Advertisement
ಜ.13ರಿಂದ ದೇಶಾ ದ್ಯಂತ ಲಸಿಕೆ ವಿತರಣೆ ಆರಂಭವಾಗಲಿದೆ ಎಂದು ಮಂಗಳವಾರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.ಲಸಿಕೆ ವಿತರಣೆ ನಿರ್ವಹಣ ವ್ಯವಸ್ಥೆ ಯಲ್ಲಿ ಈಗಾಗಲೇ ಆರೋಗ್ಯಸೇವಾ ಮತ್ತು ಮುಂಚೂಣಿ ಕಾರ್ಯಕರ್ತರ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಇವರ್ಯಾರೂ ಹೊಸದಾಗಿ ಲಸಿಕೆಗೆ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಮಂಗಳವಾರ ಜಂಟಿ ಹೇಳಿಕೆ ನೀಡಿದ್ದು, ಲಸಿಕೆಯನ್ನು ಸುಸೂತ್ರವಾಗಿ ದೇಶಕ್ಕೆ ಮತ್ತು ಜಗತ್ತಿಗೆ ಹಂಚುವುದೇ ನಮ್ಮ ಗುರಿ ಎಂದಿವೆ. ಲಸಿಕೆ ನಿಮ್ಮನ್ನು ಹೇಗೆ ತಲುಪುತ್ತದೆ?
01 . ಪುಣೆಯ ಸೀರಂ ಇನ್‌ಸ್ಟಿಟ್ಯೂಟ್, ಹೈದರಾಬಾದ್‌ನ ಭಾರತ್ ಬಯೋ ಟೆಕ್‌ನಲ್ಲಿ ಉತ್ಪಾದನೆ
02. ಮುಂಬಯಿ, ಚೆನ್ನೈ, ಕೋಲ್ಕತ್ತಾ, ಹರಿಯಾಣದ ಕರ್ನಾಲ್‌ನ ಸರಕಾರಿ ವೈದ್ಯಕೀಯ ಕೇಂದ್ರಗಳಿಗೆ ರವಾನೆ
03. ಅಲ್ಲಿಂದ 37 ರಾಜ್ಯ ಲಸಿಕೆ ಕೇಂದ್ರಗಳಿಗೆ ಪ್ರಯಾಣ
04. ರಾಜ್ಯ ಮಟ್ಟದ ಕೇಂದ್ರಗಳಿಂದ ಜಿಲ್ಲಾ ಲಸಿಕೆ ಕೇಂದ್ರಗಳಿಗೆ ಸಾಗಣೆ
05. ಜಿಲ್ಲಾ ಕೇಂದ್ರಗಳಿಂದ ಪ್ರಾ.ಆ. ಕೇಂದ್ರ/ ಕೋವಿಡ್ ಲಸಿಕೆ ಕೇಂದ್ರಕ್ಕೆ ರವಾನೆ
Related Articles
1- ಲಸಿಕೆ ಪಡೆಯುವವರು ಮತ್ತು ಲಸಿಕೆ ವಿತರಿಸುವ ಸಿಬಂದಿಗೆ 12 ಭಾಷೆಗಳಲ್ಲಿ ಎಸ್ಸೆಮ್ಮೆಸ್
2- ಪ್ರತೀ ಡೋಸ್ ನೀಡಿದ ಬಳಿಕ ಕ್ಯುಆರ್ ಕೋಡ್ ಆಧರಿತ ಲಸಿಕೆ ಪ್ರಮಾಣಪತ್ರ ವಿತರಣೆ
3- ಪ್ರಮಾಣಪತ್ರಗಳನ್ನು ಸಂಗ್ರಹಿಸಿಡಲು ಆ್ಯಪ್ ಡಿಜಿಲಾಕರ್ ಬಳಕೆ
4- ದುರ್ಬಳಕೆ ತಪ್ಪಿಸಲು ಆಧಾರ್ ದೃಢೀಕರಣ ಮತ್ತು ವಿಶಿಷ್ಟ ಆರೋಗ್ಯ ಐಡಿ ವ್ಯವಸ್ಥೆ
5- ಕೊವ್ಯಾಕ್ಸಿನ್, ಕೋವಿಶೀಲ್ಡ್ ಸುರಕ್ಷಿತವಾಗಿರಿಸಲು 29,000 ಕೋಲ್ಡ್ ಚೈನ್ ಪಾಯಿಂಟ್
Advertisement
75 ಲಕ್ಷ ಮಂದಿಯ ದತ್ತಾಂಶಪ್ರಸ್ತುತ ಸಾರ್ವಜನಿಕರು ಕೋವಿನ್ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಆಗುವುದಿಲ್ಲ. ಸದ್ಯ ಅಧಿಕಾರಿಗಳಿಗೆ ಮಾತ್ರ ಇದರ ಆ್ಯಕ್ಸೆಸ್ ನೀಡಲಾಗಿದೆ. ಆರಂಭದಲ್ಲಿ ಲಸಿಕೆ ಪಡೆಯಲಿರುವ 75 ಲಕ್ಷ ಆರೋಗ್ಯ ಕಾರ್ಯಕರ್ತರ ದತ್ತಾಂಶವನ್ನು ಕೋವಿನ್‌ನಲ್ಲಿ ಸಂಗ್ರಹಿಸಿಡಲಾಗಿದೆ. ಸರಕಾರದಿಂದ ಶಿಬಿರ?
ಕೋವಿನ್ ಆ್ಯಪ್‌ನಲ್ಲಿ ನೋಂದಣಿಗೆ 3 ಆಯ್ಕೆಗಳನ್ನು ನೀಡಲಾಗಿರುತ್ತದೆ. ಇವುಗಳ ಮೂಲಕ ಜನರು ಲಸಿಕೆಗೆ ನೋಂದಾಯಿಸಿಕೊಳ್ಳಬಹುದು. ಈ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸರಕಾರವೇ ವಿವಿಧ ಸ್ಥಳಗಳಲ್ಲಿ ಶಿಬಿರಗಳನ್ನು ಆಯೋಜಿಸುವ ಸಾಧ್ಯತೆಯಿದ್ದು, ಜನರು ಅಂಥ ಶಿಬಿರಗಳಿಗೆ ತೆರಳಿ ನೋಂದಣಿ ಮಾಡಿಸಿಕೊಳ್ಳಲು ಅವಕಾಶ ನೀಡಬಹುದು. ಮೊದಲನೇ ಹಂತದಲ್ಲಿ 2,73,211 ಸರಕಾರಿ ಮತ್ತು 3,57,313 ಖಾಸಗಿ ಸಹಿತ ಒಟ್ಟು 6,30,524 ಅರೋಗ್ಯ ಕಾರ್ಯಕರ್ತರನ್ನು ಗುರುತಿಸಲಾಗಿದೆ.
-ಡಾ| ಕೆ. ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ