದು ರಾಜ್ಯದ ಎಲ್ಲಆಸ್ಪತ್ರೆಗಳಲ್ಲೂ ಲಭ್ಯ ಇರಬೇಕು. 35 ಲಕ್ಷ ಜಿಂಕ್‌ ಟ್ಯಾಬ್ಲೆಟ್‌ಹಾಗೂ ಒಂದು ಕೋಟಿ ಕಾಲ್ಸಿಚಿನ್‌ ಮಾತ್ರೆಗಳನ್ನೂಕೂಡಲೇ ಖರೀದಿಸಲು ನಿರ್ಧರಿಸಲಾಗಿದೆ ಎಂದುಹೇಳಿದರು.ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಜಾವೇದ್‌ ಅಖ್ತರ್‌, ಔಷಧಿ ಖರೀದಿ ಉಸ್ತುವಾರಿ ಅಂಜುಂಪರ್ವೇಜ್‌, ರಾಜ್ಯ ಔಷಧ ಸರಬರಾಜು ಕಂಪನಿಯವ್ಯವಸ್ಥಾಪಕ ನಿರ್ದೇಶಕಿ ಲತಾ ಕುಮಾರಿ, ಆರೋಗ್ಯಇಲಾಖೆ ನಿರ್ದೇಶಕ ಓಂ ಪ್ರಕಾಶ್‌ ಪಾಟೀಲ್‌ ಸಭೆಯಲ್ಲಿಇದ್ದರು

Advertisement

Udayavani is now on Telegram. Click here to join our channel and stay updated with the latest news.

Next