Advertisement
ಸೌಪರ್ಣಿಕಾ ನದಿಯಾಚೆ ಇರುವ ನಾವುಂದ ಕುದ್ರುವಿನಲ್ಲಿ 7 ಕುಟುಂಬಗಳು ನೆಲೆಸಿದ್ದು, 35ಕ್ಕೂ ಹೆಚ್ಚು ಮಂದಿಯಿದ್ದಾರೆ. ಈ ಪೈಕಿ ಬಹುತೇಕರಿಗೆ ಪ್ರಥಮ ಹಾಗೂ ದ್ವಿತೀಯ ಡೋಸ್ ಲಸಿಕೆಯಾಗಿದೆ. ಆದರೆ 3-4 ಮಂದಿ ವೃದ್ಧರು, ನಡೆದುಕೊಂಡು ಬರಲಾಗದ ಅಶಕ್ತರಿದ್ದು ದೋಣಿ ಮೂಲಕ ಬರಲು ಸಾಧ್ಯವಿರಲಿಲ್ಲ. ಆದ್ದರಿಂದ ಅವರಿದ್ದಲ್ಲಿಗೇ ತೆರಳಿದ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯರಾದ ರಾಜೇಶ್ವರಿ, ಮಿತ್ರಾ ಹಾಗೂ ಆಶಾ ಕಾರ್ಯಕರ್ತೆಯರಾದ ದೇವಕಿ, ಸಾಕು ಅವರು ರಮೇಶ ಕಾರಂತ ಅವರ ದೋಣಿಯಲ್ಲಿ ತೆರಳಿ ಲಸಿಕೆ ಹಾಕುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Related Articles
Advertisement